ಪಾಕಿಸ್ತಾನದ ಪರ ಸ್ಟೇಟಸ್ ಹಾಕಿದ ಕಿಡಿಗೇಡಿಯನ್ನು ಬಂಧಿಸಿ

| Published : May 13 2025, 01:16 AM IST

ಪಾಕಿಸ್ತಾನದ ಪರ ಸ್ಟೇಟಸ್ ಹಾಕಿದ ಕಿಡಿಗೇಡಿಯನ್ನು ಬಂಧಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಪರ ಸ್ಟೇಟಸ್ ಪ್ರಕಟಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಬಿಜೆಪಿ ನಗರ ಸಮಿತಿ ವತಿಯಿಂದ ಕೋಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಪರ ಸ್ಟೇಟಸ್ ಪ್ರಕಟಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಬಿಜೆಪಿ ನಗರ ಸಮಿತಿ ವತಿಯಿಂದ ಕೋಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಬಳಿಕ ಸದ್ದಿಗಾರರೊಂದಿಗೆ ಮಾನಾಡಿದ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ನಗರದಲ್ಲಿರುವ ದೇಶದ್ರೋಹಿಗಳ ವಿರುದ್ಧ ಎಪ್.ಐ.ಆರ್ ದಾಖಲಿಸಿ ಅವರನ್ನು ನಾಳೆ ಬೆಳಗ್ಗೆ 10 ಗಂಟೆಯೊಳಗೆ ಬಂಧಿಸಬೇಕು ಎಂದು ಆಗ್ರಹಿಸಿದರು.ದೇಶದ ಸೈನಿಕರೇ ಮಾಹಿತಿ ತಿಳಿದ ತಕ್ಷಣ ದೇಶದ್ರೋಹಿಗಳನ್ನು ಹೆಡೆಮುರಿ ಕಟ್ಟಿ ಒಳಗೆ ಹಾಕುತ್ತಿದೆ. ಅಲ್ಲದೆ ದೇಶದ್ರೋಹಿಗಳಿಗೆ ಸಹಕರಿಸಿದ, ಅವರ ಮನೆಗಳನ್ನೂ ಧ್ವಂಸ ಮಾಡಿ ಶಿಕ್ಷಿಸುತ್ತಿದೆ. ಇಂಥದ್ದರಲ್ಲಿ ಶಿವಮೊಗ್ಗ ಪೊಲೀಸರು ದೇಶದ್ರೋಹಿಗಳನ್ನು ಸುಮ್ಮನೆ ಕರೆದು ವಿಚಾರಿಸಿ ವಾಪಸ್ಸು ಕಳುಹಿಸುತ್ತಿರುವುದನ್ನು ನಾವು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿದರು.ಈ ಹಿಂದೆ ಮಹಾತ್ಮಾ ಗಾಂಧಿ, ವೀರ ಸಾವರಕರ್, ಸ್ವಾಮಿ ವಿವೇಕಾನಂದ ಮೊದಲಾದ ಮಹನೀಯರು ಶಿವಮೊಗ್ಗಕ್ಕೆ ಬಂದು ಹೋಗಿದ್ದಾರೆ. ಇಂಥದ್ದರಲ್ಲಿ ನಗರದ ಕೋಟೆ ಪೊಲೀಸ್‌ ಠಾಣೆ, ತುಂಗಾ ಠಾಣೆ ಮತ್ತು ವಿದ್ಯಾನಗರ ಠಾಣೆಗಳಲ್ಲಿ ಪಾಕಿಸ್ತಾನ ಪರ ಅಭಿಪ್ರಾಯಗಳನ್ನು ಹಂಚಿಕೊಂಡವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆದರೆ ಯಾರೊಬ್ಬರ ವಿರುದ್ಧವೂ ಸರಿಯಾದ ತನಿಖೆಯಾಗುತ್ತಿಲ್ಲ ಎಂದು ಆರೋಪಿಸಿದರು.ದೇಶದ್ರೋಹಿ ಪಾಕಿಗಳಿಗೆ ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾನೆ. ದೇವರಲ್ಲಿ ಪ್ರಾರ್ಥಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ನಾವೂ ಪಾಕಿಗಳಿಗೆ ಒಳ್ಳೆಯದನ್ನು ಮಾಡಬೇಡ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು. ಟ್ಯಾಂಕ್ ಮೊಹಲ್ಲಾದ ನಿವಾಸಿ ಇಬ್ಬುನ ಮನೆಗೆ ಹೋಗೋಣ. ಅಲ್ಲಿ ಏನೇನು ನಡೆಯುತ್ತಿದೆ ನೋಡೋಣ ಎಂದು ಸಿಪಿಐ ಅವರಿಗೆ ಕೇಳಿಕೊಂಡಾಗ, ಈಗ ಬೇಡ ನಾವು, ಆತನನ್ನು ಕರೆಸಿ ವಿಚಾರಿಸಿ ಕಳಿಸಿದ್ದೇವೆ. ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ ಎಂದಾಗ ನಾವೇ ದೇಶದ್ರೋಹಿ ಮನೆಗೆ ಹೋಗ್ತೀವಿ ಅಂತ ಪಟ್ಟು ಹಿಡಿದ್ವಿ. ಸಿಪಿಐ ಅದಕ್ಕೆ ಬೇಡ. ಸಹಕರಿಸಿ ಎಂದು ವಿನಂತಿಸಿಕೊಂಡಿದ್ದಕ್ಕೆ ಇವತ್ತು ಆತನ ಮನೆಗೆ ಹೋಗುವುದನ್ನು ಕೈ ಬಿಟ್ಟಿದ್ದೇವೆ. ಒಂದು ವೇಳೆ ದೇಶದ್ರೋಹಿಗಳನ್ನು ಬಂಧಿಸದಿದ್ದರೆ ಭಾರತೀಯ ಪ್ರತಿಯೊಬ್ಬರಿಗೂ ತಪ್ಪಿತಸ್ಥರನ್ನು ಶಿಕ್ಷಿಸುವ ಅಧಿಕಾರವಿದೆ. ಹಾಗೆ ಮಂಗಳವಾರ ಬೆಳಗ್ಗೆ 10 ಗಂಟೆ ಒಳಗೆ ದೇಶದ್ರೋಹಿಗಳನ್ನು ಬಂಧಿಸದಿದ್ದರೆ ಶಿವಮೊಗ್ಗದ ಪ್ರತಿಯೊಬ್ಬರೂ ಸೈನಿಕರಾಗಿ ಪೊಲೀಸ್‌ ಠಾಣೆ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಮೋಹನ ರೆಡ್ಡಿ, ಪ್ರಮುಖರಾದ ದತ್ತಾತ್ರಿ, ದೀನ ದಾಯಳ, ಸುರೇಖಾ ಮುರಳೀಧರ ಮೊದಲಾದವರಿದ್ದರು.