ಸಾರಾಂಶ
ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತ ಅರಸೀಕೆರೆ ನಗರಸಭೆಯ ೧೦ನೇ ವಾರ್ಡಿನ ಜೆಡಿಎಸ್ ಸದಸ್ಯರಾದ ಕೆ.ಎಂ. ಈಶ್ವರಪ್ಪ ಅವರು ಅರಸೀಕೆರೆ ನಗರಸಭೆಗೆ ಚುನಾವಣೆ ನಡೆದ ಗುರುವಾರದಂದೇ ಜಿಲ್ಲಾಧಿಕಾರಿಗಳಿಗೆ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.೧೦ನೇ ವಾರ್ಡಿನ ನಗರಸಭೆ ಸದಸ್ಯರಾಗಿರುವ ನಾನು ೨೦೧೮ ರಿಂದ ೨೦೨೪ರವರೆಗೂ ಪ್ರಮಾಣಿಕವಾಗಿ ಜೆಡಿಎಸ್ ಪಕ್ಷದಲ್ಲಿ ಇದ್ದು, ಇಲ್ಲಿನ ಜೆಡಿಎಸ್ ಮುಖಂಡರು ಮಾಡಿದ ಬೇಸರದಿಂದ ನಗರಸಭೆಯ ನನ್ನ ಸದಸ್ವತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತ ಅರಸೀಕೆರೆ ನಗರಸಭೆಯ ೧೦ನೇ ವಾರ್ಡಿನ ಜೆಡಿಎಸ್ ಸದಸ್ಯರಾದ ಕೆ.ಎಂ. ಈಶ್ವರಪ್ಪ ಅವರು ಅರಸೀಕೆರೆ ನಗರಸಭೆಗೆ ಚುನಾವಣೆ ನಡೆದ ಗುರುವಾರದಂದೇ ಜಿಲ್ಲಾಧಿಕಾರಿಗಳಿಗೆ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಇದೇ ವೇಳೆ ಈಶ್ವರಪ್ಪ ಅವರು ಮಾಧ್ಯಮದೊಂದಿಗೆ ಮಾತನಾಡಿ, ೧೦ನೇ ವಾರ್ಡಿನ ನಗರಸಭೆ ಸದಸ್ಯರಾಗಿರುವ ನಾನು ೨೦೧೮ ರಿಂದ ೨೦೨೪ರವರೆಗೂ ಪ್ರಮಾಣಿಕವಾಗಿ ಜೆಡಿಎಸ್ ಪಕ್ಷದಲ್ಲಿ ಇದ್ದು, ಇಲ್ಲಿನ ಜೆಡಿಎಸ್ ಮುಖಂಡರು ಮಾಡಿದ ಬೇಸರದಿಂದ ನಗರಸಭೆಯ ನನ್ನ ಸದಸ್ವತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಇಲ್ಲಿ ಜಾತಿ ವ್ಯವಸ್ಥೆ ಇದ್ದು, ನಾವು ಹಿಂದೂ ಕುರುಬ ಜನಾಂಗದವರಾಗಿದ್ದು, ಜ್ಯೋತಿ ಗಂಗಾಧರ್ ಇದ್ದು, ಅವರ ಜಾತಿಯವರಿಗೆ ಮೀಸಲು ಕೊಟ್ಟಿದ್ದು, ಎನ್.ಆರ್. ಸಂತೋಷ್ ಅವರು ಕಳೆದ ಬಾರಿಯೇ ಹೇಳಿದ್ದರೂ ಅವರ ಜೊತೆಯಲ್ಲಿಯೇ ಇದ್ದೆವು. ಮುಸ್ಲಿಂ ಮತ್ತು ಕುರುಬ ಮತಗಳು ಬೇಡ ಎಂದು ಹೇಳಿದ್ದು, ಆದರೇ ಪಕ್ಷಕ್ಕೋಸ್ಕರ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಇದ್ದು, ಇಷ್ಟೆಲ್ಲಾ ಬೆಳವಣಿಗೆ ಆದರೂ ಅಲ್ಲಿ ಉಸಿರುಕಟ್ಟಿದ ವಾತಾವರಣ ಇತ್ತು. ಇದರಿಂದ ಬೇಜಾರಾಗಿ ಪಕ್ಷದಿಂದಲೇ ಹೊರಬಂದಿದ್ದೇವೆ. ನಗರಸಭೆ ಅಧ್ಯಕ್ಷ ಸ್ಥಾನವನ್ನು ಕೇಳಿದ್ದು, ರಾತ್ರಿ ನಿಮಗೆ ಅಧಿಕಾರ ಕೊಡುವುದಾಗಿ ಹೇಳಿ ಬೆಳಿಗ್ಗೆ ಜ್ಯೋತಿ ಗಂಗಾಧರ್ ಮತ್ತು ಎನ್.ಆರ್. ಸಂತೋಷ್ ಅವರು ಮಾತೆ ಬದಲಾಯಿಸಿದ್ದರು. ಅವರವರೆ ಏಕಪಕ್ಷೀಯ ನಿರ್ಧಾರ ಕೈಗೊಂಡು ಬೇರೆ ಹೆಸರನ್ನು ಹೇಳಿದರು. ಈ ಮಾತುಗಳು ನಮಗೆ ಇಷ್ಟವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.