ಸಾರಾಂಶ
ಹಿರಿಯೂರು ತಾಲೂಕಿನ ಹುಲುಗಲಕುಂಟೆ ಹಾಗೂ ಸುತ್ತಲಿನ ಗ್ರಾಮಗಳ ರೈತರಿಗೆ ದೊಡ್ಡಘಟ್ಟ ಗ್ರಾಮದ ಗ್ರಾಮಸ್ಥರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಸಾಗುವಳಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ಹುಲುಗಲಕುಂಟೆ ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರಿಗೆ ದೊಡ್ಡಘಟ್ಟ ಗ್ರಾಮಸ್ಥರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಹುಲುಗಲಕುಂಟೆ ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.ತಾಲೂಕಿನ ಕಸಬಾ ಹೋಬಳಿಯ ದೊಡ್ಡಘಟ್ಟ ಗ್ರಾಮದ ಸರ್ವೆ.ನಂ. 25, 26, 27, 28 ರಲ್ಲಿನ ಸರ್ಕಾರಿ ಜಮೀನಿನಲ್ಲಿ ಹುಲುಗಲಕುಂಟೆ ಮತ್ತು ಇತರೆ ಗ್ರಾಮಗಳ ಗ್ರಾಮಸ್ಥರು ತಲಾ 2 ಎಕರೆಯಂತೆ ಸುಮಾರು 30 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಇದೀಗ ಏಕಾಏಕಿ ದೊಡ್ಡಘಟ್ಟ ಗ್ರಾಮಸ್ಥರು ಸಾಗುವಳಿ ಮಾಡಬಾರದೆಂದು ಜೀವ ಬೆದರಿಕೆ ಹಾಕಿದ್ದಾರೆ. ಪರಿಶಿಷ್ಟ ಜಾತಿ ಎಂಬ ಕಾರಣಕ್ಕೋ, ರಾಜಕೀಯ ಕಾರಣಕ್ಕೋ ಸಾಗುವಳಿ ಮಾಡುವುದನ್ನು ತಡೆದಿದ್ದು ನಮಗೆ ಸಾಗುವಳಿ ಚೀಟಿ ನೀಡಿ ಸಾಗುವಳಿ ಮಾಡಲು ಸೂಕ್ತ ರಕ್ಷಣೆ ಒದಗಿಸಬೇಕೆಂದು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಹೆಚ್ ರಂಗನಾಥ್, ಬಿಡಿಎಸ್ ಎಸ್ ರಾಜ್ಯ ಕಾರ್ಯಾಧ್ಯಕ್ಷ ತಿಮ್ಮರಾಜ್, ಮಾಜಿ ಅಧ್ಯಕ್ಷ ಹೆಚ್ ರಂಗಸ್ವಾಮಿ, ಹೆಚ್.ಟಿ ರಂಗನಾಥ್, ಉಮಾದೇವಿ, ನಿಂಗಮ್ಮ, ರಂಗಮ್ಮ, ಕಣುಮಪ್ಪ, ಶಾರದಮ್ಮ, ತಿಮ್ಮರಾಜಮ್ಮ, ಲಕ್ಷ್ಮಿದೇವಿ, ವೆಂಕಟೇಶ್, ಸಾಕಮ್ಮ, ಕೆಂಚಮ್ಮ, ಗೌರಮ್ಮ, ಜ್ಯೋತಿ, ರಂಗಮ್ಮ ಮುಂತಾದವರು ಹಾಜರಿದ್ದರು.