ಪಾರ್ಕಿಂಗ್‌ ವಿಚಾರಕ್ಕೆ ಚಾಲಕರು, ಖಾಕಿ ಮಧ್ಯೆ ವಾಗ್ವಾದ

| Published : Sep 24 2025, 01:03 AM IST

ಪಾರ್ಕಿಂಗ್‌ ವಿಚಾರಕ್ಕೆ ಚಾಲಕರು, ಖಾಕಿ ಮಧ್ಯೆ ವಾಗ್ವಾದ
Share this Article
  • FB
  • TW
  • Linkdin
  • Email

ಸಾರಾಂಶ

ಪಾರ್ಕಿಂಗ್‌ ವಿಚಾರಕ್ಕೆ ವಾಹನ ಚಾಲಕರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದು, ತೀರಾ ವಿಕೋಪಕ್ಕೆ ಹೋಗಿದ್ದರಿಂದ ಚಾಲಕರು ವಾಹನಗಳನ್ನು ರಸ್ತೆಯ ಮೇಲೆ ಅಡ್ಡಗಟ್ಟಿ ರಾಷ್ಟ್ರೀಯ ಹೆದ್ದಾರಿ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಕೆರೂರ

ಪಾರ್ಕಿಂಗ್‌ ವಿಚಾರಕ್ಕೆ ವಾಹನ ಚಾಲಕರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದು, ತೀರಾ ವಿಕೋಪಕ್ಕೆ ಹೋಗಿದ್ದರಿಂದ ಚಾಲಕರು ವಾಹನಗಳನ್ನು ರಸ್ತೆಯ ಮೇಲೆ ಅಡ್ಡಗಟ್ಟಿ ರಾಷ್ಟ್ರೀಯ ಹೆದ್ದಾರಿ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದಲ್ಲಿ ಮಂಗಳವಾರ ಜಾನುವಾರು ಸಂತೆ ನಡೆದಿದ್ದು, ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಇರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ಹೇರಿಕೊಂಡು ಬರುವ ವಾಹನಗಳನ್ನು ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಿಸಿದ್ದರು. ಇದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಇಲ್ಲಿ ನಿಲ್ಲಿಸಬಾರದೆಂದು ಕೆರೂರ ಪಿಎಸ್ಐ ಭೀಮಪ್ಪ ರಬಕವಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡಲು ಹೋದಾಗ ಈ ಗದ್ದಲದ ವಾತಾವರಣ ನಿರ್ಮಾಣವಾಗಿದೆ.

ಸಂಚಾರ ಸ್ಥಗಿತಗೊಂಡು ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಸಿಪಿಐ ಕರಿಯಪ್ಪ ಬನ್ನೆ ಆಗಮಿಸಿ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೆದ್ದಾರಿ ತಡೆ ಗಂಭೀರವಾಗುತ್ತಿದ್ದಂತೆ ಬಾಗಲಕೋಟ ಜಿಲ್ಲಾ ಎಸ್ಪಿ ಸಿದ್ದಾರ್ಥ ಗೋಯಲ್ ಮತ್ತು ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಆಗಮಿಸಿ, ಪ್ರತಿಭಟನಾ ನಿರತರರ ದೂರು ಕೇಳಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ ನಂತರ ರಸ್ತೆ ತಡೆ ಹಿಂಪಡೆದರು.

ಮೂರು ಗಂಟೆಗಳ ಕಾಲ ನಡೆದ ರಸ್ತೆ ತಡೆಯಾಗಿದ್ದರಿಂದ ವಾಹನಗಳ ಸಂಚಾರ ಸುಗಮವಾಗವರೆಗೂ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಪ್ರತಿಭಟನಾ ಸ್ಥಳದಲ್ಲೆ ಇದ್ದು ಪರಿಸ್ಥಿತಿ ನಿಯಂತ್ರಿಸಿದರು.ಠಾಣಾಧಿಕಾರಿ ಭೀಮಪ್ಪ ರಬಕವಿ ವಾಹನಗಳ ಮೇಲೆ ಹಲ್ಲೆ ಮಾಡಿದ ಘಟನೆಯ ಕುರಿತು ಯಾವ ದೂರು ದಾಖಲಾಗಿಲ್ಲ. ಕೆಲ ಜನರ ಚಿತಾವಣೆಯಿಂದ ಹೆದ್ದಾರಿ ತಡೆಯಾಗಿದ್ದು ಅಪರಾಧ, ನಾವು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕಾನೂನು ಕ್ರಮದ ನಿರ್ಧಾರ ತೆಗೆದುಕೊಳ್ಳುತ್ತೇವೆ. ವಿಶ್ವನಾಥರಾವ ಕುಲಕರ್ಣಿ ಡಿ.ಎಸ್.ಪಿ. ಹುನಗುಂದ ವಲಯ