ಸಾರಾಂಶ
ಎನ್.ಆರ್. ಠಾಣೆ ವ್ಯಾಪ್ತಿಯ ಡಿ.ವಿ.ಎನ್ ವೃತ್ತದಿಂದ ನಾಯ್ಡು ನಗರದ ಬಸ್ ಸ್ಟಾಪ್ ವರೆಗೆ ಪಥಸಂಚಲನ ಮೂಲಕ ಮುಂಬರುವ ಲೋಕಸಭೆ ಚುನಾವಣೆ ಮತ್ತು ಶಿವರಾತ್ರಿ ಹಬ್ಬದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.ಡಿಸಿಎಂ ಎಂ. ಮುತ್ತುರಾಜು ನೇತೃತ್ವದಲ್ಲಿ ಎನ್.ಆರ್. ಉಪ ವಿಭಾಗದ ಎಸಿಪಿ ಸುಧಾಕರ್ ಹಾಗೂ ನರಸಿಂಹರಾಜ ಉಪ ವಿಭಾಗದ ಎಲ್ಲಾ ಕಾನೂನು ಸುವ್ಯವಸ್ಥೆ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿ ಈ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ನಗರ ನರಸಿಂಹರಾಜ ಉಪ ವಿಭಾಗದ ನರಸಿಂಹರಾಜ ಠಾಣೆಯ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಲೋಕಸಭಾ ಚುನಾವಣೆ ಮತ್ತು ಶಿವರಾತ್ರಿ ಹಬ್ಬದ ಪ್ರಯುಕ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪಥಸಂಚಲನ ಹಮ್ಮಿಕೊಂಡಿದ್ದರು.ಎನ್.ಆರ್. ಠಾಣೆ ವ್ಯಾಪ್ತಿಯ ಡಿ.ವಿ.ಎನ್ ವೃತ್ತದಿಂದ ನಾಯ್ಡು ನಗರದ ಬಸ್ ಸ್ಟಾಪ್ ವರೆಗೆ ಪಥಸಂಚಲನ ಮೂಲಕ ಮುಂಬರುವ ಲೋಕಸಭೆ ಚುನಾವಣೆ ಮತ್ತು ಶಿವರಾತ್ರಿ ಹಬ್ಬದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಡಿಸಿಎಂ ಎಂ. ಮುತ್ತುರಾಜು ನೇತೃತ್ವದಲ್ಲಿ ಎನ್.ಆರ್. ಉಪ ವಿಭಾಗದ ಎಸಿಪಿ ಸುಧಾಕರ್ ಹಾಗೂ ನರಸಿಂಹರಾಜ ಉಪ ವಿಭಾಗದ ಎಲ್ಲಾ ಕಾನೂನು ಸುವ್ಯವಸ್ಥೆ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿ ಈ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.ಶಿವರಾತ್ರಿಗೆ ಬಿಗಿ ಭದ್ರತೆ
ಮಹಾಶಿವರಾತ್ರಿ ಅಂಗವಾಗಿ ನಗರಾದ್ಯಂತ 3 ಡಿಸಿಪಿ, 12 ಎಸಿಪಿ, 33 ಪಿಐ, 58 ಪಿಎಸ್ಐ, 114 ಎಎಸ್ಐ, 770 ಎಚ್ ಸಿ/ ಪಿಸಿ, 103 ಮಹಿಳಾ ಸಿಬ್ಬಂದಿ, ಕೆಎಸ್ಆರ್ ಪಿ ಮತ್ತು ಸಿಎಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಈ ಸಿಬ್ಬಂದಿ ವಿವಿಧ ದೇವಸ್ಥಾನಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಬಂದೋಬಸ್ತ್ ಕೈಗೊಂಡಿದ್ದರು.