ಬಳ್ಳಾರಿ-ಸಿಂಧನೂರು-ಲಿಂಗಸೂಗೂರು ನೂತನ ರೈಲ್ವೆ ಮಾರ್ಗ ಆರಂಭಿಸಲು ಮನವಿ

| Published : Aug 13 2025, 12:30 AM IST

ಬಳ್ಳಾರಿ-ಸಿಂಧನೂರು-ಲಿಂಗಸೂಗೂರು ನೂತನ ರೈಲ್ವೆ ಮಾರ್ಗ ಆರಂಭಿಸಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ-ಸಿಂಧನೂರು-ಲಿಂಗಸೂಗೂರು ನೂತನ ರೈಲ್ವೆ ಮಾರ್ಗ ಆರಂಭಿಸುವ ಕುರಿತು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಹಾಗೂ ರೈಲ್ವೆ ಮಾರ್ಗಕ್ಕೆ ಜಮೀನು ಮಂಜೂರು ಮಾಡಬೇಕು ಎಂದು ಕೋರಿ ಶಾಸಕ ಬಿ.ಎಂ. ನಾಗರಾಜ್ ನೇತೃತ್ವದಲ್ಲಿ ರೈಲ್ವೆ ಕ್ರಿಯಾ ಸಮಿತಿಯ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸಿರುಗುಪ್ಪ

ಬಳ್ಳಾರಿ ಸಿರುಗುಪ್ಪ ಸಿಂಧನೂರು ನೂತನ ರೈಲ್ವೆ ಮಾರ್ಗದ ಸರ್ವೆ ಕೆಲಸ 2013 ಮತ್ತು 2014 ರಲ್ಲಿ ಆಗಿನ ರೈಲ್ವೆ ಮಂತ್ರಿಗಳಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸದಾನಂದ ಗೌಡ ಇವರಿಂದ ಲೋಕಸಭೆಯ ರೈಲ್ವೆ ಬಜೆಟ್‌ನಲ್ಲಿ ಮಂಡನೆಯಾಗಿದ್ದು, ಈ ರೈಲ್ವೆ ಮಾರ್ಗದ ಆರಂಭದಿಂದ

ಚಾಮರಾಜನಗರ, ಮೈಸೂರು, ಬೆಂಗಳೂರು, ಚಿತ್ರದುರ್ಗ, ಬಳ್ಳಾರಿಯಿಂದ ಸಿರುಗುಪ್ಪ ಹಾಗೂ ಸಿಂಧನೂರು ಮಾರ್ಗವಾಗಿ ರಾಯಚೂರು ಹಾಗೂ ಗುಲ್ಬರ್ಗಕ್ಕೆ ಹೋಗುವ ರೈಲ್ವೆ ಮಾರ್ಗ ಇದಾಗಿದೆ. ಈ ಮಾರ್ಗ ಸಂಪೂರ್ಣ ಕರ್ನಾಟಕದ ಉದ್ದನೆ ಮಾರ್ಗವಾಗುತ್ತದೆ. ಸಿರುಗುಪ್ಪ ತಾಲೂಕಿನಲ್ಲಿ ರೈತರು ಬೆಳೆಯುವ ಉತ್ತಮ ತಳಿಯ ಭತ್ತವನ್ನು ದೇಶದ ನಾನಾ ಭಾಗಗಳಿಗೆ ಸಾಗಾಣಿಕೆ ಮಾಡುವುದಕ್ಕೂ, ಈ ಭಾಗದ ಜನರ ಪ್ರಯಾಣಕ್ಕೂ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ರೈಲ್ವೆ ಇಲಾಖೆಗೂ ಕೂಡಾ ವರಮಾನ ಬರುತ್ತದೆ ಎಂದು ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ಮುಖ್ಯಮಂತ್ರಿಗೆ ನಿಯೋಗದ ಅಭಿಪ್ರಾಯ ತಿಳಿಸಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ನೂತನ ರೈಲ್ವೆ ಮಾರ್ಗದಿಂದಾಗುವ ಅನುಕೂಲಗಳು ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ ಕುರಿತು ನಿಯೋಗದ ಸದಸ್ಯರ ಜೊತೆ ಚರ್ಚಿಸಿದರು. ನೂತನ ರೈಲ್ವೆ ಮಾರ್ಗಕ್ಕೆ ಬೇಕಾಗುವ ಪೂರಕ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಲಿದ್ದು, ಕೇಂದ್ರ ಸರ್ಕಾರ ಮಂಜೂರಾತಿ ನೀಡಿದಲ್ಲಿ ಮುಂದಿನ ಹಂತದ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಅನುದಾನದ ಜತೆಗೆ ರೈಲ್ವೆ ಮಾರ್ಗಕ್ಕೆ ಬೇಕಾದ ಭೂಮಿ ನೀಡಲಾಗುವುದು ಎಂದು ಭರವಸೆ ನೀಡಿದರು. ಪಿ.ಯೋಗರಾಜ್ ಬಾಗೋಡಿ, ಜಿ.ಶಂಭುಲಿಂಗಯ್ಯ ಗಾಣದಾಳ ಮಠ, ಲಿಂಗನಗೌಡ, ಕಣ್ಣಿ ಶರಣಬಸಪ್ಪ ಮತ್ತಿತರರಿದ್ದರು.