ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲ ಪದಾಧಿಕಾರಿಗಳ ನೇಮಕ

| Published : Feb 23 2024, 01:49 AM IST

ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲ ಪದಾಧಿಕಾರಿಗಳ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲಕ್ಕೆ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅನುಮೋದನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳ ನೇಮಕದ ಮೂಲಕ ಮಡಿಕೇರಿ ಗ್ರಾಮಾಂತರ ಮಂಡಲದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹಾಗೂ ಡೀನ್ ಬೋಪಣ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲಕ್ಕೆ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅನುಮೋದನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹಾಗೂ ಡೀನ್ ಬೋಪಣ್ಣ ತಿಳಿಸಿದ್ದಾರೆ.

ಮಂಡಲದ ಖಜಾಂಚಿಯಾಗಿ ಭೀಮಯ್ಯ ಮೇಕೇರಿ, ಉಪಾಧ್ಯಕ್ಷರಾಗಿ ಕುಡಿಯರ ಲಲಿತಾ, ಮನು ಮಹೇಶ್, ಶಶಿ ಮೂರ್ನಾಡು, ವಿಮಲ ಮಕ್ಕಂದೂರು, ಅಂಬಿ ಕಾರ್ಯಪ್ಪ, ಉಡುದೋಳಿ ಗಿರಿ, ಕಾರ್ಯದರ್ಶಿಗಳಾಗಿ ನರಿಯಂದಡ ಶಾಂತಿ, ಪೂರ್ಣಿಮಾ ಮರಗೋಡು, ಕೆ.ಪಿ.ಕಾರ್ತಿಕ್, ಕೆದಂಬಾಡಿ ಜಗದೀಶ್, ಕೊಕ್ಕಲೇರ ಅಯ್ಯಪ್ಪ, ಹೊಸಮನೆ ಹರೀಶ್, ವಕ್ತಾರರಾಗಿ ಧನಂಜಯ ಅಗೋಳಿಕಜೆ ಹಾಗೂ ಸಹ ವಕ್ತಾರರಾಗಿ ಎನ್.ಸಿ.ಅನಂತ ನೇಮಕಗೊಂಡಿದ್ದಾರೆ.

ಸದಸ್ಯರಾಗಿ ಪಿ.ಎನ್.ನಾರಾಯಣ, ಕುದ್ಪಜೆ ಸುಜೇತಾ, ಚಂದ್ರಕಲಾ ಬಾಲಚಂದ್ರ, ತೀರ್ಥರಾಮ ಚೆಂಬು, ನಿಡಿಂಜೆ ಶ್ರೀನಿವಾಸ್, ನಿರ್ಮಲ ಭರತ್, ಕೊರಗಪ್ಪ ಸಂಪಾಜೆ, ಯೋಗೀಶ್ ಮದೆನಾಡು, ಕಿರಣ್ ಚೇರಂಬಾಣೆ, ಪವನ್ ಚೇರಂಬಾಣೆ, ಶ್ರೀಧರ್ ದಬ್ಬಡ್ಕ, ಅನಿತಾ ದಿನೇಶ್, ಆಮೆ ಬಾಲಕೃಷ್ಣ, ನಂಗಾರು ವೀಣಾ, ಮನೋಜ್ ಅಯ್ಯಂಗೇರಿ, ರೇಖಾ ಅಯ್ಯಂಗೇರಿ, ಕಿರಣ್ ಚಾಂಡೀರ, ಕಡ್ಲೇರ ಕೀರ್ತನ್, ಪಾಡೆಯಂಡ ಕಟ್ಟಿ, ಸುಮತಿ ಪಾರಾಣೆ, ರತೀಶ್ ಕುಮಾರ್, ಸುಗು ನಾಪೋಕ್ಲು, ಸುಮಿತ್ರ ನಾಪೋಕ್ಲು, ವಿಜಯ ಕಡ್ಯದ, ರ‍್ಯಾಲಿ ಮಾದಯ್ಯ, ಹೇಮಲತ ಬೆಟ್ಟಗೇರಿ, ಪ್ರಮೀಳ ಕಕ್ಕಬ್ಬೆ, ಸಂದೇಶ್ ಕಲಿಯಾಟಂಡ, ರಫೀಕ್ ಎಮ್ಮೆಮಾಡು, ಮಣವಟ್ಟಿರ ಜಯಲಕ್ಷ್ಮೀ, ಬಳಪದ ಪೂವಯ್ಯ, ಪ್ರಭು ಶೇಖರ್ ಹೊಸ್ಕೇರಿ, ಚೌರಿರ ಅಪ್ಪಣ್ಣ, ಸಣ್ಣಜನ ವೀಣಾ, ಪಿ.ಜಿ.ಸುಬ್ರಮಣಿ, ಪೆಮ್ಮಯ್ಯ ಗಾಳಿಬೀಡು, ರಘು ಚೌಕಿ ಮಕ್ಕಂದೂರು, ಹರೀಶ್ ರೈ ಕೆ.ನಿಡುಗಣೆ, ಜಾನ್ಸಿ ಕೆ.ನಿಡುಗಣೆ, ಮಧು ಅಪ್ಪಚ್ಚ ಕಡಗದಾಳು, ನೇತ್ರ ಕಡಗದಾಳು, ಅಮ್ಮಾಟಂಡ ದೇವಯ್ಯ, ಕಾಳನ ರವಿ ಹಾಗೂ ಕಚೇರಿ ಸಹಾಯಕರಾಗಿ ಸುಕುಮಾರ್ ಹಾಕತ್ತೂರು ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ನೇಮಕದ ಮೂಲಕ ಮಡಿಕೇರಿ ಗ್ರಾಮಾಂತರ ಮಂಡಲದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು ಎಂದು ನಾಗೇಶ್ ಕುಂದಲ್ಪಾಡಿ, ನೆಲ್ಲಚಂಡ ಕಿರಣ್ ಕಾರ್ಯಪ್ಪ ಹಾಗೂ ಡೀನ್ ಬೋಪಣ್ಣ ತಿಳಿಸಿದ್ದಾರೆ.