ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶ್ರೀಮಹಾಲಿಂಗೇಶ್ವರರ ಪವಾಡಗಳ ಬಗ್ಗೆ ಕನ್ನಡಪ್ರಭ ಪತ್ರಿಕೆ ಹೊರ ತಂದ ಪುರವಣಿ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ಖ್ಯಾತ ಹೃದಯರೋಗ ತಜ್ಞ ಡಾ.ವಿಜಯ ಹಂಚಿನಾಳ ಹೇಳಿದರು.ಬುಧವಾರ ಸ್ಥಳೀಯ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಜಡೆಯ ಒಡೆಯ ಪವಾಡ ಪುರುಷ ಶ್ರೀ ಮಹಾಲಿಂಗೇಶ್ವರರು ಎಂಬ ಜಾತ್ರಾ ಪುರವಣಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಅನೇಕ ಗ್ರಾಮಗಳಲ್ಲಿ ಧರ್ಮ ಧರ್ಮಗಳ ನಡುವೆ ಸಾಕಷ್ಟು ಕಿತ್ತಾಟಗಳು ನಡೆದಿದೆ. ಆದರೆ ಸರ್ವ ಧರ್ಮಗಳನ್ನು ಸಮಾನವಾಗಿ ಕಾಣುವ ವ್ಯವಸ್ಥೆ ಇಲ್ಲಿ ಇದೆ. ಪರಮಾತ್ಮನಿಗೆ ಸಮನಾದ ವಸ್ತು ಇನ್ನೊಂದಿಲ್ಲ. ನಾವೇಲ್ಲರೂ ಪರಮಾತ್ಮನ ಕೈಯಲ್ಲಿರುವ ಗೊಂಬೆಗಳು ಮಾತ್ರ ಆದರೆ ನಮ್ಮೇಲ್ಲರ ಸೂತ್ರ ಮಾತ್ರ ಆ ಭಗವಂತನ ಕೈಯಲ್ಲಿದೆ. ಆ ಗುರುವಿನ ಸೇವೆ ಮಾಡುತ್ತ ಬಂದಿರುವುದರಿಂದಲೇ ನಮ್ಮೂರಿಗೆ ಯಾವ ಕಂಠಕಗಳು ಬಂದಿಲ್ಲ. ಇದು ಶ್ರೀ ಮಹಾಲಿಂಗೇಶ್ವರರ ಕೃಪೆ ಇಂದ ಮಾತ್ರ ಸಾಧ್ಯ ಎಂದರು.ನಂತರ ಜಾತ್ರಾ ಪುರವಣಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಭಗವಂತನನ್ನು ಸೇರತಕ್ಕ ಮಾರ್ಗಗಳು ಹಲವಾರು ಇದ್ದರೂ ಶ್ರೇಷ್ಠವಾದ ಪಂಥವೆಂದರೆ ಪ್ರೇಮ ಪಂಥ. ಅಂತಹ ಭಕ್ತಿಯ ಪ್ರೇಮ ಪಂಥವನ್ನು ಎಲ್ಲರಿಗೂ ತೋರಿಸಿಕೊಟ್ಟವರು ಶ್ರೀ ಮಹಾಲಿಂಗೇಶ್ವರರು ಎಂದು ಹೇಳಿದರು.
ನಂತರ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಸಮಾಜದ ಅಡೆತಡೆಗಳನ್ನು ತಿದ್ದುವ ಹಕ್ಕು ಪತ್ರಿಕೆಗಳಿಗೆ ಇದೆ. ಒಳ್ಳೆಯದನ್ನು ಪ್ರೋತ್ಸಾಹಿಸಿ ತಪ್ಪನ್ನು ಹೊರಗೆ ತಂದು ತಿದ್ದಿ ಹೇಳಿ ಕಿವಿಹಿಂಡುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಾ ಬಂದಿವೆ ಪತ್ರಿಕೆಗಳಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ. ಅಲ್ಲದೇ ಜಾತ್ರಾ ಪುರವಣಿಯಲ್ಲಿ ಮಹಾಲಿಂಗೇಶ್ವರ ಬಗ್ಗೆ ಮಾಡಿರುವ ಲೇಖನ ತುಂಬಾ ಚೆನ್ನಾಗಿ ಬಂದಿದೆ ಎಂದರು.ನಂತರ ಮಾತನಾಡಿದ ರಬಕವಿ ಎಲ್.ಐ.ಸಿ ಶಾಖೆಯ ಮ್ಯಾನೇಜರ್ ಶಿವಪ್ರಸಾದ ಮತ್ತು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಇವತ್ತು ನಾವೆಲ್ಲರೂ ಪತ್ರಿಕೆಗಳನ್ನು ಪ್ರೀತಿಸಿ ಪ್ರೋತ್ಸಾಹಿಸಿ ಅವುಗಳ ಬೆಳವಣಿಗೆಗೆ ನಾವೇಲ್ಲರೂ ಕೂಡ ಸಹಕಾರ ನೀಡಿದಾಗ ಮಾತ್ರ ಪತ್ರಿಕೆಗಳ ಅಭಿವೃದ್ಧಿ ಹೊಂದಲು ಸಾಧ್ಯ. ಹೇಗೆ ಪತ್ರಕರ್ತರು, ಪತ್ರಿಕೆಗಳು ಸೇರಿ ಸಮಾಜದ ಉಳಿವಿಗಾಗಿ ಮತ್ತು ಸಮಾಜದ ಸುಧಾರಣೆಗಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತವೆಯೋ ಅಂಥ ಪತ್ರಿಕೆಗಳನ್ನು ಪ್ರೋತ್ಸಾಹಿಸುವ ಕೆಲಸ ಸಮಾಜದಿಂದ ನಡೆಯಬೇಕು. ಮಹೇಶ ಆರಿ ಅವರು ಮೇಲಿಂದ ಮೇಲೆ ಇಂಥ ವಿಶೇಷ ವರದಿಗಳನ್ನು ನೀಡುವ ಮೂಲಕ ಸಮಾಜ ಮತ್ತು ಸಂಸ್ಕೃತಿ ಉಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ಬೇರೆಯವರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಒಡಿ ಬಾಬುಗೌಡ, ಖ್ಯಾತ ವ್ಯೆದ್ಯರಾದ ಡಾ.ಮಂಜುನಾಥ ಚನ್ನಾಳ, ಡಾ.ಸಂದೀಪ ಕನಕರಡ್ಡಿ, ಎಂಜಿನಿಯರ್‌ಗಳಾದ ಸುನೀಲ ಕಡಪಟ್ಟಿ, ಎಂ.ಎಸ್ ಮುಗಳಖೋಡ, ಹುಚ್ಚೇಶ ವಡ್ಡರ, ಪುರಸಭೆ ಸದಸ್ಯರಾದ ಬಲವಂತಗೌಡ ಪಾಟೀಲ, ಚನಬಸು ಯರಗಟ್ಟಿ ಗಣ್ಯರಾದ ಅಶೋಕ ಅಂಗಡಿ,ಶಂಕರಗೌಡ ಪಾಟೀಲ, ಜಿ.ಎಸ್ ಗೊಂಬಿ, ಹನಮಂತ ಬಡಿಗೇರ,ವಿವೇಕ ಡಪಳಾಪುರ, ಸುರೇಶ ಶೆಟ್ಟಿ, ಆನಂದ ಹಟ್ಟಿ, ಮಹೇಶ ಜಾಧವ, ವಿಜಯಕುಮಾರ ಸಬಕಾಳೆ, ಬಸು ಕಾಲತಿಪ್ಪಿ, ವಿಜುಗೌಡ ಪಾಟೀಲ, ಗುತ್ತಿಗೆದಾರ ಆಸೀಮ ಪೆಂಡಾರಿ ಮತ್ತು ಅಪ್ಪಾಸಾಬ ನಾಲಬಂದ, ಈರಣ್ಣ ಹಲಗತ್ತಿ, ಡಾ.ಎಂ.ಎಸ್ ಕದ್ದಿಮನಿ, ಡಾ.ಎಸ್.ಆರ್ ಹಿಡಕಲ್, ಲತಾ ಆರಿ, ಶೀಲಾ ಹುಲ್ಲೂರ, ಸಾಗರ ಆರಿ ಸೇರಿದಂತೆ ಹಲವರು ಇದ್ದರು.--
ಕೋಟ್ಸತ್ಯ, ನಿಷ್ಠ ಸುದ್ದಿಗಳನ್ನು ದಿನನಿತ್ಯ ಪ್ರಸಾರ ಮಾಡಿ ಸಮಾಜದಲ್ಲಾಗುವ ಆಗು-ಹೋಗುಗಳನ್ನು ಜನರೆಡೆಗೆ ತಂದು ಸಮಾಜದ ಸುಧಾರಣೆಗೆ ಶ್ರಮಿಸುತ್ತಿರುವ ಪತ್ರಿಕೆಗಳ ಉಳಿವಿಗೆ ನಾವೆಲ್ಲ ಸಹಾಯ ಮಾಡಬೇಕು. ಹೀಗಾಗಿ ಎಲ್ಲರೂ ಜಾಹಿರಾತು ನೀಡುವ ಮೂಲಕ ಪತ್ರಿಕೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ.
-ಶೇಖರ ಅಂಗಡಿ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ