ಸಾರಾಂಶ
ಮಂಗಳೂರು ಬಂದರಿಗೆ ಆಗಮಿಸಿದ ಮತ್ತೊಂದು ಪ್ರವಾಸಿಗರ ನೌಕೆ, ಮರ್ಗೋವಾ, ಮುಂಬೈ ಮೂಲಕ ಬಂದ ನೌಕೆ ಬಳಿಕ ಕೊಚ್ಚಿಗೆ ತೆರಳಿತು
ಕನ್ನಡಪ್ರಭ ವಾರ್ತೆ ಮಂಗಳೂರುನವ ಮಂಗಳೂರು ಬಂದರಿಗೆ ಗುರುವಾರ ಇನ್ನೊಂದು ಪ್ರವಾಸಿ ವಿದೇಶಿ ನೌಕೆ ಆಗಮಿಸಿದೆ.
ಸುಮಾರು ೭೦೪ ಮಂದಿ ಪ್ರವಾಸಿಗರು ಮತ್ತು ೬೪೫ ಮಂದಿ ನೌಕಾ ಸಿಬ್ಬಂದಿ ಹೊತ್ತು ಬಂದ ‘ಎಂಎಸ್ ಬೊಲೆಟ್ಟಿ’ ಹೆಸರಿನ ನೌಕೆಗೆ ನವಮಂಗಳೂರು ಬಂದರಿನಲ್ಲಿ ಸಾಂಪ್ರದಾಯಿಕ ಶೈಲಿಯ ಸ್ವಾಗತ ನೀಡಲಾಯಿತು.ಬಳಿಕ ವಿದೇಶಿ ಪ್ರವಾಸಿಗರು ಕಾರ್ಕಳ ಗೊಮ್ಮಟೇಶ್ವರ, ಮೂಡುಬಿದಿರೆಯ ಸಾವಿರ ಕಂಬಗಳ ಬಸದಿ, ಸೈಂಟ್ ಅಲೋಶಿಯಸ್ ಚಾಪೆಲ್, ಶ್ರೀ ಕ್ಷೇತ್ರ ಕದ್ರಿ ಸೇರಿದಂತೆ ಹಲವೆಡೆ ಭೇಟಿ ನೀಡಿದರು. ಮುಂಬೈ, ಮರ್ಗೋವಾ ಮೂಲಕ ಆಗಮಿಸಿದ ಈ ನೌಕೆ ಬಳಿಕ ಕೊಚ್ಚಿನ್‌ಗೆ ತೆರಳಿತು.
ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ.ಆನಂದ್, ಎನ್‌ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ್, ಉಪಾಧ್ಯಕ್ಷ ಕೆ.ಜಿ. ನಾಥ್ ಮತ್ತಿತರು ಇದ್ದರು.