ಕರ್ನಾಟಕ ರೈತ ಸೇನೆ ಪದಾಧಿಕಾರಿಗಳ ಮನವಿ ಸ್ವೀಕರಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಮಹದಾಯಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ನರಗುಂದ: ಉತ್ತರ ಕರ್ನಾಟಕ ಭಾಗದ ರೈತರ ನಾಲ್ಕು ದಶಕದ ಕನಸಾದ ಮಹದಾಯಿ ಯೋಜನೆ ಜಾರಿಗೊಳಿಸಬೇಕೆಂದು ಕರ್ನಾಟಕ ರೈತಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಅವರು ಸಿಎಂಗೆ ಆಗ್ರಹಿಸಿದರು.
ಕರ್ನಾಟಕ ರೈತಸೇನೆ ಆಶ್ರಯದಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಮಹದಾಯಿ ಯೋಜನೆ ಬಹುವರ್ಷದಿಂದ ಈ ಭಾಗದ ರೈತರ ಬೇಡಿಕೆಯಾಗಿದೆ. ಕೂಡಲೇ ಅಡೆತಡೆಗಳನ್ನು ಪರಿಹರಿಸಿ ಯೋಜನೆ ಪ್ರಾರಂಭಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.ಅದೇ ರೀತಿ ಪಟ್ಟಣದಲ್ಲಿ 1980ರಲ್ಲಿ ರೈತರ ಚಳವಳಿಯಲ್ಲಿ ಗುಂಡಿಗೆ ಬಲಿಯಾದ ನರಗುಂದ ರೈತರ ಸ್ಮಾರಕ ಮತ್ತು ಭವನಕ್ಕಾಗಿ ಸ್ಥಳ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರೈತ ಸೇನೆ ಪದಾಧಿಕಾರಿಗಳ ಮನವಿ ಸ್ವೀಕರಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಮಹದಾಯಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.ರೈತ ಮುಖಂಡರಾದ ವೀರಣ್ಣ ಸೊಪ್ಪಿನ, ಶಂಕರಗೌಡ ಪಾಟೀಲ, ಮನೋಹರ ಹುಯಿಲಗೋಲ, ಚನ್ನು ನಂದಿ, ನಬಿಸಾಬ ಕಿಲ್ಲೇದಾರ, ಸೇರಿದಂತೆ ಮುಂತಾದವರು ಇದ್ದರು. ಮಳೆಗಾಗಿ ಕೋರೆಮ್ಮ ದೇವಿಗೆ ಮೊರೆ
ಲಕ್ಷ್ಮೇಶ್ವರ: ಮಳೆಗೆ ಪ್ರಾರ್ಥಿಸಿ ಪಟ್ಟಣದ ಸೊಪ್ಪಿನಕೇರಿ ಓಣಿಯ ರೈತರು ಹಾಗೂ ಅಡರಕಟ್ಟಿ ಗ್ರಾಮಸ್ಥರು ಕೋರೆಮ್ಮನಿಗೆ ಪೂಜೆ ಮಾಡಿ ಪ್ರಾರ್ಥಿಸಿದರು.ಸಾರ್ವಜನಿಕರಿಗೆ ಜೋಳದ ಕಿಚಡಿ, ಗೋದಿ ಹುಗ್ಗಿ, ಬದನೆಕಾಯಿ ಪಲ್ಯ ಹಾಗೂ ಅನ್ನ ಸಾಂಬಾರ ಪ್ರಸಾದದ ವ್ಯವಸ್ಥೆ ಮಾಡಿ ವರುಣನ ಕೃಪೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.ತಾಲೂಕಿನಲ್ಲಿ ಮಳೆಗಾಗಿ ರೈತರು ಕಪ್ಪೆ ಮದುವೆ, ಗುರ್ಜಿ ಪೂಜೆ, ಕತ್ತೆಗಳ ಮೆರವಣಿಗೆ ಸೇರಿದಂತೆ ವಿವಿಧ ದೇವರಿಗೆ ಮೊರೆ ಹೋಗಿ ಪೂಜಾ ಕೈಂಕರ್ಯಗಳು ನೆರವೇರಿಸಿದ್ದಾರೆ. ಆದರೂ ಮುಂಗಾರು ಹಂಗಾಮಿನಲ್ಲಿ ಮಳೆಯು ಕಣ್ಣಾಮುಚ್ಚಾಲೆ ಆಡುತ್ತಾ ರೈತರಲ್ಲಿ ಆತಂಕ ಮೂಡಿಸಿದೆ.ರೈತರು ಬಿತ್ತನೆ ಮಾಡಿದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು, ಮೆಕ್ಕೆ ಜೋಳ, ಶೇಂಗಾ, ಬಿಟಿ ಹತ್ತಿ, ಬೆಳ್ಳುಳ್ಳಿ, ಸೋಯಾ, ಮೆಣಸಿನಕಾಯಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳ ಮೊಳಕೆಯೊಡೆದು ಬೆಳೆದ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡಿ ಹೋಗುವ ಹಂತಕ್ಕೆ ತಲುಪಿದ್ದರೂ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ರೈತರು ಬೆಳೆ ಉಳಿಸಿಕೊಳ್ಳಲು ಪಡಬಾರದ ಕಷ್ಟಪಡುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಹಾಯಿಸುವುದು, ಹಳ್ಳದ ನೀರನ್ನು ಮೋಟರ್ ಮೂಲಕ ತಂದು ತುಂತುರು ನೀರಾವರಿ ಮಾಡಿದ ಉದಾಹರಣೆಗಳು ಕಾಣಸಿಗುತ್ತವೆ. ಅದರೂ ಮಳೆ ಮಾತ್ರ ಭೂಮಿಯತ್ತ ಇಣುಕಿ ನೋಡುತ್ತಿಲ್ಲ.
ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತಿದ ಬೀಜಗಳು ಮೊಳಕೆಯೊಡೆದು ಮೇಲೆ ಎದ್ದಿದ್ದೆ ಬಂತು. ನಳನಳಿಸಬೇಕಾದ ಬೇಕಾದ ಬೆಳೆಗಳು ಮತ್ತೆ ನೆಲದತ್ತ ಮುಖ ಮಾಡಿ ಒಣಗುತ್ತಿವೆ.