ಮಳೆ ಹಾನಿಗೆ ಸರ್ಕಾರದಿಂದ ಸೂಕ್ತ ಪರಿಹಾರ

| Published : Sep 03 2025, 01:00 AM IST

ಸಾರಾಂಶ

ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಆಗಿರುವ ಹಾನಿಯ ಕುರಿತು ವರದಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ವಿಧಾನ ಪರಿಷತ್‌ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್‌ ಹಾಗೂ ಭೀಮರಾವ್‌ ಪಾಟೀಲ್‌ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ, ಹುಮನಾಬಾದ್‌

ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಆಗಿರುವ ಹಾನಿಯ ಕುರಿತು ವರದಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ವಿಧಾನ ಪರಿಷತ್‌ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್‌ ಹಾಗೂ ಭೀಮರಾವ್‌ ಪಾಟೀಲ್‌ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಮಂಗಳವಾರ ಮಳೆಯಿಂದ ಹಾನಿಗೊಳಗಾದ ತಾಲೂಕಿನ ಗಡವಂತಿ ಗ್ರಾಮದ ಹೊಲಗಳಿಗೆ ಭೇಟಿ ನೀಡಿದರಲ್ಲದೆ ಗಡವಂತಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯ ಹಳೆಯ ಕಟ್ಟಡ ಪರಿಶೀಲಿಸಿ ನಂತರ ಗ್ರಾಮದಲ್ಲಿ ಅನೇಕ ಮನೆಗಳು ಕುಸಿದಿರುವದನ್ನು ವೀಕ್ಷಣೆ ಮಾಡಿ ಸಂಪೂರ್ಣ ವರದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಅಂಜುಮ್‌ ತಬಸುಮ್‌, ತಾಪಂ ಇಒ ದೀಪಿಕಾ, ಬಿಇಒ ವೆಂಕಟೇಶ ಗೂಡಾಳ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಗೋವಿಂದ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಕುಮಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಲಕ್ಷ್ಮಿ ಪಾಟೀಲ್‌, ಲೋಕೋಪಯೋಗಿ ಎಇಇ ವೆಂಕಟ ಸಿಂಧೆ, ಪಿಆರ್‌ಇ ಎಇಇ ಪಶುಪತಿ, ಕಂದಾಯ ನಿರೀಕ್ಷಕ ರಾಹುಲ್‌ ದೇವ, ಅಫ್ಸರಮಿಯಾ, ಓಂಕಾರ ತುಂಬಾ, ಸಿದ್ದಣ್ಣ ಭೂಶಟ್ಟಿ, ಗುರುಶಾಂತ ಇಟಗಿ, ನಿಜಾಮೋದ್ಧಿನ್‌, ಬಸವರಾಜ ಮೋಳಕೇರಾ, ರವಿಚಂದ್ರನ್‌, ಜೈರಾಜ ವೈದ್ಯ, ಲಕ್ಷ್ಮಣ ಸಿಂಗೆ, ಶಿವರಾಜ ರೂಗನ್‌, ಸತೀಷ ಕುಂದನ್, ಆಕಾಶ ಕುಂದನ್‌ ಹಾಗೂ ಸುಭಾಷ ವೈದ್ಯ ಇದ್ದರು.

---------

ಮಳೆ ಹಾನಿ ಕುರಿತು ರೈತರು ಆತಂಕಕ್ಕೀಡಾಗದೆ ಧೈರ್ಯದಿಂದ ಇರಬೇಕು. ಹಾನಿಯ ಸಮಸ್ಯೆಯ ಸಂಪೂರ್ಣ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ರೈತರಿಗೆ ಪರಿಹಾರ ನೀಡಲಾಗುವುದು.

- ಡಾ.ಚಂದ್ರಶೇಖರ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ

---------

ಮುಂಗಾರು ಬೆಳೆ ಹಾನಿ ಕುರಿತು ಅಧಿಕಾರಿಗಳು ಸ್ಥಳ ಭೇಟಿ ಮಾಡುವ ಮೂಲಕ ವರದಿ ಸಲ್ಲಿಸಬೇಕು. ಜೊತೆಗೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ತ್ಯಾಜ್ಯ ವಿಲೇವಾರಿಯನ್ನೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು.

- ಭೀಮರಾವ್‌ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ