ಕಥಾ ಕೀರ್ತನ ಕಲೆಗೆ ಪ್ರೋತ್ಸಾಹ ಅಗತ್ಯ: ಸಿದ್ಧೇಶ್ವರಶಾಸ್ತ್ರಿಗಳು

| Published : Feb 06 2024, 01:32 AM IST

ಸಾರಾಂಶ

ಬದಲಾದ ಕಾಲಘಟ್ಟದಲ್ಲಿ ಕಥಾ ಕೀರ್ತನ ಕಲೆಗೆ ಪ್ರೋತ್ಸಾಹ ಅಗತ್ಯವಿದೆ ಎಂದು ಕಥಾ ಕೀರ್ತನಕಾರ ಸಿದ್ಧೇಶ್ವರಶಾಸ್ತ್ರಿಗಳು ತೆಲ್ಲೂರ ಹೇಳಿದರು.

ಗದಗ: ಅತ್ಯಂತ ಕಠಿಣವಿರುವ ಸಂಗತಿಗಳನ್ನು ಸರಳವಾಗಿ ಅರ್ಥೈಸಿಕೊಳ್ಳುವ ರೀತಿಯಲ್ಲಿ ಜನಮಾನಸಕ್ಕೆ ತಲುಪಿಸುವ ಶಕ್ತಿ ಕಥಾ ಕೀರ್ತನಕ್ಕಿದೆ. ಯಾವುದೇ ಪ್ರಚಾರ ಮಾಧ್ಯಮಗಳು ಇಲ್ಲದ ಕಾಲದಲ್ಲಿ ಆದರ್ಶ ಜೀವನಕ್ಕೆ ಅಗತ್ಯವಿರುವ ಮೌಲ್ಯಗಳನ್ನು ಮನಮುಟ್ಟುವಂತೆ ಕೀರ್ತನಕಾರರು ಪ್ರಸ್ತುತಪಡಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಈ ಕಲೆಗೆ ಪ್ರೋತ್ಸಾಹ ಅಗತ್ಯವಿದೆ ಎಂದು ಕಥಾ ಕೀರ್ತನಕಾರ ಸಿದ್ಧೇಶ್ವರಶಾಸ್ತ್ರಿಗಳು ತೆಲ್ಲೂರ ಹೇಳಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನ, ಕಸಾಪ ಕಾರ್ಯಾಲಯ ಗದಗ ಇಲ್ಲಿ ಜರುಗಿದ ದಿ. ನಾರಾಯಣಭಟ್ ಶಿವಪೂರ ಇವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಶಿವಶರಣೆ ಅಕ್ಕಮಹಾದೇವಿ ಅವರ ಕುರಿತು ಕೀರ್ತನೆಯನ್ನು ನಡೆಸಿ ಮಾತನಾಡಿದರು. ಪೌರಾಣಿಕ ಸನ್ನಿವೇಶಗಳು, ಶರಣರ ಜೀವನ ಚರಿತ್ರೆ ಮುಂತಾದ ವಿಷಯಗಳನ್ನು ರಸವತ್ತಾಗಿ ಸಂಗೀತ ಪ್ರಧಾನತೆಯಿಂದ ಜನಮಾನಸಕ್ಕೆ ತಲುಪಿಸಬಹುದಾಗಿದೆ ಎಂದು ತಿಳಿಸಿದರು. ಅಕ್ಕಮಹಾದೇವಿಯ ಬಾಲ್ಯದಿಂದ ಹಿಡಿದು ಕದಳಿವನಕ್ಕೆ ಸಾಗುವ ಸಂದರ್ಭವನ್ನು ಸುಂದರವಾಗಿ ನಿರೂಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕೀರ್ತನಕಾರರು ಸಕಲಕಲಾವಲ್ಲಭರಾಗಿ ಕಾಣುತ್ತಾರೆ. ವ್ಯಾಖ್ಯಾನಕಾರ, ಹಾಡುಗಾರ, ವಾದ್ಯ ನುಡಿಸುವವರಾಗಿ ಗಮನಸೆಳೆಯುತ್ತಾರೆ. ಗಂಭೀರವಾಗಿರುವ ಆಧ್ಯಾತ್ಮಿಕ ವಿಚಾರಗಳನ್ನು ಅನೇಕ ಕತೆ, ಉಪಕತೆ, ಹಾಸ್ಯ, ಸಂಗೀತದ ಮೂಲಕ ಮನಸ್ಸಿಗೆ ನಾಟುವಂತೆ ತಿಳಿಸುವ ಕಲೆ ಅವರದಾಗಿದೆ ಎಂದರು. ಡಾ. ದತ್ತಪ್ರಸನ್ನ ಪಾಟೀಲರು ನಾರಾಯಣಭಟ್ ಶಿವಪೂರ ಇವರ ಸಾಧನೆ ಕುರಿತು ಮಾತನಾಡಿದರು. ದತ್ತಿದಾನಿಗಳಾದ ವೈದ್ಯ ಡಾ. ಅನಂತ ಶಿವಪೂರ ಮುಂತಾದವರು ಮಾತನಾಡಿದರು. ವೇದಿಕೆ ಮೇಲೆ ಡಾ. ವಾಣಿ ಶಿವಪೂರ ಉಪಸ್ಥಿತರಿದ್ದರು.

ಪಾಟೀಲ ನಿರೂಪಿಸಿದರು. ಬಡ್ಡೂರ ವಂದಿಸಿದರು. ಶಾರದಾ ಕಾತರಕಿ ಸ್ವಾಗತಿಸಿದರು. ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ವಿ.ಎಸ್. ದಲಾಲಿ, ಶಶಿಕಾಂತ ಕೊರ್ಲಹಳ್ಳಿ, ಬಸವರಾಜ ಗಣಪ್ಪನವರ, ರತ್ನಕ್ಕ ಪಾಟೀಲ, ಅಶೋಕ ಬರಗುಂಡಿ, ಎಸ್. ಎಸ್. ಕಳಸಾಪೂರಶೆಟ್ಟರ, ಎಸ್. ಆರ್. ಶಿವಪೂರ, ಮಲ್ಲಿಕಾರ್ಜುನ ಹೂಗಾರ, ಮಂಗಳಾ ತೆಲ್ಲೂರ, ಸ್ಫೂರ್ತಿ ಹಿರೇಮಠ, ಅಶೋಕ ಸತರಡ್ಡಿ, ಶ್ರೀನಿವಾಸ ಕುಲಕರ್ಣಿ, ಮಹೇಶ ಶಟವಾಜಿ, ಡಾ. ಅದ್ವೈತ ಶಿವಪೂರ, ಸಿದ್ದು ಅಂಗಡಿ, ಕೆ. ಡಿ. ನಾಡಿಗೇರ, ಬಸಯ್ಯ ಬಣಕಾರ, ಚಂದ್ರಪ್ಪ ಬಾರಂಗಿ, ಸುರೇಶ ಅಂಗಡಿ, ರತ್ನಾ ಪುರಂತರ, ಶ್ರೀಮತಿ ಯು. ಎಸ್. ಕಣವಿ, ಎಂ. ಎಚ್. ಸವದತ್ತಿ, ಸಿ. ಎಂ. ಮಾರನಬಸರಿ, ಎಸ್. ಎಫ್. ಭಜಂತ್ರಿ, ಡಾ. ರಶ್ಮಿ ಅಂಗಡಿ, ಪಾರ್ವತಿ ಬೇವಿನಮರದ, ಶಂಕರಗೌಡ ಪಾಟೀಲ, ಜಿ. ಎ. ಪಾಟೀಲ, ಈರನಗೌಡ ಮಣಕವಾಡ, ಎಂ.ಎನ್. ಕಾಮನಹಳ್ಳಿ, ಡಿ.ಜಿ. ಕುಲಕರ್ಣಿ, ಸುರೇಶ ಕುಂಬಾರ, ಶಾಂತಲಾ ಹಂಚಿನಾಳ, ಜಯನಗೌಡ ಪಾಟೀಲ, ರಾಜಶೇಖರ ಕರಡಿ ಮೊದಲಾವರು ಉಪಸ್ಥಿತರಿದ್ದರು.