ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಗೋವಿನ ರುಂಡ ಕತ್ತರಿಸಿ ವಿಕೃತಿ ಮೆರೆದು, ಬ್ರಹ್ಮಾವರ - ಹೆಬ್ರಿ ರಸ್ತೆಯ ಕುಂಜಾಲುವಿನ ಮುಖ್ಯ ಪೇಟೆಯಲ್ಲಿ ಹಾಕಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಶ್ರೀ ರಾಮ ಸೇನೆಯ ಮಂಗಳೂರು ವಿಭಾಗ ಕಾರ್ಯಧ್ಯಕ್ಷ ಜಯರಾಂ ಅಂಬೆಕಲ್ಲು ಅವರು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ.ಹಿಂದಿನಿಂದಲೂ ಜನರು ಸಾಮರಸ್ಯದಿಂದ ಬದುಕುತ್ತಿದ್ದ ಕುಂಜಾಲು ಪರಿಸರದಲ್ಲಿ ಈ ಘಟನೆ ನಡೆದಿರುವುದು ಅತ್ಯಂತ ಖೇದಕರವಾಗಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವ ಹಾಗೂ ಕೋಮು ಸೌಹಾರ್ದತೆಯನ್ನು ಕೇರಳಿಸುವ ಷಡ್ಯಂತ್ರವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದದಾರೆ. ಇಂತಹ ಕುಕೃತ್ಯಗಳನ್ನು ಯಾವತ್ತೂ ಹಿಂದೂ ಸಮಾಜ ಸಹಿಸುವುದಿಲ್ಲ, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳದೇ ಈ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಸರ್ಕಾರ ಮಾಡಿದರೆ, ಹಿಂದೂಗಳು ಮುಂದಿನ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಅಂಬೆಕಲ್ಲು ನೇರವಾಗಿ ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ