ಸಾರಾಂಶ
ಸಚಿವ ಅರ್ಜುನ್ ರಾಮ್ ಮೇಘವಾಲ್ ಹುಬ್ಬಳ್ಳಿ ಭೇಟಿ ಸಂದರ್ಭದಲ್ಲಿ ವಿಮಾನ ಆರಂಭಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಅಹಮದಾಬಾದ್, ಜೋಧ್‌ಪುರ ಮತ್ತು ಗೋವಾಕ್ಕೆ ವಿಮಾನ ಸೇವೆಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ವ್ಯಾಪಾರಿಗಳ ಸಂಘ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಮನವಿ ಸಲ್ಲಿಸಿದರು.
ನಗರಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ಅಭಿಷೇಕ್ ಮೆಹ್ತಾ, ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ ಡಂಕ್, ದೇವಸಿ ಸಮುದಾಯದ ಅಧ್ಯಕ್ಷ ನೇತಿರಾಮ್ ದೇವಸಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿ, ಕಳೆದ 3 ವರ್ಷಗಳಿಂದ ಬಂದ್ ಆಗಿರುವ ಅಹಮದಾಬಾದ್ ಮತ್ತು ಗೋವಾಕ್ಕೆ ವಿಮಾನ ಸೇವೆಗಳನ್ನು ಪುನರಾರಂಭಿಸುವಂತೆ ಮತ್ತು ಹುಬ್ಬಳ್ಳಿಯಿಂದ ಜೋಧ್‌ಪುರಕ್ಕೆ ವಿಮಾನ ಸೇವೆ ಪ್ರಾರಂಭಿಸುವಂತೆ ಒತ್ತಾಯಿಸಿತು.ಈ ವೇಳೆ ಭೋಪ ರಾಮ್, ಹರ್ಚಂದ್ ರಾಮ್, ಮೋಹನ್ ಕಾರ್ಗಟ, ಥಾಪನ್ ಮತ್ತು ಇತರರು ಉಪಸ್ಥಿತರಿದ್ದರು.