ಶೃಂಗೇರಿ ಕ್ಷೇತ್ರಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ

ಕನ್ನಡಪ್ರಭ ವಾರ್ತೆ, ಕೊಪ್ಪ: ೨೦೨೩ರ ಮೇ ೧೩ರಂದು ನಡೆದ ಶೃಂಗೇರಿ ಕ್ಷೇತ್ರದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪಾರದರ್ಶಕವಾಗಿಲ್ಲ ಎಂದು ಮತ ಎಣಿಕೆ ದಿನವೆ ಮನವಿ ಸಲ್ಲಿಸಿದರೂ ಅದನ್ನು ಪುರಸ್ಕರಿಸದೆ ರಾಜೇಗೌಡರಿಗೆ ಗೆಲುವಿನ ಸರ್ಟಿಫಿಕೇಟ್ ನೀಡಿದ್ದರು. ಇದನ್ನು ಪ್ರಶ್ನಿಸಿ ನಾನು ನ್ಯಾಯಾಲಯಕ್ಕೆ ಹೋಗಿದ್ದು ನಿಜ ಎಂದು ಮಾಜಿ ಶಾಸಕ ಡಿ.ಎನ್. ಜೀವರಾಜ್ ಹೇಳಿದರು.ಬಿಜೆಪಿ ಕೊಪ್ಪ ಮಂಡಲದ ಅಧ್ಯಕ್ಷ ಎಚ್.ಕೆ. ದಿನೇಶ್ ಅಧ್ಯಕ್ಷತೆಯಲ್ಲಿ ಪುರಭವನದಲ್ಲಿ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಬಿಜೆಪಿ ಕಾರ್ಯಕರ್ತರ ಮತ್ತು ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿ ಕಡಿಮೆ ಮತಗಳ ಅಂತರದಲ್ಲಿ ಸೋತ ಅಭ್ಯರ್ಥಿಗಳ ಮನವಿಗೆ ಉತ್ತರಿಸುವ ಮೊದಲು ಯಾರಿಗೂ ಸರ್ಟಿಫಿಕೇಟ್ ನೀಡುವಂತಿಲ್ಲ ಎಂದರು. ಉಚ್ಚ ನ್ಯಾಯಾಲಯದಲ್ಲಿ ಮರು ಎಣಿಕೆ ಮಾತ್ರ ಕೆಳದೆ ರಾಜೇಗೌಡರ ಆಸ್ತಿ ಸಂಬಂದ ವಿಚಾರ ಪ್ರಸ್ತಾಪಿಸಿದ್ದೆ ಅದರೆ ರಾಜೆಗೌಡರು ಮಾತ್ರ ಅಂಚೆಮತಗಳ ಮರು ಎಣಿಕೆಗೆ ತಡೆ ನೀಡುವಂತೆ ಕೊರಿದ್ದರು. ಮೇ ೨ರಂದು ಅಂಚೆಮತಗಳ ಮರುಎಣಿಕೆ ನಡೆದು ನನಗೆ ಪ್ರಮಾಣ ವಚನ ಬೋಧನೆಯಾದ ಮೇಲೆ ಸುಪ್ರೀಂ ಕೊಟ್‌ನಲ್ಲಿ ಟಿ.ಡಿ. ರಾಜೇಗೌಡ ಆರ್ಜಿ ಸಲ್ಲಿಸಿದ್ದರಿಂದ ಮುಂದಿನ ಆದೇಶದವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮಧ್ಯಂತರ ಆದೇಶ ನೀಡಿದೆಯೇ ಹೊರತು ಖಾಯಂ ತೀರ್ಪಲ್ಲ. ನಮಗೆ ನ್ಯಾಯಲಯದ ಬಗ್ಗೆ ಗೌರವವಿದೆ. ಕಾಯುತ್ತೇವೆ. ಸೋಲು ಗೆಲುವು ಎರಡೂ ಅನುಭವವಿದೆ. ಯಾವುದೇ ಬೆದರಿಕೆಗೂ ಬೆನ್ನು ತೋರಿಸಿ ಹೋಗುವವನಲ್ಲ ಎಂದರು.ಕೊಪ್ಪ ಬಿಜೆಪಿ ಮಂಡಲದ ಅಧ್ಯಕ್ಷ ಎಚ್.ಕೆ. ದಿನೇಶ್ ಅಧ್ಯಕ್ಷೀಯ ಭಾಷಣದಲ್ಲಿ ಕಳೆದ 3 ದಿನಗಳ ಹಿಂದೆ ಕೇವಲ ವಾಟ್ಸ್ಆಪ್ ಸಂದೇಶ ನೀಡಿದ್ದಕ್ಕಾಗಿ ಇಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು ಜೀವರಾಜ್ ಜನಪ್ರಿಯತೆಗೆ ಸಾಕ್ಷಿ ಎಂದರು.ಈ ಹಿಂದೆ ಸಣ್ಣಮಟ್ಟದ ಕಾರ್ಯಕರ್ತನಿಗೆ ತೊಂದರೆಯಾದಾಗ ಕೊಪ್ಪ ಠಾಣೆಯಲ್ಲಿ ಬೆಳಗಿನವರೆಗೂ ಪ್ರತಿಭಟನೆ ಮಾಡಿದ ಜೀವರಾಜ್ ನಾಯಕತ್ವ ನಮಗೆ ಬೇಕು. ಅವರ ನೇತೃತ್ವದಲ್ಲಿ ೨೦೨೮ ಚುನಾವಣೆ ನಡೆಯಲಿದೆ ಎಂದರು.ನರಸಿಂಹರಾಜಪುರ ಮಂಡಲ ಅಧ್ಯಕ್ಷ ನಿಲೇಶ್, ಶೃಂಗೇರಿ ಅಧ್ಯಕ್ಷ ಉಮೇಶ್, ಡಾ.ಮಹಾಬಲ, ಜಿಲ್ಲಾ ಕಾರ್ಯದರ್ಶಿ ಪುಣ್ಯಪಾಲ್, ಹರೀಶ್ ಶೆಟ್ಟಿ ಮುಂತಾದವರು ಮಾತನಾಡಿದರು. ಬಿ.ಎನ್. ಬೀಷೆಜ್, ನಗರಾಧ್ಯಕ್ಷ ದಿವಾಕರ್, ಬಿಜೆಪಿ ವಕ್ತಾರ ಎಚ್.ಆರ್. ಜಗದೀಶ್, ಶಿವಣ್ಣ, ಅರುಣ್ ಶಿವಪುರ, ಸುರೇಶ್ ಕಣಗಲ್, ಶೃತಿ ರೋಹಿತ್, ಭಾಸ್ಕರ್ ವೆನಿಲ್ಲಾ, ನವೀನ್ ಕುಮಾರ್, ಮಣಿಕಂಠನ್ ಕಂದಸ್ವಾಮಿ ಸೇರಿದಂತೆ ಬಾಜಪ ೩ ತಾಲೂಕುಗಳ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.