ಸಾರಾಂಶ
ಯಾದಗಿರಿ: ಆ.19 ರಂದು ಜಿಲ್ಲೆಯ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ಸಿಕ್ಕ ಒಂದು ದಿನದ ನವಜಾತ ಹೆಣ್ಣು ಶಿಶುವಿನ ಪೋಷಕರ ಪತ್ತೆಗೆ ಮನವಿ ಮಾಡಲಾಗಿದೆ ಎಂದು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಗೆದ್ದಲಮರಿ ಗ್ರಾಮದಲ್ಲಿ ಒಂದು ದಿನದ ನವಜಾತ ಹೆಣ್ಣು ಶಿಶು ಸಿಕ್ಕಿದ್ದು, ಈ ಶಿಶುವಿನ ಪಾಲಕರ ಪತ್ತೆಗಾಗಿ ಬಾಲ ನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015ರನ್ವಯ ಪತ್ರಿಕಾ ಪ್ರಕಟಣೆ ನೀಡಬೇಕಾಗಿರುವುದರಿಂದ ಹಾಗೂ ವಾರಸುದಾರರು (ಪೋಷಕರು) ಯಾರು ಪತ್ತೆಯಾಗದಿದ್ದಾಗ, ಈ ಕಾಯ್ದೆಯಡಿ ಮಗುವಿನ ವಾರಸುದಾರರು, ಪೋಷಕರು ಇಲ್ಲವೆಂದು ಭಾವಿಸಿ ದತ್ತು ಮುಕ್ತ ಆದೇಶ ನೀಡಲು ಅವಶ್ಯವಿರುವುದರಿಂದ ಈ ಮಗುವಿಗೆ ಪ್ರಸ್ತುತ 4 ದಿನಗಳಾಗಿದ್ದು, ಈ ನವಜಾತ ಹೆಣ್ಣು ಶಿಶುವಿನ ವಾರಸುದಾರರು, ಪೋಷಕರು ಯಾರಾದರು ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 60 ದಿನಗಳ ಒಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೋಣೆ ಸಂಖ್ಯೆ ಸಿ-17, ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ, ಸಂಕೀರ್ಣ, ಚಿತ್ತಾಪೂರ ರಸ್ತೆ, ಯಾದಗಿರಿ ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಫೋಟೊ: 22ವೈಡಿಆರ್5 : ನವಜಾತ ಶಿಶು.