ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಲು ಮನವಿ

| Published : Oct 30 2025, 02:30 AM IST

ಸಾರಾಂಶ

ಗದುಗಿನಿಂದ ಶಲವಡಿ ಮಾರ್ಗವಾಗಿ ನರಗುಂದಕ್ಕೆ ಮತ್ತು ನರಗುಂದದಿಂದ ಶಲವಡಿ ಮಾರ್ಗವಾಗಿ ಗದುಗಿಗೆ ಹೊರಡಲು ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಬಸ್ಸುಗಳ ಸಂಚಾರ ಸರಿಯಾಗಿಲ್ಲದ ಕಾರಣ ನೌಕರರಿಗೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆ ಆಗುತ್ತಿದೆ.

ನರಗುಂದ: ನೌಕರರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಮತ್ತು ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೊರಡಲು ಅನುಕೂಲವಾಗುವಂತೆ ಬಸ್‌ಗಳ ಹೆಚ್ಚಳ ಹಾಗೂ ಸಮಯಾನುಸಾರ ಜೋಡಣೆ ಮಾಡಬೇಕೆಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಸ್. ಅಸುಂಡಿ ಅವರು ಸಾರಿಗೆ ಇಲಾಖೆಯ ಜಿಲ್ಲಾ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು.

ಗದಗ ವಿಭಾಗದ ಜಿಲ್ಲಾ ಸಾರಿಗೆ ನಿಯಂತ್ರಣ ಅಧಿಕಾರಿಗಳಿಗೆ ನರಗುಂದ ಘಟಕ ವ್ಯವಸ್ಥಾಪಕರ ಮೂಲಕ ಮನವಿ ಅರ್ಪಿಸಿ ಮಾತನಾಡಿ, ಗದುಗಿನಿಂದ ಶಲವಡಿ ಮಾರ್ಗವಾಗಿ ನರಗುಂದಕ್ಕೆ ಮತ್ತು ನರಗುಂದದಿಂದ ಶಲವಡಿ ಮಾರ್ಗವಾಗಿ ಗದುಗಿಗೆ ಹೊರಡಲು ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಬಸ್ಸುಗಳ ಸಂಚಾರ ಸರಿಯಾಗಿಲ್ಲದ ಕಾರಣ ನೌಕರರಿಗೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಬಸ್ ಅನಾನುಕೂಲತೆಯಿಂದ ಕಚೇರಿಯಲ್ಲಿ ಕೆಲಸ ಮಾಡಲು ಅಡಚಣೆ ಆಗುತ್ತಿದೆ. ಕೆಲಸ ಮುಗಿಸಿ ಮರಳಿ ಊರಿಗೆ ತೆರಳಲು ಬಸ್ ಇರದಕ್ಕೆ ಎಲ್ಲೆಲ್ಲೋ ಸುತ್ಹಾಕಿ ಊರು ಮುಟ್ಟುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನ ಗುಡ್ಡಕ್ಕೆ ತೆರಳುವ ಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಸ್‌ಗಳ ಕೊರತೆ ಕಾಡುವ ಸಂಭವವಿದೆ. ಜಿಲ್ಲಾ ನಿಯಂತ್ರಣಾಧಿಕಾರಿಗಳು ಎಲ್ಲರಿಗೂ ಅನುಕೂಲ ಆಗುವಂತೆ ಬಸ್‌ಗಳ ವ್ಯವಸ್ಥೆ ಮತ್ತು ಸಮಯ ಸರಿಯಾಗಿ ಜೋಡಣೆ ಮಾಡಬೇಕೆಂದು ಸಿಟಿ ಸರ್ವೇ ಅಧಿಕಾರಿ ಮಂಜುನಾಥ ಪಾಟೀಲ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್.ಆರ್. ಅಂಗಡಿ, ಪಿ.ವಿ. ಕೆಂಚನಗೌಡ್ರ, ಪ್ರವೀಣ ನಾಂಬೆ, ಶ್ರೀಧರ ಅಂಗಡಿ, ನಿಂಗಪ್ಪ ನಾಯ್ಕರ ಇತರರಿದ್ದರು.