ಸಾರಾಂಶ
ವಿಜಯಪುರ: ಜಿಲ್ಲಾದ್ಯಂತ ಹಲವು ಕಡೆಗಳಲ್ಲಿ ವಿದ್ಯುತ್ ಕಂಬದ ಕೆಳಗೆ ರಸ್ತೆ ಬದಿಯಲ್ಲಿ ಗಿಡಗಳು ಹಚ್ಚಿರುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತಿದ್ದು, ಸಮಸ್ಯೆನ್ನು ಬಗೆಹರಿಸುವಂತೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಮಾಡುವಂತೆ ಆಗ್ರಹಿಸಿ ರೈತ ಸಂಘದಿಂದ ಅಪರ್ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ:
ಜಿಲ್ಲಾದ್ಯಂತ ಹಲವು ಕಡೆಗಳಲ್ಲಿ ವಿದ್ಯುತ್ ಕಂಬದ ಕೆಳಗೆ ರಸ್ತೆ ಬದಿಯಲ್ಲಿ ಗಿಡಗಳು ಹಚ್ಚಿರುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತಿದ್ದು, ಸಮಸ್ಯೆನ್ನು ಬಗೆಹರಿಸುವಂತೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಮಾಡುವಂತೆ ಆಗ್ರಹಿಸಿ ರೈತ ಸಂಘದಿಂದ ಅಪರ್ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ (ಬ್ಯಾಲ್ಯಾಳ), ಗೌರವಾಧ್ಯಕ್ಷ ಕಲ್ಲಪ್ಪನಗೌಡ ಪಾರಶೆಟ್ಟಿ, ತಾ.ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ತಾ.ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗೋಡೇಕಾರ, ಮುಖಂಡರಾದ ಹೊನಮಲ್ಲ ಸಾರವಾಡ, ರಾಜಕುಮಾರ ಹೊನ್ನಳ್ಳಿ, ಶಿವರಾಜ ಕುಮಟಗಿ ಸೇರಿದಂತೆ ಇತರರು ಇದ್ದರು.