ಮೇ 4ರಂದು ಅರಂತಬೆಟ್ಟುಗುತ್ತು ಮಾರ್ಲ ಮನೆತನದ ಗಡಿ ಸ್ವೀಕಾರ ಕಾರ್ಯಕ್ರಮ

| Published : Apr 20 2025, 01:58 AM IST

ಮೇ 4ರಂದು ಅರಂತಬೆಟ್ಟುಗುತ್ತು ಮಾರ್ಲ ಮನೆತನದ ಗಡಿ ಸ್ವೀಕಾರ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸುರತ್ಕಲ್ ಮಧುಸೂದನ‌ ಮಯ್ಯ ಅವರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸುರತ್ಕಲ್ ಕೊಡಿಪಾಡಿ ಬಾಳಿಕೆ ಹಾಗೂ ಪಡ್ರೆ ಚಾವಡಿಯ ಗಡಿ ಪ್ರಧಾನರ ಉಪಸ್ಥಿತಿಯಲ್ಲಿ ಹಾಗೂ ಗೌರವಾನ್ವಿತ ಎಲ್ಲ ಗಡಿ ಪ್ರಧಾನರ ಸಮ್ಮುಖದಲ್ಲಿ ಅರಂತಬೆಟ್ಟು ಗುತ್ತು ಮಾರ್ಲ ಮನೆತನದ ನಿಡ್ಡೋಡಿ ಮೈಂದಡಿ ಸದಾನಂದ ಶೆಟ್ಟಿ ಅವರಿಗೆ ಕಾಂತೇರಿ ಜುಮಾದಿಯ ಗಡಿ ಸ್ವೀಕಾರ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸುರತ್ಕಲ್ ಅರಂತಬೆಟ್ಟು ಗುತ್ತು ಶ್ರೀ ನಾಗದೇವರು, ಉಳ್ಳಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದ ಮಾರ್ಲ ಮನೆತನದ ಗಡಿ ಸ್ವೀಕಾರ ಸಮಾರಂಭ ಮೇ 4ರಂದು ಬೆಳಗ್ಗೆ 8.20ಕ್ಕೆ ಅರಂತಬೆಟ್ಟು ಗುತ್ತುವಿನಲ್ಲಿ ನಡೆಯಲಿದೆ.

ಸುರತ್ಕಲ್ ಮಧುಸೂದನ‌ ಮಯ್ಯ ಅವರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸುರತ್ಕಲ್ ಕೊಡಿಪಾಡಿ ಬಾಳಿಕೆ ಹಾಗೂ ಪಡ್ರೆ ಚಾವಡಿಯ ಗಡಿ ಪ್ರಧಾನರ ಉಪಸ್ಥಿತಿಯಲ್ಲಿ ಹಾಗೂ ಗೌರವಾನ್ವಿತ ಎಲ್ಲ ಗಡಿ ಪ್ರಧಾನರ ಸಮ್ಮುಖದಲ್ಲಿ ಅರಂತಬೆಟ್ಟು ಗುತ್ತು ಮಾರ್ಲ ಮನೆತನದ ನಿಡ್ಡೋಡಿ ಮೈಂದಡಿ ಸದಾನಂದ ಶೆಟ್ಟಿ ಅವರಿಗೆ ಕಾಂತೇರಿ ಜುಮಾದಿಯ ಗಡಿ ಸ್ವೀಕಾರ ನಡೆಯಲಿದೆ.

ಮೇ 4ರಂದು ಬೆಳಗ್ಗೆ 8.20ಕ್ಕೆ ಗಡಿ ಸ್ವೀಕಾರ, 10.30ಕ್ಕೆ ಧರ್ಮರಸು ಉಳ್ಳಾಯ, ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ಭಂಡಾರ ಇಳಿದು ನಂತರ ಧರ್ಮರಸು ಉಳ್ಳಾಯ ದೈವಕ್ಕೆ ನೇಮ, ಮಧ್ಯಾಹ್ನ‌ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಮೈಸಂದಾಯ ದೈವಕ್ಕೆ ನೇಮ, ರಾತ್ರಿ 8ಕ್ಕೆ ಅನ್ನ ಸಂತರ್ಪಣೆ, ರಾತ್ರಿ 9ಕ್ಕೆ ಕಾಂತೇರಿ ಜುಮಾದಿ ಹಾಗೂ ಭಂಟ, ಸರಳ ಜುಮಾದಿ ಹಾಗೂ ಭಂಟ ದೈವಗಳಿಗೆ ನೇಮ, ಪಿಲಿಚಾಮುಂಡಿ ದೈವಕ್ಕೆ ನೇಮ‌, ಮೇ 5ರಂದು ರಾತ್ರಿ 8ಕ್ಕೆ ಕಲ್ಲುರ್ಟಿ ಪಂಜುರ್ಲಿ ಹಾಗೂ ಜಾಗದ ಪಂಜುರ್ಲಿ ದೈವಗಳಿಗೆ ಕೋಲ ನಡೆಯಲಿದೆ.ಆಮಂತ್ರಣ ಪತ್ರಿಕೆ ಬಿಡುಗಡೆ: ಗಡಿ ಸ್ವೀಕಾರ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಯು ಅರಂತಬೆಟ್ಟು ಗುತ್ತುವಿನಲ್ಲಿ ನಡೆಯಿತು. ಈ ಸಂದರ್ಭ ಗಡಿ ಪ್ರಧಾನರಾದ ಬಾಬು ಬಂಡ್ರಿಯಾಲ್ ಪಡ್ರೆ, ಜಗನ್ನಾಥ ಅತ್ತಾರ್ ಕೊಡಿಪಾಡಿ, ಮಧು ಮಯ್ಯ, ರಮಾನಾಥ ರೈ, ಬಾಲಕೃಷ್ಣ ಶೆಟ್ಟಿ ಏಳಿಂಜೆ ಅಂಗಡಿಗುತ್ತು, ಪುಷ್ಪರಾಜ ಶೆಟ್ಟಿ ಕುಡುಂಬೂರು, ದಿನಕರ ಶೆಟ್ಟಿ ಪಡ್ರೆ, ದೇವೇಂದ್ರ ಪೂಜಾರಿ ಪಡ್ರೆ, ಸದಾನಂದ ಶೆಟ್ಟಿ, ನವೀನ್ ಶೆಟ್ಟಿ ಪಡ್ರೆ, ಅರಂತಬೆಟ್ಟು ಗುತ್ತು ಮನೆತನದ ಮುದ್ದಣ್ಣ ಶೆಟ್ಟಿ, ನವೀನ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಾಜೇಶ್ ಶೆಟ್ಟಿ, ದಿಲ್‌ರಾಜ್ ಆಳ್ವ, ಪ್ರಶಾಂತ್ ಶೆಟ್ಟಿ, ಜ್ಯೋತಿ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.