ಸಾರಾಂಶ
ಸ್ಥಳೀಯ ನಿವಾಸಿ ರಾಜೇಶ್ವರಿ ಅವರು, ಇಡಬ್ಲ್ಯುಎಸ್ಮನೆಯ ಕನ್ಸರ್ವೇಶನ್ ರಸ್ತೆಯಲ್ಲಿ ಜನರು ಕಸ ಸುರಿಯುತ್ತಿದ್ದು, ತುಂಬಾ ಕೆಟ್ಟ ವಾಸನೆ ಇರುತ್ತದೆ, ಸ್ವಲ್ಪ ಸ್ವಚ್ಛ ಮಾಡಿಸಿಕೊಡಿ ಎಂದು ಮನವಿ ಮಾಡಿದರು.ಮನೆಯ ಸುತ್ತಮುತ್ತ ನಾಯಿಗಳ ಹಾವಳಿದ್ದು ಬೆಳಗ್ಗೆ ಸಮಯ ಓಡಾಡಲು ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸಿ ಸ್ಥಳೀಯ ನಿವಾಸಿ ಮಹದೇವ್ ಕೋರಿದರು.
- ಅಧಿಕಾರಿಗಳಿಗೆ ಶಾಸಕ ಟಿ.ಎಸ್. ಶ್ರೀವತ್ಸ ಸೂಚನೆ
- ವಾರ್ಡ್ ನಂ. 57ರಲ್ಲಿ ಪಾದಯಾತ್ರೆ----ಕನ್ನಡಪ್ರಭ ವಾರ್ತೆ ಮೈಸೂರು
ವಾರ್ಡ್ ನಂ. 57ರ ಹುಡ್ಕೊ ಮನೆ ಬಳಿ ಇರುವ ಉಮಾಮಹೇಶ್ವರ ಉದ್ಯಾನವನದ ಸುತ್ತಮುತ್ತ ಬೆಳಗ್ಗೆ ಅಧಿಕಾರಿಗಳೊಂದಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸವ ಅವರು ಪಾದಯಾತ್ರೆ ನಡೆಸಿದರು.ರಸ್ತೆ, ನೀರು, ಮರ ಕಡಿಯುವುದು, ಒಳಚರಂಡಿ, ವಿದ್ಯುತ್ ಮುಂತಾದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಕಾರ್ಯ ಮಾಡಲಾಯಿತು.
ಸ್ಥಳೀಯ ನಿವಾಸಿ ರಾಜೇಶ್ವರಿ ಅವರು, ಇಡಬ್ಲ್ಯುಎಸ್ಮನೆಯ ಕನ್ಸರ್ವೇಶನ್ ರಸ್ತೆಯಲ್ಲಿ ಜನರು ಕಸ ಸುರಿಯುತ್ತಿದ್ದು, ತುಂಬಾ ಕೆಟ್ಟ ವಾಸನೆ ಇರುತ್ತದೆ, ಸ್ವಲ್ಪ ಸ್ವಚ್ಛ ಮಾಡಿಸಿಕೊಡಿ ಎಂದು ಮನವಿ ಮಾಡಿದರು.ಮನೆಯ ಸುತ್ತಮುತ್ತ ನಾಯಿಗಳ ಹಾವಳಿದ್ದು ಬೆಳಗ್ಗೆ ಸಮಯ ಓಡಾಡಲು ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸಿ ಸ್ಥಳೀಯ ನಿವಾಸಿ ಮಹದೇವ್ ಕೋರಿದರು.
ವಾರ್ಡ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಇರುವುದು ಕಂಡು ಬರುತ್ತಿದೆ, ಈ ಕೂಡಲೇ ನಿಯಂತ್ರಣ ಕ್ಕೆ ಬರಬೇಕು, ಹಾಗೆಯೆ ಖಾಲಿ ನಿವೇಶನ ಸ್ವಚ್ಛಮಾಡಿಸಿ ನಿವೇಶನ ಮಾಲಿಕರುಗಳಿಗೆ ತಿಳುವಳಿಕೆ ನೀಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.ನಗರಪಾಲಿಕೆ ಮಾಜಿ ಸದಸ್ಯ ಎಂ.ಸಿ. ರಮೇಶ್, ವಲಯ ಅಯುಕ್ತ ಸತ್ಯಮೂರ್ತಿ, ಪರಿಸರ ಎಂಜಿನಿಯರ್ ಅರ್ಪಿತಾ, ಕಿರಿಯ ಎಂಜಿನಿಯರ್ ಮಣಿ, ಪೊಲೀಸ್ ಇನ್ ಸ್ಪೆಕ್ಟರ್ ಧನಂಜಯ, ವಾಣಿವಿಲಾಸ್ ಮಂಜಣ್ಣ, ವಿದ್ಯುತ್ ಇಲಾಖೆ ಮಧನ್ ಮುಂತಾದ ಅಧಿಕಾರಿಗಳು, ಸ್ಥಳಿಯರಾದ ರವಿ, ಹೇಮಂತ್, ದಾಸ್ ವೆಂಕಟೇಶ್, ರವಿಕುಮಾರ್, ಹರೀಶ್, ರಮೇಶ, ಚಲುವರಾಜು, ಕಮಲಮ್ಮ, ಗಿರಿಧರ್, ಯಾದವ್, ಆದಿತ್ಯ ಇದ್ದರು.