ನಾಗೇಂದ್ರ ದೀಕ್ಷಿತ್‌ ನಿವಾಸದಲ್ಲಿ ನವರಾತ್ರಿ ಬೊಂಬೆ ಜೋಡಣೆ

| Published : Sep 27 2025, 02:00 AM IST

ನಾಗೇಂದ್ರ ದೀಕ್ಷಿತ್‌ ನಿವಾಸದಲ್ಲಿ ನವರಾತ್ರಿ ಬೊಂಬೆ ಜೋಡಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಕಲೆಗಳ ತವರೂರಾಗಿದ್ದು, ದಸರಾ ಬಂತೆಂದರೆ ನಾಡಿನ ಜನತೆಗೆ ಸಂಭ್ರಮ, ಸಡಗರ,

ಕನ್ನಡಪ್ರಭ ವಾರ್ತೆ ಮೈಸೂರುನಗರದ ಶ್ರೀರಾಂಪುರದ ನಿವಾಸಿ, ರೇಲ್ವೆ ನಿಲ್ದಾಣದಲ್ಲಿರುವ ಶ್ರೀ ಬಲಮುರಿ ಗಣಪತಿ ದೇವಾಲಯದ ಮುಖ್ಯ ಅರ್ಚಕರಾದ ನಾಗೇಂದ್ರ ದೀಕ್ಷಿತ್‌ ನಿವಾಸದಲ್ಲಿ ನವರಾತ್ರಿ ಅಂಗವಾಗಿ ವಿಶೇಷವಾಗಿ ಬೊಂಬೆಗಳನ್ನು ಜೋಡಣೆ ಮಾಡಿದ್ದು, ನೋಡಗರನ್ನು ಆಕರ್ಷಿಸುತ್ತಿದೆ.ಮೈಸೂರು ಕಲೆಗಳ ತವರೂರಾಗಿದ್ದು, ದಸರಾ ಬಂತೆಂದರೆ ನಾಡಿನ ಜನತೆಗೆ ಸಂಭ್ರಮ, ಸಡಗರ, ಶರನ್ನವರಾತ್ರಿಯ ಸಂದರ್ಭದಲ್ಲಿ 10 ದಿನಗಳ ಕಾಲ ಎಲ್ಲರ ಮನೆಯಲ್ಲೂ ಗೊಂಬೆಗಳ ಜೋಡಣೆಯಲ್ಲಿ ತೊಡಗುವುದೇ ಒಂದು ಸಂಭ್ರಮವಾಗಿದೆ. ತಂದೆ ನಾಗೇಶ್‌ ದೀಕ್ಷಿತ್‌ ಅವರ ಮಾರ್ಗದರ್ಶನದಲ್ಲಿ ಹಲವಾರು ವರ್ಷಗಳಿಂದ ಪುತ್ರರಾದ ನಾಗೇಂದ್ರ ದೀಕ್ಷಿತ್‌, ಹೇಮಂತ್‌ ದೀಕ್ಷಿತ್‌, ಸೊಸೆಯಂದಿರು, ಮೊಮ್ಮಕ್ಕಳು ಹಲವಾರು ವರ್ಷಗಳಿಂದ ಈ ಬೊಂಬೆಗಳ ಜೋಡಣೆ ಮಾಡುತ್ತಿದ್ದು, ಪ್ರತಿದಿನ ಬೊಂಬೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಸಂಬಂಧಿಕರು, ಸ್ಥಳೀಯ ನಿವಾಸಿಗಳು, ಮಕ್ಕಳು, ಸ್ನೇಹಿತರು ಭೇಟಿ ನೀಡಿ, ಬೊಂಬೆಗಳನ್ನು ವೀಕ್ಷಿಸಿ ಸಂಭ್ರಮ ಪಡುತ್ತಿದ್ದಾರೆ.ತಂಜಾವೂರು, ಮೈಸೂರು ಹಾಗೂ ಇತರೆಡೆ ಊರುಗಳಿಂದ ಬೊಂಬೆಗಳನ್ನು ಸಂಗ್ರಹಿಸಿ ತಂದು ನವರಾತ್ರಿಯಲ್ಲಿ ಪ್ರತಿವರ್ಷ ಈ ಒಂದು ಬೊಂಬೆ ಮನೆ ನಿರ್ಮಿಸುತ್ತಾರೆ. ಕೈಲಾಸದಲ್ಲಿ ಶಿವ, ಪಾರ್ವತಿ ಕೈಲಾಸದಲ್ಲಿ ಶಿವ, ಪಾರ್ವತಿ ಪರಿವಾರದಾ ಗಣೇಶ ಕಲ್ಯಾಣ, ಸುಬ್ರಮಣ್ಯ ಕಲ್ಯಾಣ, ಅಯ್ಯಪ್ಪ ಸ್ವಾಮಿ, ಸಿದ್ದಿ, ಬುದ್ದಿ, ವಲ್ಲಿ ದೇವಿ, ಭಕ್ತ ಮಾರ್ಕಂಡೇಯ, ಪೂರ್ಣ ಪುಷ್ಕಲಾಂಭ ವನ್ನು ನಿರ್ಮಿಸಿರುವುದು ಹೆಚ್ಚು ಆಕರ್ಷಿತವಾಗಿದೆ.ಈ ಬೊಂಬೆ ಮನೆ ಪ್ರದರ್ಶನದಲ್ಲಿ ಮಹಾಸರಸ್ವತಿ, ಕೈಲಾಸದಲ್ಲಿ ಶಿವ, ಪಾರ್ವತಿಯರು ಇರುವ, ಮಹಾಕಾಳಿ, ಮಹಾಲಕ್ಷ್ಮೀ, , ಸುಬ್ರಮಣ್ಯ, 6 ಮುಖವಿರುವ ಷಣ್ಮುಖ, ಗಣೇಶನ ವಿವಾಹದ ಒಂದು ನೋಟ ಹೀಗೆ 300ಕ್ಕೂ ಹೆಚ್ಚು ಬೊಂಬೆಗಳನ್ನು ಬಹಳ ಆಕರ್ಷಕವಾಗಿ ಜೋಡಣೆ ಮಾಡಿ, ಪ್ರದರ್ಶಿಸಿದ್ದಾರೆ. ಮೊಮ್ಮಗನಿಂದಲೇ ಬೊಂಬೆಗಳ ಕಲಾಕೃತಿನಾಗೇಶ್‌ ದೀಕ್ಷಿತ್‌ ಅವರ ಮೊಮ್ಮಗ ಯಶಸ್‌ ದೀಕ್ಷಿತ್‌ ಸ್ವತಃ ತಾನೇ ಲಕ್ಷ್ಮೀ ನರಸಿಂಹ ಹಾಗೂ ಕೊಲ್ಲಾಪುರದ ಮಹಾಲಕ್ಷ್ಮೀ ಆಕೃತಿಗಳನ್ನು ನಿರ್ಮಿಸಿದ್ದು ಆಕರ್ಷಣಿಯವಾಗಿದೆ. ಈ ಬೊಂಬೆಗಳ ಜೋಡಣೆಯು ಹಿಂದಿನ ರಾಜ ಮಹಾರಾಜರ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಥೆಗಳನ್ನು ಹೇಳುತ್ತದೆ.