೨೦೨೦-೨೦೨೫ನೇ ಸಾಲಿಗೆ ರಚಿತವಾಗಿದ್ದ ರಾಜ್ಯದ ಗ್ರಾಪಂಗಳ ಪೈಕಿ ೨೦೨೬ನೇ ಫೆಬ್ರವರಿಗೆ ಕೊರಟಗೆರೆ ತಾಲೂಕಿನ ೨೪ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ಸದಸ್ಯರ ಅವಧಿ ಮುಗಿದಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ತಾಲೂಕಿನ ೨೪ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಅವಧಿ ಮುಗಿದ ಹಿನ್ನೆಲೆ ತುಮಕೂರು ಜಿಲ್ಲಾಧಿಕಾರಿ ಅವರು ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.೨೦೨೦-೨೦೨೫ನೇ ಸಾಲಿಗೆ ರಚಿತವಾಗಿದ್ದ ರಾಜ್ಯದ ಗ್ರಾಪಂಗಳ ಪೈಕಿ ೨೦೨೬ನೇ ಫೆಬ್ರವರಿಗೆ ಕೊರಟಗೆರೆ ತಾಲೂಕಿನ ೨೪ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ಸದಸ್ಯರ ಅವಧಿ ಮುಗಿದಿದೆ. ಆದ ಕಾರಣ ಮುಂದಿನ ೨೦೨೬-೨೦೩೧ರ ಅವಧಿಗಾಗಿ ಗ್ರಾಪಂಗಳಿಗೆ ಚುನಾವಣೆ ನಡೆದು ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಅಲ್ಲಿಯವರೆಗೆ ಗ್ರಾಪಂಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೮(iii) ರ ಅನ್ವಯ ಆಡಳಿತಾಧಿಕಾರಿಗಳನ್ನ ನೇಮಿಸಿ ಅಧಿಸೂಚಿಸಲಾಗಿದೆ.
ಆಡಳಿತಾಧಿಕಾರಿಗಳ ವಿವರ ಇಂತಿದೆ:ತಹಸೀಲ್ದಾರ್ ಮಂಜುನಾಥ್, (ಜಟ್ಟಿಅಗ್ರಹಾರ, ಹುಲೀಕುಂಟೆ, ತೋವಿನಕೆರೆ), ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸಿ.ಅನಂತರಾಮು, (ಹೊಳವನಹಳ್ಳಿ, ಹಂಚಿಹಳ್ಳಿ, ತೀತಾ, ಅಕ್ಕಿರಾಂಪುರ), ಸಹಾಯಕ ಕಾರ್ಯಪಾಲಕ ಅಭಿಯಂತರ ಮಧುಸೂದನ್ (ಕ್ಯಾಮೇನಹಳ್ಳಿ, ಬೈಚಾಪುರ), ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮಹೇಶ್ವರಿ, (ವಜ್ಜನಕುರಿಕೆ, ಎಲೆರಾಂಪುರ), ಸಹಾಯಕ ಕಾರ್ಯಪಾಲಕ ಅಭಿಯಂತರರ ದಯಾನಂದ, (ಪಾತಗಾನಹಳ್ಳಿ), ಶಿಶು ಅಭಿವೃದ್ಧಿ ಅಧಿಕಾರಿ ಗಂಗಾಧರ್, (ಬೂದಗವಿ, ತುಂಬಾಡಿ), ಸಹಾಯಕ ಕಾರ್ಯಪಾಲಕ ಅಭಿಯಂತರರ ಕಾಂತರಾಜು, (ಬುಕ್ಕಪಟ್ಟಣ, ಕುರಂಕೋಟೆ), ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಯಮುನಾ (ವಡ್ಡಗೆರೆ, ಅರಸಾಪುರ), ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅನಂತರಾಜು (ದೊಡ್ಡಸಾಗ್ಗೆರೆ), ಪಶು ವೈದ್ಯಾಧಿಕಾರಿ ಸುಧಾಕರ್ (ಬಿ.ಡಿ.ಪುರ), ಲೋಕೋಪಯೋಗಿ ಎಇಇ ದೀಪಕ್ (ನೀಲಗೊಂಡನಹಳ್ಳಿ), ಕೃಷಿ ಅಧಿಕಾರಿ ರುದ್ರಪ್ಪ (ಕೋಳಾಲ), ರೇಷ್ಮೆ ಅಧಿಕಾರಿ ರಾಜಣ್ಣ (ಮಾವತ್ತೂರು), ವಲಯ ಅರಣ್ಯಾಧಿಕಾರಿ ಹನುಮಂತರಾಜು (ಚಿನ್ನಹಳ್ಳಿ).
