ಅರ್ಜುನ ಲಮಾಣಿ, ಹಣಮಂತ ಕೊಣದಿ ಪೆನಲ್‌ಗೆ ಜಯ

| Published : Jan 09 2025, 12:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಅವಳಿ ಜಿಲ್ಲೆಯ ಸರ್ಕಾರಿ ನೌಕರರು ವಿಶ್ವಾಸವಿಟ್ಟು, ಕೆಲಸ ಕಾರ್ಯಗಳ ಮೇಲೆ ಮತದಾನ ಮಾಡಿ ಇಡೀ ಪೆನೆಲ್‌ನ್ನು ಬಹುಮತದಿಂದ ಆಯ್ಕೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಜಿಒಸಿಸಿ ಬ್ಯಾಂಕ್‌ನ ನೂತನ ನಿದೇರ್ಶಕ ಅರ್ಜುನ ಲಮಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅವಳಿ ಜಿಲ್ಲೆಯ ಸರ್ಕಾರಿ ನೌಕರರು ವಿಶ್ವಾಸವಿಟ್ಟು, ಕೆಲಸ ಕಾರ್ಯಗಳ ಮೇಲೆ ಮತದಾನ ಮಾಡಿ ಇಡೀ ಪೆನೆಲ್‌ನ್ನು ಬಹುಮತದಿಂದ ಆಯ್ಕೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಜಿಒಸಿಸಿ ಬ್ಯಾಂಕ್‌ನ ನೂತನ ನಿದೇರ್ಶಕ ಅರ್ಜುನ ಲಮಾಣಿ ಹೇಳಿದರು.

ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್‌ ಚುನಾವಣೆಯಲ್ಲಿ ಬ್ಯಾಂಕ್‌ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ನಂತರ ವಿಜಯೋತ್ಸವದ ವೇಳೆ ಮಾತನಾಡಿದರು. ಕಳೆದ 15 ವರ್ಷಗಳಿಂದ ನಮ್ಮ ಬ್ಯಾಂಕ್‌ ಪ್ರಗತಿಯಲ್ಲಿದ್ದು, ಉತ್ತಮ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ನೌಕರರು ಇಟ್ಟ ಭರವಸೆಗಳನ್ನು ಉಳಿಸಿಕೊಂಡು ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಮತ ನೀಡಿ ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ನಿರ್ದೇಶಕ ಹಣಮಂತ ಕೊಣದಿ ಮಾತನಾಡಿ, ಚುನಾವಣೆಯಲ್ಲಿ ನಮ್ಮ ಗುರುಸ್ಪಂದನ ಪೆನೆಲ್‌ನ 8 ಜನ ಅಭ್ಯರ್ಥಿಗಳು ಆಯ್ಕೆಯಾಗಿರುವುದು ನಮ್ಮ ಕ್ರೀಯಾಶೀಲತೆಗೆ ಸಾಕ್ಷಿಯಾಗಿದೆ. ನೌಕರರ ಅನುಕೂಲಕ್ಕಾಗಿ ಸಾಕಷ್ಟು ವಿನೂತನ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡುವಂತೆ ಬೆಳೆಸಲಾಗುತ್ತದೆ. ತಮ್ಮೆಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.ವಿಜೇತರಾದ ನಂತರ ದರಬಾರ್ ಪ್ರೌಢಶಾಲೆಯಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಮೂಲಕ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಲಾಯಿತು.

ವಿಜಯೋತ್ಸವದಲ್ಲಿ ನಿರ್ದೇಶಕರಾದ ಅಲ್ಲಾಭಕ್ಷ ವಾಲಿಕಾರ, ಚಂದ್ರಶೇಖರ ಜತ್ತಿ, ಮಲ್ಲಿಕಾರ್ಜುನಸ ಟಕ್ಕಳಕಿ, ಅಶೋಕ ಚನಬಸುಗೋಳ, ಪುಷ್ಪಾ ಗಚ್ಚಿನಮಠ, ಗೀತಾ ಹತ್ತಿ ಸೇರಿದಂತೆ ಪದಾಧಿಕಾರಿಗಳಾದ ಬಿ.ಎಸ್.ಹಿರೇಮಠ, ಅಶೋಕ ದಡಕೆ, ಅಶೋಕ ಭಜಂತ್ರಿ, ಸಾಬು ಗಗನಮಾಲಿ, ಶಾಂತೇಶ ಕಳಸಗೊಂಡ, ಶರಣಬಸು ಬೇನೂರ, ಎಸ್.ವ್ಹಿ.ಹರಳಯ್ಯ, ವೈ.ಟಿ.ಪಾಟೀಲ, ಎಂ.ಎಂ.ವಾಲೀಕಾರ, ಜಯರಾಮ ಚವ್ಹಾಣ, ರಾಜು ಜಾಧವ ಸೇರಿದಂತೆ ಅವಳಿ ಜಿಲ್ಲೆಯ ಶಿಕ್ಷಕ ಸಂಘಟನೆ ಪದಾಧಿಕಾರಿಗಳು, ಹಿತೈಷಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.