ಧರ್ಮದ ವಿರುದ್ಧ ಹೇಳಿಕೆ ನೀಡುವವರ ಬಂಧಿಸಿ, ಕಠಿಣ ಕ್ರಮ ಜರುಗಿಸಿ: ಸುತಾರ

| Published : Jan 30 2024, 02:01 AM IST

ಧರ್ಮದ ವಿರುದ್ಧ ಹೇಳಿಕೆ ನೀಡುವವರ ಬಂಧಿಸಿ, ಕಠಿಣ ಕ್ರಮ ಜರುಗಿಸಿ: ಸುತಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಮಲನಗರ ಪಟ್ಟಣದ ಅಲ್ಲಮಪ್ರಭು ವೃತ್ತದ ಬಳಿ ಕಲಬುರಗಿಯ ಕೋಟನೂರ(ಡಿ) ಗ್ರಾಮದಲ್ಲಿ ಅಂಬೇಡ್ಕರ ಪ್ರತಿಮೆಗೆ ಅಪಮಾನ ಖಂಡಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಕಮಲನಗರ:

ಕಲಬುರಗಿ ಜಿಲ್ಲೆಯ ಕೋಟನೂರ(ಡಿ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಮಾಡಿದ ಅವಮಾನ ಖಂಡಿಸಿ ಸೋಮವಾರ ಪಟ್ಟಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಭಾರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಉತ್ತಮ ಸುತಾರ ಮಾತನಾಡಿ, ರಾಜ್ಯದಲ್ಲಿ ಮಹಾತ್ಮರ, ದೇಶಭಕ್ತರ ಮತ್ತು ಮಹಾನ್ ನಾಯಕರ ಪ್ರತಿಮೆಗಳಿಗೆ ಕಿಡಿಗೇಡಿಗಳು ಅವಮಾನಿಸುವ ಘಟನೆಗಳು ಆಗಾಗ ನಡೆಯುತ್ತಿವೆ. ಯಾರೇ ಆಗಲಿ ಯಾವುದೇ ಮಹಾತ್ಮರ, ದಾರ್ಶನಿಕರ ಹಾಗೂ ಧರ್ಮಗಳ ವಿರುದ್ಧ ಹೇಳಿಕೆಗಳನ್ನು ನೀಡುವವರಿಗೆ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದರು.

ಪ್ರವೀಣ ಕದಮ ಮಾತನಾಡಿ, ಕಲಬುರಗಿ ಜಿಲ್ಲೆಯ ಕೋಟನೂರ(ಡಿ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಪಟ್ಟಣದ ಅಲ್ಲಮಪ್ರಭು ವೃತ್ತದಿಂದ ತಹಸೀಲ್ದಾರ್‌ ಕಾರ್ಯಾಲಯದ ವರೆಗೆ ಬೃಹತ ಪ್ರತಿಭಟನಾ ರ್‍ಯಾಲಿ ನಡೆಯಿತು. ಮೆರವಣಿಗೆಯು ಸೋನಾಳ ಮುಖ್ಯ ರಸ್ತೆ, ಪೊಲೀಸ್ ಠಾಣೆ, ಅತಿಥಿ ಗೃಹ, ಡಾ. ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನದಿಂದ ಸಾಗಿ ತಹಸೀಲ್ದಾರ್‌ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ ಅಮೀತಕುಮಾರ ಕುಲಕರ್ಣಿ ಅವರಿಗೆ ಸಲ್ಲಿಸಿದರು.

ಗೋವಿಂದ ತಾಂದಳೆ, ವಿಶ್ವನಾಥ ಮೋರೆ, ನಾರಾಯಣ ವಾಘಮಾರೆ, ಭಾಗವತ ಭೂತಾಳೆ, ಎಸ್‌ಎನ್ ಭಾಸ್ಕರೆ, ಅವಿನಾಶ ಶಿಂಧೆ, ಗೋಪಾಳ ಸೂರ್ಯವಂಶಿ, ಜ್ಞಾನೋಬಾ ಕಾಂಬಳೆ, ಅಮೋಲ ಸೂರ್ಯವಂಶಿ, ವಿಜಯಾನಂದ ವಾನಖೇಡೆ, ರಾಜನ ಸೂರ್ಯವಂಶಿ, ನಿಲೇಶ ಘಾಗರೆ, ವಿಶ್ವನಾಥ ಖತಗಾಂವಕರ್, ಸಚಿನ, ಪ್ರಶಾಂತ, ಬಾಲಾಜಿ ಕಾಲೇಕರ್ ಹಾಗೂ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.