ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದಬ್ಬಾಳಿಕೆ ತಡೆಗೆ ಮನವಿ

| Published : Aug 10 2024, 01:39 AM IST

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದಬ್ಬಾಳಿಕೆ ತಡೆಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಗ್ಲಾದೇಶದ ಅಮಾಯಕ ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರ ಹಾಗೂ ದೇವಾಲಯಗಳನ್ನು ಹಾಳು ಮಾಡುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ನಾಗರಿಕರು ಗುರುವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ಬಾಂಗ್ಲಾದೇಶದ ಅಮಾಯಕ ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರ ಹಾಗೂ ದೇವಾಲಯಗಳನ್ನು ಹಾಳು ಮಾಡುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ನಾಗರಿಕರು ಗುರುವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ಬಾಂಗ್ಲಾದೇಶದ ಕಾನೂನು-ಸುವ್ಯವಸ್ಥೆ ಹಾಳಾಗಿ ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರ ಹಿಂಸೆಯನ್ನು ನೋಡಿ ಅತೀವ ದುಃಖವಾಗಿದೆ. ಬಾಂಗ್ಲಾದೇಶ ಒಂದು ಜಾತ್ಯತೀತ ರಾಷ್ಟ್ರವಿದ್ದು, ಕಟ್ಟರ್ ಮುಸ್ಲಿಮರು ಈ ರೀತಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧ. ಕೂಡಲೇ ತಾವು ಇದರ ಬಗ್ಗೆ ಕ್ರಮ ಜರುಗಿಸಿ ಹಿಂದೂಗಳು ದೌರ್ಜನ್ಯಕ್ಕೆ ಒಳಗಾದವರನ್ನು ರಕ್ಷಣೆ ಮಾಡಿ, ಸಿಎಎ ಕಾನೂನಿನ ಅಡಿಯಲ್ಲಿ ಭಾರತಕ್ಕೆ ಕರೆ ತರಬೇಕು. ಇದರೊಂದಿಗೆ ಎನ್‌ಆರ್‌ಸಿ ಜಾರಿ ಮಾಡಿ ಭಾರತವನ್ನು ನುಸುಳುಕೋರರಿಂದ ರಕ್ಷಣೆ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ನಗರಸಭೆ ಸದಸ್ಯ ನಾಗರಾಜ ಪವಾರ, ಮುಖಂಡರಾದ ನಾಗರಾಜ ಬಣಕಾರ, ಬಸವರಾಜ ಪಾಟೀಲ, ಪ್ರಭುಸ್ವಾಮಿ ಕರ್ಜಗಿಮಠ, ಎಂ.ಎಸ್. ಪಟ್ಟಣಶೆಟ್ಟಿ, ಬಸವರಾಜ ಹುಲ್ಲತ್ತಿ, ನಾಗರಾಜ ಸಾಲಗೇರಿ, ಜಗದೀಶ ಎಲಿಗಾರ, ರಾಯಣ್ಣ ಮಾಕನೂರು, ಅಶೋಕ ಪಾಸಿಗಾರ, ಶಿವಕುಮಾರ ಹಾರ್ಕನಾಳ, ಮೈಲಪ್ಪ ಗೋಣಿಬಸಬಸಮ್ಮನವರ ಮತ್ತಿತರರಿದ್ದರು.