ಬಡವರ ಪರ ಕಂಡ ಕನಸುಗಳನ್ನು ಕಾರ್ಯರೂಪಕ್ಕೆ ತಂದರು ಸಮಯ ಪ್ರಜ್ಞೆ ಅವರಲ್ಲಿತು. ಬೇರೆಯವರಿಂದ ಯಾರು ಶೋಷಣೆಗೆ ಒಳಗಾಗಬಾರದು ಎಂಬ ಅವರ ಧ್ಯೇಯವನ್ನು ನಾವು ಈಡೇರಿಸಬೇಕು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹಾಗೂ ಅವಕಾಶಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶೋಷಿತರ ಧ್ವನಿಯಾಗಿದ್ದ ದೇವರಾಜ ಅರಸು ಭೂ ಸೂಧಾರಣೆ, ಜೀತ ವಿಮುಕ್ತ ಜಾರಿಗೆ ತಂದು ಬಡ ಜನರ ಬಾಳಿನ ಆಶಾ ಕಿರಣವಾದರು. ಮುಖ್ಯಮಂತ್ರಿಯಾಗಿ ದೇವರಾಜ ಅರಸು ಜಾರಿಗೆ ತಂದ ಹಲವಾರು ಸುಧಾರಣೆಗಳು ಇಂದು ಇತರೆ ಮುಖ್ಯಮಂತ್ರಿಗಳಿಗೆ ಮಾದರಿಯಾಗಿದ್ದಾರೆ ಎಂದು ತಹಸೀಲ್ದಾರ್ ಆದರ್ಶ ಹೇಳಿದರು.ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ದೇವರಾಜ ಅರಸು ರವರ 111ನೇ ಜಯಂತಿಯಲ್ಲಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿ ಅವರು, ಬಡವರ ಪರ ಕಂಡ ಕನಸುಗಳನ್ನು ಕಾರ್ಯರೂಪಕ್ಕೆ ತಂದರು ಸಮಯ ಪ್ರಜ್ಞೆ ಅವರಲ್ಲಿತು. ಬೇರೆಯವರಿಂದ ಯಾರು ಶೋಷಣೆಗೆ ಒಳಗಾಗಬಾರದು ಎಂಬ ಅವರ ಧ್ಯೇಯವನ್ನು ನಾವು ಈಡೇರಿಸಬೇಕು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹಾಗೂ ಅವಕಾಶಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದರು.
ಇದೇ ವೇಳೆ ಶಿಕ್ಷಣಧಿಕಾರಿ ಧರ್ಮಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಂದಕುಮಾರ್, ಚಂದ್ರಕಲಾ, ಆಶೋಕ್, ಪ್ರಭು, ವಿಸ್ತರಣಾಧಿಕಾರಿ ನಿಂಗೇಗೌಡ, ಎಫ್‌ಡಿಎ ದಿನೇಶ್, ಹರೀಶ್, ದಸಸಂ ಮುಖಂಡ ಅಂಕಯ್ಯ, ತೇಜಾವತಿ, ನಾಗರತ್ನ, ಪುರಸಭೆ ಮಧು, ವಿದ್ಯಾರ್ಥಿ ನಿಲಯದ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಉತ್ತಮ ಸೇವೆ ಮಾಡಿದ ನೌಕರರಾದ ಚಂದ್ರಕಲಾ, ಮೌಲಾಲಿಕಾತರ್, ಜಯಲಕ್ಷೀರನ್ನು ಸನ್ಮಾನಿಸಿದರು.ವರ್ಧತಿ ಮಹೋತ್ಸವ
ಪಾಂಡವಪುರ ಬನ್ನಾರಮ್ಮ ದೇವಸ್ಥಾನ ಟ್ರಸ್ಟ್‌ವತಿಯಿಂದ 12ನೇ ವರ್ಷದ ವರ್ಧತಿ ಮಹೋತ್ಸವ (ವರಮಹಾಲಕ್ಷ್ಮಿ ಹಬ್ಬದ ಪ್ರಯುತ್ತ) ಅಂಗವಾಗಿ ಪಟ್ಟಣದ ಪ್ರಮುಕ ಬೀದಿಗಳಳ್ಳಿ ಪೂಜಾ ಕುಣಿತ, ಟಮಟೆ ಹಾಗೂ ಅಲೆಮನೆ ಬಲರಾಮರವರ ಎತ್ತುಗಳು ಮೆರವಣಿಗೆ ನಡೆಯಿತು. ಈ ವೇಳೆ ಟ್ರಸ್ಟ್ ಅಧ್ಯಕ್ಷ ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಲೆಮನೆ ಬಲರಾಮು, ಕಾರ್ಯದರ್ಶಿ ಎಂ.ರಾಜ್‌ಕುಮಾರ್, ಕೆ.ವೆಂಕಟರಾಮಣೇಗೌಡ, ಸೋಮಶೇಖರ್, ಪುಟ್ಟೇಗೌಡ, ದೇವಾರಾಜು, ಭಾಸ್ಕರಚಾರ್ಯ, ಪ್ರಸನ್ನ, ಶೇಖರ್, ಕೇಶವಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.