ಜನಪದ ಸಾಹಿತ್ಯದಲ್ಲಿದೆ ಬದುಕು ಕಟ್ಪಿಕೊಳ್ಳುವ ಕಲೆ

| Published : Nov 04 2024, 12:37 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಬದುಕು ಅಂಧಕಾರದಲ್ಲಿ ತುಂಬಿಕೊಂಡಿದೆ. ಇಂದಿನ ಆಧುನಿಕ ಜೀವನ ಶೈಲಿ ಜನರ ಜೀವನವನ್ನು ಆತಂಕಕ್ಕೆ ಒತ್ತಡಕ್ಕೆ ದೂಡುತ್ತಿದೆ

ಗದಗ: ಜನಪದ ಸಾಹಿತ್ಯದಲ್ಲಿ ಬದುಕುವ ಕಲೆ, ಬದುಕುವ ರೀತಿ, ಬದುಕನ್ನು ಕಟ್ಟಿಕೊಳ್ಳುವ ಕಲೆ ಕಾಣಬಹುದು ಎಂದು ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಹೇಳಿದರು.

ಅವರು ನಗರದ ನವಜೋತಿ ಸೇವಾ ಸಂಸ್ಥೆಯ ವ್ಯಸನ ಮುಕ್ತಿ ಕೇಂದ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿ, ಆಧುನಿಕ ದಿನಗಳಲ್ಲಿ ಬದುಕು ಬಹಳಷ್ಟು ಸಂಕೀರ್ಣವಾಗುತ್ತಾ ಹೋಗುತ್ತದೆ, ಬದುಕನ್ನು ಸರಳಗೊಳಿಸಿ ಬದುಕಿದಾಗ ಸಂತೃಪ್ತಿ ದೊರೆಯುತ್ತದೆ. ಜನಪದ ಕಲೆಯಲ್ಲಿ ಬದುಕನ್ನು ಸರಳವಾಗಿಸುವ ರೀತಿ ಇದ್ದು, ದೀಪಾವಳಿ ಹಬ್ಬವು ಎಲ್ಲರ ಬದುಕಿಗೂ ಬೆಳಕು ತರಲಿ ಎಂದರು.

ಸಮಾಜ ಕಾರ್ಯದ ಸಂಶೋಧನಾ ವಿದ್ಯಾರ್ಥಿ ಮಹಮದ್ ಷಾ ನದಾಫ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬದುಕು ಅಂಧಕಾರದಲ್ಲಿ ತುಂಬಿಕೊಂಡಿದೆ. ಇಂದಿನ ಆಧುನಿಕ ಜೀವನ ಶೈಲಿ ಜನರ ಜೀವನವನ್ನು ಆತಂಕಕ್ಕೆ ಒತ್ತಡಕ್ಕೆ ದೂಡುತ್ತಿದೆ. ಸರಳ ಬದುಕು ಶಿಸ್ತಿನ ಜೀವನ ರೂಪಿಸಿಕೊಳ್ಳುವುದು ಅತಿ ಅವಶ್ಯಕ. ಈ ದೀಪಾವಳಿ ದಿನ ವ್ಯಸನಗಳಿಂದ ಕತ್ತಲಿನಲ್ಲಿರುವ ನಮ್ಮ ಬದುಕನ್ನು ವ್ಯಸನ ಮುಕ್ತ ಬೆಳಕಿನೆಡೆಗೆ ತರುವುದು ಅವಶ್ಯಕ ಹಾಗಾಗಿ ಎಲ್ಲರೂ ವ್ಯಸನಮುಕ್ತರಾಗಿ ಬೆಳಕಿನೆಡೆಗೆ ಬರಬೇಕು ಎಂದರು.

ಬಸವರಾಜ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕರಲಿಂಗಣ್ಣವರ ನಿರೂಪಿಸಿದರು. ಶಿವಾನಂದ ಹಡಗಲಿ ಸ್ವಾಗತಿಸಿದರು. ಈಶ್ವರ ಹಟ್ಟಿ ವಂದಿಸಿದರು. ನವಜ್ಯೋತಿ ಸೇವಾ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಚಿಕಿತ್ಸಾರ್ತಿಗಳು ಇದ್ದರು. ಗವಿಶಿದ್ದಯ್ಯ ಹಳ್ಳಿಕೇರಿಮಠ ಜನಪದ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು.