ಸಿಂಗಾಪುರದಿಂದ ಬನ್ನೇರುಘಟ್ಟಕ್ಕೆ 6 ಬಬೂನ್‌ ಕೋತಿಗಳ ಆಗಮನ

| Published : Mar 29 2024, 02:00 AM IST

ಸಿಂಗಾಪುರದಿಂದ ಬನ್ನೇರುಘಟ್ಟಕ್ಕೆ 6 ಬಬೂನ್‌ ಕೋತಿಗಳ ಆಗಮನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಣಿ ವಿನಿಮಯ ಯೋಜನೆಯಡಿ ಸಿಂಗಾಪುರದಿಂದ ಬನ್ನೇರುಘಟ್ಟ ಉದ್ಯಾನಕ್ಕೆ ಬಬೂನ್‌ ಕೋತಿಗಳನ್ನು ತರಿಸಲಾಗಿದೆ. 1 ತಿಂಗಳ ಕ್ವಾರಂಟೈನ್‌ ಬಳಿಕ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಸಿಂಗಾಪುರ್ ಝೂಲಾಜಿಕಲ್ ಗಾರ್ಡನ್ಸ್‌ನಿಂದ 2 ಗಂಡು ಮತ್ತು 4 ಹೆಣ್ಣು ಹಮಾದ್ರಿಯಾಸ್ ಬಬೂನ್ (ಪಾಪಿಯೊ ಹಮದ್ರಿಯಾಸ್) ಅನ್ನು ತರಲಾಗಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯಂತೆ ಪಶುಸಂಗೋಪನಾ ಇಲಾಖೆ ನಿರ್ದೇಶನದಂತೆ ಹೊರ ದೇಶದಿಂದ ತಂದ ಪ್ರಾಣಿಗಳನ್ನು ಮೃಗಾಲಯಕ್ಕೆ ಸ್ಥಳಾಂತರಿಸುವ ಮೊದಲು ಒಂದು ತಿಂಗಳ ಕಾಲ ಕ್ವಾರಂಟೈನ್ ಮಾಡಬೇಕಿದೆ. ಅದರಂತೆ ಬಬೂನ್‌ಗಳನ್ನು ಕ್ವಾರಂಟೈನ್ ಪ್ರದೇಶದಲ್ಲಿ ಬಿಡಲಾಯಿತು. 1 ತಿಂಗಳ ಬಳಿಕ ಅವುಗಳನ್ನು ಜನರ ದರ್ಶನಕ್ಕೆ ಬಿಡಲಾಯಿತು.

ಈ ಪ್ರಾಣಿ ವಿನಿಮಯವನ್ನು ಯಶಸ್ವಿಗೊಳಿಸುವುದರಲ್ಲಿ ಸಿಂಗಾಪುರ್ ಮೃಗಾಲಯಕ್ಕೆ ಹಾಗೂ ಕಾರ್ಯಕ್ರಮವನ್ನು ಕೈಗೊಳ್ಳಲು ಸಹಾಯ ಮಾಡಿದ ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಕಾರ್ಯದರ್ಶಿಗಳು, ಸದಸ್ಯರು ಮತ್ತು ಮೈಸೂರು ಮೃಗಾಲಯಕ್ಕೂ ಮತ್ತು ಪ್ರೋತ್ಸಾಹಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯ ವಾಹಕ ನಿರ್ದೇಶಕ ವಿಶಾಲ್ ಸೂರ್ಯ ಸೇನ್ ಧನ್ಯವಾದಗಳನ್ನು ತಿಳಿಸಿದ್ದಾರೆ.