ಬೆಲೆ ಏರಿಕೆ ಬಗ್ಗೆ ಸರ್ಕಾರಗಳಿಗೆ ಅರಿವಿಲ್ಲವೇ..?

| Published : Oct 11 2024, 11:49 PM IST

ಸಾರಾಂಶ

ವಿಶೇಷ ಚೇತನರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಸಮಿತಿ ಹಾಗೂ ವಿಶೇಷಚೇತನರು ನಗರದ ಡಾ.ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಶೇಷ ಚೇತನರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಸಮಿತಿ ಹಾಗೂ ವಿಶೇಷಚೇತನರು ನಗರದ ಡಾ.ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿನೋದ ಖೇಡ ಮತಾನಾಡಿ, ವಿಶೇಷಚೇತನರ ಬದುಕು ಹಲವು ವರ್ಷಗಳಿಂದ ಮತ್ತಷ್ಟು ಕಂಗೆಡುತ್ತಿದೆ. ಅವರ ತಂದೆ ತಾಯಂದಿರಿಗೆ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಕಾಡುತ್ತಿದೆ. ಕಾರಣ ಜೀವನ ವೆಚ್ಚದ ನಿರಂತರ ಏರಿಕೆ ಆಹಾರ ವಸ್ತುಗಳು ಇತರೆ ಜೀವನಾವಶ್ಯಕ ವಸ್ತುಗಳು ಮಾತ್ರವಲ್ಲದೆ ಅಂಗವಿಕಲರ ವಿಶೇಷ ಅಗತ್ಯಗಳಾದ ಫಿಜಿಯೋಥೆರಪಿ. ಸ್ವಿಚ್ ಥೆರಪಿ ಒಂದು ಗಂಟೆಗೆ ₹ ೫೦೦ ರಿಂದ ೧೦೦೦ ಅತ್ಯಗತ್ಯ ಔಷಧಿಗಳ ಬೆಲೆ ₹೧೦ ಸಾವಿರದಿಂದ ಲಕ್ಷದವರೆಗೆ ಇವೆ. ಬಡ ತಂದೆ ತಾಯಿಗಳು ಆದಾಯವಿಲ್ಲದ ಅಂಗವಿಕಲರು ಇವುಗಳನ್ನು ಹೇಗೆ ಭರಿಸಬೇಕು ಎಂದು ದೂರಿದರು.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಮಾತನಾಡಿ, ಕೇಂದ್ರ ಸರ್ಕಾರದ ಬಜೆಟ್ ೨೦೧೪-೧೫ರಲ್ಲಿ ₹ ೧೮ ಲಕ್ಷ ಕೋಟಿ ಇದ್ದದ್ದು ೨೦೨೪-೨೫ರಲ್ಲಿ ₹೪೮ ಲಕ್ಷ ಕೋಟಿಗೇರಿದೆ. ಆದರೆ ಅಂಗವಿಕಲರ ಮಾಶಾಸನಕ್ಕಾಗಿ ಕೇಂದ್ರ ಸರ್ಕಾರ ನೀಡಿಕೆ ಕೇವಲ ₹ ೩೦೦ರಲ್ಲೇ ಉಳಿದಿದೆ. ಈ ಹತ್ತು ಹರ್ಷದಲ್ಲಿ ಎಷ್ಟೊಂದು ಬೆಲೆ ಏರಿಕೆಯಾಗಿದೆ ಎಂಬುದು ಕೇಂದ್ರ ಸರಕಾರಕ್ಕೆ ಅರಿವಿಲ್ಲವೇ?. ಇಷ್ಟು ಸಣ್ಣ ಮೊತ್ತ ನೀಡಲು ನಾಚಿಕೆಯಾದರೂ ಆಗುವುದಿಲ್ಲವೇ? ಕೇಂದ್ರ ಸರ್ಕಾರ ತಿಂಗಳಿಗೆ ಕನಿಷ್ಟ ₹ ೫೦೦೦ ನೀಡಬೇಕು. ಇನ್ನು ರಾಜ್ಯ ಸರ್ಕಾರದ ವಿಷಯ ಹತ್ತು ವರ್ಷಗಳಲ್ಲಿ ಮಾಶಾಸನಕ್ಕೆ ತನ್ನ ಪಾಲನ್ನು ₹ ೩೦೦ ರಿಂದ ₹ ೫೦೦ಕ್ಕೆ ಶೇ ೭೫ರಷ್ಟು ಅಂಗವಿಕಲತೆಯುಳ್ಳವರಿಗೆ ₹೭೦೦ ಏರಿಸಿ ಒಟ್ಟಾರೆ ಮಸಾಶನ ₹೧೦,೦೦೦ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಉಮರಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ, ಪರಶುರಾಮ ಗುನ್ನಾಪೂರ, ಎಂ.ಆರ್.ಡಬ್ಲ್ಯೂ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟೆ, ನಿಮಿಷ ಆಚಾರ್ಯ, ಅಂಬಣ್ಣ ಗುನ್ನಾಪೂರ, ಶಂಕ್ರೆಮ್ಮ ಕೋರಿ, ನಿಂಗರಾಜ ಬಿಸನಾಳ, ವಿಠ್ಠಲ ಖರಜಗಿ, ಮುತ್ತು ಸಾತಿಹಾಳ, ರವಿ ರಾಠೋಡ, ಪರಶುರಾಮ ಭೋಸಲೆ, ಶಿವಲಿಲಾ ಬಿರಾದಾರ, ಮೀನಾಕ್ಷಿ ಶಿಂಧೆ, ಸಂತೋಷ ಕಲ್ಲಗುಡಿ, ಮಲ್ಲಿಕಾರ್ಜುನ ಲಂಗೋಟಿ, ಮಹೇಶ ತೋಟದ, ಯಲ್ಲಮ್ಮ ಜಾಧವ, ಸಂತೋಷ ಬಮ್ಮನಳ್ಳಿ, ಮಲ್ಲಿಕಾರ್ಜುನ ಬಿರಾದಾರ, ರಾಜು ತಡಲಗಿ, ರಾಜು, ಕುಮಟಗಿ ಸಬಿಯಾ ಮರ್ತೂರ ಮುಂತಾದವರು ಭಾಗವಹಿಸಿದ್ದರು.