ಸ್ಪೀಡ್ ಬ್ರೇಕರ್ಸ್ ಅಳವಡಿಸುವಂತೆ ಮೇಯರ್‌ಗೆ ಮನವಿ

| Published : Feb 25 2025, 12:45 AM IST

ಸಾರಾಂಶ

ನಗರದ ಕಂಟೋನ್ಮೆಂಟ್‌ನ ಸಂತ ಮೇರಿ ಶಾಲೆ (ಸಂತ ಫಿಲೋಮೆನಾ) ಮುಂದಿರುವ ಸಿಸಿ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ಸ್‌ ಅಳವಡಿಸುವಂತೆ ಕೋರಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಮೇಯರ್ ಮುಲ್ಲಂಗಿ ನಂದೀಶ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಕಂಟೋನ್ಮೆಂಟ್‌ನ ಸಂತ ಮೇರಿ ಶಾಲೆ (ಸಂತ ಫಿಲೋಮೆನಾ) ಮುಂದಿರುವ ಸಿಸಿ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ಸ್‌ ಅಳವಡಿಸುವಂತೆ ಕೋರಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಮೇಯರ್ ಮುಲ್ಲಂಗಿ ನಂದೀಶ್ ಅವರಿಗೆ ಮನವಿ ಸಲ್ಲಿಸಿದರು.

ಸಂತ ಮೇರಿ ಶಾಲೆ ಮುಂದಿರುವ ಸಿಸಿ ರಸ್ತೆಯಲ್ಲಿ ಮೊದಲಿನಿಂದಲೂ ವಾಹನ ಸಂಚಾರ ದಟ್ಟವಾಗಿದೆ. ಅದು ಅಲ್ಲದೆ ಸುಧಾಕ್ರಾಸ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭವಾದಾಗಿನಿಂದ ವಾಹನ ದಟ್ಟಣೆ ಇನ್ನೂ ಹೆಚ್ಚಾಗಿದೆ. ಕಂಟೋನ್ಮೆಂಟ್ ರೈಲ್ವೆ ಗೇಟ್ ಮೂಲಕ ಹೊಸಪೇಟೆ ರಸ್ತೆಯನ್ನು ತಲುಪಲು, ಭಾರಿ ವಾಹನಗಳು ಸೇರಿ ಎಲ್ಲ ರೀತಿಯ ವಾಹನಗಳು ಇದೇ ರಸ್ತೆಯ ಮೂಲಕ ಹಾದು ಹೋಗುತ್ತವೆ. ಇದರಿಂದಾಗಿ ಶಾಲೆಯ ಮಕ್ಕಳಿಗೆ ಹಾಗೂ ಪೋಷಕರು ತೊಂದರೆ ಅನುಭವಿಸುವಂತಾಗಿದೆ. ಕೆಲವೊಮ್ಮೆ ಅಪಘಾತಗಳ ಅಪಾಯ ಕೂಡ ಎದುರಾಗುವ ಸಂದರ್ಭಗಳು ಇರುತ್ತವೆ. ಕೆಲ ಮಕ್ಕಳು ಬಿದ್ದು ಗಾಯಗೊಂಡಿದ್ದಾರೆ. ಈ ಸಮಸ್ಯೆ ಬಗ್ಗೆ ಈ ಹಿಂದೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದರೂ, ಸಮಸ್ಯೆಗೆ ಪರಿಹಾರ ಮಾತ್ರ ದೊರೆತಿಲ್ಲ ಎಂದು ತಿಳಿಸಿದರು. ನಗರದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಬೇಕು ಎಂದು ಇದೇ ವೇಳೆ ಮೇಯರ್ ಅವರಿಗೆ ಮನವಿ ಮಾಡಲಾಯಿತು.

ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಸೋಮಶೇಖರ ಗೌಡ, ಸದಸ್ಯರಾದ ಡಾ. ಪ್ರಮೋದ್, ಶಾಂತಾ, ಸುರೇಶ್, ಉಮೇಶ್, ಗೋವಿಂದರಾಜು, ಶಂಕರ್, ತಿಪ್ಪೇಸ್ವಾಮಿ ಮತ್ತಿತರರಿದ್ದರು.