ಕುಕನೂರು: ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ವ್ಯವಸಾಯ ವೃತ್ತಿಪರ ಯೂನಿಯನ್ ವತಿಯಿಂದ ತಹಸೀಲ್ದಾರ್ ಮೂಲಕ ಸಿಎಂಗೆ ಮಹಿಳಾ ಕೂಲಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.

ಪ್ರಮುಖ ಬೇಡಿಕೆಗಳಾದ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮತ್ತು ಪುರುಷರಿಗೆ ಸಮಾನ ಕೂಲಿ ಮತ್ತು ಕನಿಷ್ಠ ಕೂಲಿ 850 ದೃಢೀಕರಿಸಬೇಕು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಅತ್ಯಾಚಾರ ಮತ್ತು ಕೌಟುಂಬಿಕ ದೌರ್ಜನ್ಯಗಳಿಗೆ ಕಾರಣವಾಗಿರುವ ಮಧ್ಯದ ಅಂಗಡಿ ನಿಷೇಧಿಸಬೇಕು ದಲಿತ ಮಹಿಳೆಯರಿಗೆ 5 ಎಕರೆ ಭೂಮಿ ಸರ್ಕಾರ ನೀಡಬೇಕು, 55 ವರ್ಷ ಪೂರೈಸಿದ ಪ್ರತಿ ಮಹಿಳೆಯರಿಗೆ ಪಿಂಚಣಿ ಐದು ಸಾವಿರ ನೀಡಬೇಕು. ಮಹಿಳೆಯರಿಗಾಗಿ ಅಸ್ತಿ ಹಕ್ಕು ಕಾನೂನು ಪ್ರಚಾರ ಮಾಡಬೇಕು. ಪ್ರಮುಖ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಯಲ್ಲಪ್ಪ ಮ್ಯಾಗಳಕೇರಿ, ತಾಲೂಕು ಸಂಯೋಜಕ ಲಲಿತಾ ಭಜಂತ್ರಿ, ಸುಂಕಪ್ಪ ಮಿಸಿ, ಶೈಲಜಾ ಬೆಲ್ಲದ ಇತರರಿದ್ದರು.