ಹಕ್ಕಿಪಿಕ್ಕಿ ಸಮುದಾಯ ಹಾಗೂ ಕುಂಚಿ ಕೊರವರ ಸಮುದಾಯಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಸಹಜ ಜೀವನಕ್ಕೆ ನೆರವಾಗುವಂತೆ ಕೋರಿದರು
ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ ನಗರದ ಸಮೀಪದಲ್ಲಿಯೇ ಇರುವ ಬಲ್ದೋಟ ಕಾರ್ಖಾನೆ ವಿಸ್ತರಣೆಯಿಂದ ಉಂಟಾಗುವ ಸಮಸ್ಯೆ ಅದರ ಜತೆಗೆ ಈಗಾಗಲೇ ಇರುವ ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದಸುಮಿ, ವನ್ಯಾ, ಭದ್ರಾ ಮೊದಲಾದ ಕಾರ್ಖಾನೆಗಳ ಬಾಧಿತ ಪ್ರದೇಶದ ಮಹಿಳೆಯರ ಮತ್ತು ಯುವತಿಯರ ಆರೋಗ್ಯ ಮತ್ತು ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿಗೆ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ.ಗೊಂಡಬಾಳ ಮನವಿ ಮಾಡಿದರು.
ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿರುವ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದ್ರಿ ಅವರನ್ನು ನಗರದಲ್ಲಿ ಗುರುವಾರ ಭೇಟಿಯಾಗಿ ಅಂಬೇಡ್ಕರ್ ಕೃತಿ ನೀಡಿ ಗೌರವಿಸಿ ಮಹಿಳಾ ಆಯೋಗ ಮಾಡುತ್ತಿರುವ ಕಾರ್ಯ ಶ್ಲಾಘಿಸಿ ಮನವಿ ಪತ್ರ ಸಲ್ಲಿಸಿದರು. ನಗರದಲ್ಲಿರುವ ಹಕ್ಕಿಪಿಕ್ಕಿ ಸಮುದಾಯ ಹಾಗೂ ಕುಂಚಿ ಕೊರವರ ಸಮುದಾಯಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಸಹಜ ಜೀವನಕ್ಕೆ ನೆರವಾಗುವಂತೆ ಕೋರಿದರು.ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ ನೌಕರರು ಉತ್ತಮ ಕೆಲಸದ ಪರಿಸರ ಖಾತ್ರಿಪಡಿಸುವಂತೆ ವಿನಂತಿಸಿದರು. ಜಿಲ್ಲೆಯ ಮಹಿಳಾ ಹಾಸ್ಟೆಲ್ ಹಾಗೂ ನೌಕರಸ್ಥ ಮಹಿಳೆಯರ ಹಾಸ್ಟೆಲ್ ಗಳಲ್ಲಿ ಇನ್ನಷ್ಟು ಹೆಚ್ಚಿನ ಸೌಕರ್ಯಗಳು ದೊರಕುವಂತೆ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಡಿಸಿಸಿ ಸದಸ್ಯೆ ಸುಮಂಗಲ ನಾಯಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.