ಸಾರಾಂಶ
ಕಸ ಹಾಕದೆ ಗ್ರಾಮ ನೈರ್ಮಲ್ಯ ಕಾಪಾಡಿ ಸಾಂಕ್ರಾಮಿಕಗಳಾದ ಡೆಂಘೀ, ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಕಾರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ರಮೇಶ್ ಸಲಹೆ ನೀಡಿದರು. ಕುಂದಾಣ ಗ್ರಾಮ ಸಭೆಯಲ್ಲಿ ಮಾತನಾಡಿದರು.
-ಕಾರಹಳ್ಳಿ ಗ್ರಾಪಂ ಮೊದಲ ಹಂತದ ಗ್ರಾಮ ಸಭೆಯಲ್ಲಿ ಸಲಹೆಕುಂದಾಣ: ಗ್ರಾಮದ ಪ್ರತಿಯೊಬ್ಬರೂ ತಮ್ಮ ಮನೆಗಳ ಅಕ್ಕಪಕ್ಕದ ಚರಂಡಿಗಳಿಗೆ ಕಸ ಹಾಕದೆ ಗ್ರಾಮ ನೈರ್ಮಲ್ಯ ಕಾಪಾಡಿ ಸಾಂಕ್ರಾಮಿಕಗಳಾದ ಡೆಂಘೀ, ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಕಾರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ರಮೇಶ್ ಸಲಹೆ ನೀಡಿದರು.
ಹೋಬಳಿಯ ಕಾರಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ೨೦೨೪-೨೫ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ, ಗ್ರಾಮ ಸಭೆಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ್ದೇವೆ. ಅದನ್ನು ಪಂಚಾಯತಿ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವರು ಎಂದರು.
ಪಿಡಿಒ ಬಿ.ಎಂ.ದಿಲೀಪ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ಬೀದಿ ದೀಪ, ಸ್ವಚ್ಛತೆ, ಘನ ತ್ಯಾಜ್ಯ ವಿಲೇವಾರಿ ಘಟಕ, ಡಿಜಿಟಲ್ ಲೈಬ್ರರಿ, ಮಕ್ಕಳ ಗ್ರಾಮಸಭೆ, ಹಲವಾರು ಸರ್ಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.ಗ್ರಾಮ ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲಾ ವಿಶೇಷಚೇತನರಿಗೆ ಸೋಲಾರ್ ಲೈಟ್ ವಿತರಿಸಲಾಯಿತು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಎಂ.ಲಕ್ಷ್ಮೀ ಚಂದ್ರಪ್ಪ, ಸದಸ್ಯರಾದ ಟಿ.ಎ.ಚಂದ್ರಿಕಾ, ಎನ್.ರವಿ, ಆರ್.ಜಯರಾಮು, ಎನ್.ಚಂದ್ರಶೇಖರ್, ಡಿ.ಎಂ.ಕೇಶವಮೂರ್ತಿ, ನಾಗರತ್ನಮ್ಮ ಜಯರಾಮ್, ದಾಸರಹಳ್ಳಿ ಸುಮಾ, ಮಮತಾ, ಮುನಿರಾಜು, ಶಾಂತಮ್ಮ, ಆಂಜಿನಪ್ಪ, ಕೃಷ್ಣವೇಣಿ, ರಾಜಣ್ಣ, ಸರಳ, ಪದ್ಮಮ್ಮ, ಕೆಂಪಣ್ಣ, ವೈ.ಕೆ ರವಿಕುಮಾರ್, ಪಿಡಿಒ ಬಿ.ಎಂ.ದಿಲೀಪ್ ಕುಮಾರ್, ಕಾಯದರ್ಶಿ ಯಶೋದ್ ಕುಮಾರ್ ಮುಖಂಡರಾದ ದೇವರಾಜ್, ಜಯರಾಮ್, ಚೈತ್ರಾ ಇತರರು ಪಾಲ್ಗೊಂಡಿದ್ದರು.