ರಾಜ್ಯದಲ್ಲಿ ₹27000 ಕೋಟಿ ಹೂಡಿಕೆಗೆ ಒಪ್ಪಿಗೆ

| N/A | Published : Oct 25 2025, 01:00 AM IST / Updated: Oct 25 2025, 06:36 AM IST

 CM Siddaramaiah investment

ಸಾರಾಂಶ

ರಾಜ್ಯದಲ್ಲಿ 13 ಸಂಸ್ಥೆಗಳಿಂದ 27,607 ಕೋಟಿ ರು. ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿ ಸಭೆಯಲ್ಲಿ ಅನುಮತಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ   ಯೋಜನಾ ಮಂಜೂರಾತಿ ಸಮಿತಿ ಸಭೆಯಲ್ಲಿ ಬಂಡವಾಳ ಹೂಡಿಕೆಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳನ್ನು ಪರಿಶೀಲನೆ

 ಬೆಂಗಳೂರು :  ರಾಜ್ಯದಲ್ಲಿ 13 ಸಂಸ್ಥೆಗಳಿಂದ 27,607 ಕೋಟಿ ರು. ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿ ಸಭೆಯಲ್ಲಿ ಅನುಮತಿಸಲಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿ ಸಭೆಯಲ್ಲಿ ಬಂಡವಾಳ ಹೂಡಿಕೆಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳನ್ನು ಪರಿಶೀಲಿಸಿ, 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು. ಈ 13 ಯೋಜನೆಗಳಿಂದ ರಾಜ್ಯದಲ್ಲಿ 8,704 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ.

ತೇಜಸ್‌ ನೆಟ್‌ವರ್ಕ್ಸ್‌ 542.19 ಕೋಟಿ ರು., ವಾಯು ಅಸೆಟ್ಸ್‌ 1,251 ಕೋಟಿ ರು., ಜಿಂದಾಲ್‌ ಸ್ಟೀಲ್ಸ್‌ 1,300.57 ಕೋಟಿ ರು., ಜಿಂದಾಲ್‌ ಎಲೆಕ್ಟ್ರಿಕಲ್‌ ಸ್ಟೀಲ್‌ 7,102 ಕೋಟಿ ರು, ಗ್ರಾಸಿಂ ಇಂಡಸ್ಟ್ರೀಸ್‌ 1,386 ಕೋಟಿ ರು, ಎಸ್‌ಎಫ್‌ಎಕ್ಸ್‌ ಇಂಡಿಯಾ 9,298 ಕೋಟಿ ರು, ಸ್ನೀಡರ್‌ ಎಲೆಕ್ಟ್ರಿಕ್‌ ಐಟಿ ಬ್ಯುಸಿನೆಸ್‌, ಸ್ನೈಡರ್‌ ಎಲೆಕ್ಟ್ರಿಕ್‌ ಬ್ಯುಸಿನೆಸ್‌ ಇಂಡಿ ಪ್ರೈ.ಲಿ. 1,520.75 ಕೋಟಿ ರು., ಎಚ್‌ಎಸ್‌ಎಸ್‌ ಟೆಕ್ಸ್‌ಟೈಲ್ಸ್‌ 740 ಕೋಟಿ ರು., ಕ್ಯೂಪಿಐಎಐ ಇಂಡಿಯಾ 1,136 ಕೋಟಿ ರು., ಟೊಯೋಟಾ ಇಂಡಸ್ಟ್ರೀಸ್‌ ಎಂಜಿನ್‌ ಇಂಡಿಯಾ ಲಿ. 1,330 ಕೋಟಿ ರು., ರಿಲಯನ್ಸ್‌ ಕನ್ಸ್ಯೂಮರ್‌ ಪ್ರಾಡಕ್ಟ್ಸ್‌ 1,622 ಕೋಟಿ ರು. ಹೂಡಿಕೆ ಮಾಡಲಿವೆ.

ಅವುಗಳೊಂದಿಗೆ ಎಂಬೆಸ್ಸಿ ಇಂಡಸ್ಟ್ರಿಯಲ್‌ ಪಾರ್ಕ್‌ 80 ಕೋಟಿ ರು. ಮತ್ತು ಬಾಲಾಜಿ ವೇಫರ್ಸ್‌ ಕಂಪನಿ 298.75 ಕೋಟಿ ರು. ಹೆಚ್ಚುವರಿ ಬಂಡವಾಳ ತೊಡಗಿಸಲಿವೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಎಂ.ಬಿ. ಪಾಟೀಲ್‌, ಕೆ.ಜೆ.ಜಾರ್ಜ್‌, ಎಚ್‌.ಕೆ. ಪಾಟೀಲ್‌, ಪ್ರಿಯಾಂಕ್‌ ಖರ್ಗೆ, ಡಾ. ಎಂ.ಸಿ.ಸುಧಾಕರ್‌, ಸಂತೋಷ್‌ ಲಾಡ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಇತರರಿದ್ದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿ ಸಭೆ

ಬಂಡವಾಳ ಹೂಡಿಕೆಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಒಪ್ಪಿಗೆ

Read more Articles on