ಕಲೆ, ಪ್ರತಿಭೆ ಯಾರ ಸ್ವತ್ತಲ್ಲ

| Published : Nov 23 2025, 03:30 AM IST

ಸಾರಾಂಶ

ಕಲೆ ಮತ್ತು ಪ್ರತಿಭೆ ಯಾರ ಸ್ವತ್ತಲ್ಲ, ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿದಾಗ ಸಾಧಕರಾಗಲು ಸಾಧ್ಯ ಎಂದು ಜಡಿಮಠದ ಜಡಿ ಸಿದ್ದೇಶ್ವರ ಶಿವಾಚಾರ್ಯರು ನುಡಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಕಲೆ ಮತ್ತು ಪ್ರತಿಭೆ ಯಾರ ಸ್ವತ್ತಲ್ಲ, ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿದಾಗ ಸಾಧಕರಾಗಲು ಸಾಧ್ಯ ಎಂದು ಜಡಿಮಠದ ಜಡಿ ಸಿದ್ದೇಶ್ವರ ಶಿವಾಚಾರ್ಯರು ನುಡಿದರು.

ಪಟ್ಟಣದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆಯ ಸಭಾಭವನದಲ್ಲಿ ಶನಿವಾರ ಕನ್ನಡಪ್ರಭ ಪತ್ರಿಕೆ ಹಮ್ಮಿಕೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂದಗಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆ ದೇವರಹಿಪ್ಪರಗಿ ಸಹಯೋಗದೊಂದಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಆದರೆ, ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂದರು.ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಹಾಗೂ ಪ.ಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ ಮಾತನಾಡಿ, ಸಮಾಜದ ಅಂಕುಡೊಂಕನ್ನು ತಿದ್ದುವ ಪತ್ರಿಕೆಗಳು ಇಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಪರಿಸರ ಸ್ನೇಹಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಅಭಿನಂದನೀಯ ಸಂಗತಿ ತಾಲೂಕು ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಹಾಗೂ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ವಿ.ಕೆ.ಪಾಟೀಲರ ಸಹಕಾರ ನಮ್ಮ ಇಲಾಖೆಗೆ ಯಾವಾಗಲೂ ಇರುತ್ತದೆ ಎಂದರು.ವಲಯ ಅರಣ್ಯ ಅಧಿಕಾರಿ ರಾಜು ಬಿರಾದಾರ ಮಾತನಾಡಿ, ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಲ್ಲಿನ ಪ್ರಕೃತಿಯ ಜ್ಞಾನವನ್ನು ಹೊರಗೆಳೆಯಲು ಪರಿಸರ ಸ್ನೇಹಿ ಚಿತ್ರಕಲೆ ಆಯೋಜಿಸಿರುವುದು ಸಂತಸ ತಂದಿದೆ. ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.ತಾಲೂಕು ಕನ್ನಡಪ್ರಭ ಪತ್ರಿಕೆಯ ಹಿರಿಯ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದೊಂದು ವಿಶೇಷವಾದ ಕಲೆ ಹುದುಗಿರುತ್ತದೆ. ಆ ಕಲೆಯನ್ನು ಬೆಳಕಿಗೆ ತಂದು ಶೋಭಾಯಮಾನವಾಗಿ ಪ್ರಜ್ವಲಿಸುವಂತೆ ಮಾಡುವುದು ನಮ್ಮೆಲ್ಲರ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆ ತಾಲೂಕಿನಲ್ಲಿ ಯಾವಾಗಲೂ ಮುಂದಿದೆ ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರಿಗೆ ಹಾಗೂ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ವಿ.ಕೆ.ಪಾಟೀಲ ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು ತಿಳಿಸಿದರು.ಚಿತ್ರಕಲಾ ಸ್ಪರ್ಧಾ ವಿಜೇತರು:

ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಾದ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪ್ರಮಾಣ ಪತ್ರದ ಜೊತೆ ₹1000 ನಗದು, ದ್ವಿತೀಯ ಬಹುಮಾನ ₹700 ನಗದು ಹಾಗೂ ತೃತೀಯ ಬಹುಮಾನ ₹500 ನಗದು ಪ್ರಶಸ್ತಿ ಪತ್ರವನ್ನು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ತಾಲೂಕಿನ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿದರು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಬಸವರಾಜ ದೇವಣಗಾಂವ, ಪ್ರಕಾಶ ಡೋಣೂರಮಠ, ಕಾನಿಪ ಸಂಘದ ಅಧ್ಯಕ್ಷ ಸಂಗಮೇಶ ಉತ್ನಾಳ, ಅರಣ್ಯ ಅಧಿಕಾರಿಗಳಾದ ಜಿ.ಬಿ.ರಾಮಗಿರಿಮಠ, ಶಿಕ್ಷಕರಾದ ರಾಜಶೇಖರ ಶೆಟ್ಟಿ ಸೇರಿದಂತೆ ತಾಲೂಕಿನ ಪ್ರೌಢಶಾಲೆಯ ಶಿಕ್ಷಕರು, ಸ್ಥಳೀಯ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಕಸಾಪ ತಾಲೂಕು ಅಧ್ಯಕ್ಷರು ಹಾಗೂ ಶಿಕ್ಷಕ ಜಿ.ಪಿ.ಬಿರಾದಾರ ಅವರು ಸ್ವಾಗತಿಸಿ, ನಿರೂಪಿಸಿದರು. ಸ್ಥಳೀಯ ಶಾಲೆಯ ಮುಖ್ಯ ಗುರುಗಳಾದ ಎಂ.ಬಿ.ಬೀಳಗಿ ವಂದಿಸಿದರು.ಪ್ರಶಸ್ತಿ ಪ್ರದಾನ:

8ನೇ ತರಗತಿಯ ವಿಶಾ ಕಾವಳೆ(ಪ್ರಥಮ), ನಿತಿನ್ ನಾ. ಭಾಸಗಿ(ದ್ವಿತೀಯ), ಶಿರೀನ ಬಾಗವಾನ(ತೃತೀಯ).

9ನೇ ತರಗತಿಯ ಸಂಕೇತ ಭೀ.ಸೋಲಾಪುರ(ಪ್ರಥಮ), ಮಿಪರಾ ಮೋಮಿನ(ದ್ವಿತೀಯ), ನಿದಾ ಮಕಾಂದಾರ(ತೃತೀಯ).

10ನೇ ತರಗತಿಯ ವಿದ್ಯಾರ್ಥಿಗಳಾದ ಕಾರ್ತಿಕ ಹರಿಜನ(ಪ್ರಥಮ), ಮಲ್ಲಮ್ಮ ನಾಗರಹಳ್ಳಿ (ದ್ವಿತೀಯ), ಭಾಗ್ಯಶ್ರೀ ಮಲ್ಲಿಕಾರ್ಜುನಮಠ (ತೃತೀಯ) ಹಾಗೂ ಸುಮಾರು 30ಕ್ಕೂ ಹೆಚ್ಚು ಪ್ರೌಢಶಾಲೆಯ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದರು.ಸುಮಾರು 80ಕ್ಕೂ ಅಧಿಕ ಮಂದಿ ಭಾಗಿ

ಕನ್ನಡಪ್ರಭ ಆಯೋಜಿಸಿದ ತಾಲೂಕಿನ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 80ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು. ಸಾಲ ಮರದ ತಿಮ್ಮಕ್ಕ ಅವರ ಪರಿಸರ ಪ್ರೇಮದ,ಅರಣ್ಯ, ವನ್ಯಜೀವಿಗಳ, ಹುಲಿ, ಸಿಂಹ ಚಿರತೆ ಹೀಗೆ ಹತ್ತು ಹಲವು ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು.ದೇವರಹಿಪ್ಪರಗಿ ತಾಲೂಕಿನ ಕಲಾಪ್ರತಿಭೆಗಳನ್ನು ಕನ್ನಡಪ್ರಭ ಪತ್ರಿಕೆ ಅವರನ್ನು ಪ್ರೋತ್ಸಾಹಿಸಿರುವುದು ಹಾಗೂ ಕನ್ನಡಪ್ರಭ ದೇವರಹಿಪ್ಪರಗಿ ಹಿರಿಯ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿಯವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ವಿಶೇಷ ವರದಿಗಳ ಮೂಲಕ ಜನಮಾನಸದಲ್ಲಿದ್ದಾರೆ. ಯುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶ್ಲಾಘನೀಯ.

-ಜಡಿ ಸಿದ್ದೇಶ್ವರ ಶಿವಾಚಾರ್ಯರು,

ಜಡಿಮಠ.

ಕನ್ನಡಪ್ರಭ ವತಿಯಿಂದ ತಾಲೂಕಿನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಅರಣ್ಯ ಅಥವಾ ವನ್ಯಜೀವಿಗಳ ಬಗ್ಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ಯುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಬಯಸುತ್ತೇನೆ ಹಾಗೂ ತಾಲೂಕಿನ ಪ್ರತಿಭೆಗಳು ರಾಜ್ಯ, ರಾಷ್ಟ್ರದಲ್ಲಿ ಮಿಂಚಲಿ ಅವರಿಗೆ ನಮ್ಮ ಸಹಕಾರ ಸದಾ ಇರುತ್ತದೆ. ಸ್ಪರ್ಧಾಳುಗಳಿಗೆ ಶುಭ ಹಾರೈಕೆಗಳು.

-ರಾಜುಗೌಡ ಪಾಟೀಲ ಕುದರಿಸಾಲವಾಡಗಿ,

ಶಾಸಕರು ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ.