ಸಾರಾಂಶ
ಇಂದು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಅಗುತ್ತಿದ್ದು, ಅದಕ್ಕೆ ತಕ್ಕಂತೆ ಮಕ್ಕಳು ಹೊಂದಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಬೆಳೆಯಬೇಕಾದರೆ ಅವರಿಗೆ ಬಾಲ್ಯದಿಂದಲೇ ಉತ್ತಮವಾದ ಶಿಕ್ಷಣ ಅಗತ್ಯ
ಕನ್ನಡಪ್ರಭ ವಾರ್ತೆ ಬನ್ನೂರು
ಶಿಕ್ಷಣಕ್ಕೆ ಮಹತ್ವ ನೀಡುವ ಮೂಲಕ ಪ್ರತಿಯೊಬ್ಬರು ಉತ್ತಮ ವಿಚಾರವನ್ನು ತನ್ನ ಕಲಿಕೆಯ ಸಮಯದಲ್ಲಿ ಕಲಿತರೆ ದೇಶಕ್ಕೆ ಉತ್ತಮ ಪ್ರಜೆ ದೊರೆತಂತೆ ಆಗುತ್ತದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಎಂ.ಎಂ. ಸುರೇಶ್ ಚಂಗಪ್ಪ ಹೇಳಿದರು.ಪಟ್ಟಣದ ಸಮೀಪದ ಕುಳ್ಳನಕೊಪ್ಪಲು ಗ್ರಾಮದ ಆರೋಹಣ ಸೆಂಟ್ರಲ್ ಸ್ಕೂಲ್ನ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಅಗುತ್ತಿದ್ದು, ಅದಕ್ಕೆ ತಕ್ಕಂತೆ ಮಕ್ಕಳು ಹೊಂದಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಬೆಳೆಯಬೇಕಾದರೆ ಅವರಿಗೆ ಬಾಲ್ಯದಿಂದಲೇ ಉತ್ತಮವಾದ ಶಿಕ್ಷಣ ಅಗತ್ಯ ಎಂದು ಅವರು ತಿಳಿಸಿದರು.ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ, ಗ್ರಾಮೀಣ ಭಾಗದಲ್ಲಿ ಅತ್ಯುತ್ತಮವಾದ ಸೌಲಭ್ಯವನ್ನು ಹೊಂದಿ ಮಕ್ಕಳಿಗೆ ಉತ್ತಮವಾದ ವಿದ್ಯೆ ನೀಡುತ್ತಿರುವಂತ ಶಿಕ್ಷಣ ಸಂಸ್ಥೆ ಇದಾಗಿದ್ದು, ಇದರ ಪ್ರಗತಿ ಕಣ್ಣ ಮುಂದೆ ಕಾಣುತ್ತಿದೆ ಎಂದು ಹೇಳಿದರು.
ಎಲ್ಲ ಗಣ್ಯರು ಸೇರಿ ಶಾಲಾ ದಿನದರ್ಶಿಕೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ನಂತರ ಸಾಂಸ್ಕೃತೀಕ ಕಾರ್ಯಕ್ರಮಗಳು ನಡೆಯಿತು.
ಆರೋಹಣ ಶಾಲೆಯ ಅಧ್ಯಕ್ಷ ವೈ.ಎಚ್. ಹನುಮಂತೇಗೌಡ, ಕಾರ್ಯದರ್ಶಿ ಎನ್.ಎಂ. ರಾಮಚಂದ್ರ, ಬಿ.ಎನ್.ಸುರೇಶ್, ಮುಖ್ಯ ಶಿಕ್ಷಕಿಯರಾದ ರೂಪಾ, ವಿಮಲ, ಮಾಣಿಕ್ ಚಂದ್ ಚೌಧರಿ, ಬಿ.ಎಸ್. ಯೋಗೇಂದ್ರ, ಎ.ಆರ್. ಅರವಿಂದ್, ಬಿ.ಕೆ. ವೆಂಕಟೇಶ್ ಪ್ರಸಾದ್, ಬಿ.ಕೆ. ದೀಪಕ್ ಕುಮಾರ್ ಜೈನ್, ಟಿ. ವಾಸುದೇವ, ಎಸ್. ಬಸವೇಗೌಡ, ರಾಕೇಶ್ ಕುಮಾರ್, ಸುಭಾಷ್ ಚೌಧರಿ, ಸುರಜ್, ವೆಂಕಟೇಶ್, ಪೂಜಾ ಇದ್ದರು.--------------