ಸಾರಾಂಶ
ದಿ. ಆದಿತ್ಯ ವಿಕ್ರಮ ಬಿರ್ಲಾಜಿ ಜನ್ಮದಿನ ನಿಮಿತ್ತ ಗ್ರಾಸಿಂ ಜನಸೇವಾ ಟ್ರಸ್ಟ್ ಹಾಗೂ ಬೆಂಗಳೂರಿನ ಕರ್ನಾಟಕ ಮಾರವಾಡಿ ಯುತ್ ಫೆಡರೇಷನ್‍ನಿಂದ ನ.9ರಂದು ಬೆಳಗ್ಗೆ 9.30ರಿಂದ ಸಮೀಪದ ಕುಮಾರಪಟ್ಟಣಂನ ಗ್ರಾಸಿಂ ಸಭಾಂಗಣದಲ್ಲಿ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಆಯೋಜಿಸಲಾಗಿದೆ.
ಹರಿಹರ: ದಿ. ಆದಿತ್ಯ ವಿಕ್ರಮ ಬಿರ್ಲಾಜಿ ಜನ್ಮದಿನ ನಿಮಿತ್ತ ಗ್ರಾಸಿಂ ಜನಸೇವಾ ಟ್ರಸ್ಟ್ ಹಾಗೂ ಬೆಂಗಳೂರಿನ ಕರ್ನಾಟಕ ಮಾರವಾಡಿ ಯುತ್ ಫೆಡರೇಷನ್‍ನಿಂದ ನ.9ರಂದು ಬೆಳಗ್ಗೆ 9.30ರಿಂದ ಸಮೀಪದ ಕುಮಾರಪಟ್ಟಣಂನ ಗ್ರಾಸಿಂ ಸಭಾಂಗಣದಲ್ಲಿ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ಅ.27ರೊಳಗೆ ಮೊ. 87224-29611, 99644-68025, 96204-41554 ಇಲ್ಲಿಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಕರೆ ಮಾಡಿ, ಹೆಸರು ನೋಂದಾಯಿಸಬೇಕು. ಶಿಬಿರದಲ್ಲಿ ಆಯ್ಕೆಯಾದ ಮತ್ತು ಅವಶ್ಯ ಇರುವವರಿಗೆ ಅಳತೆಗಳ ಪ್ರಕಾರ ಕೃತಕ ಕೈ ಮತ್ತು ಕಾಲುಗಳನ್ನು ತಯಾರಿಸಿ, ಜೋಡಣೆ ಮಾಡಲಾಗುವುದು.
ಕೈ ಮತ್ತು ಕಾಲು ತುಂಡಾದವರಿಗೆ ಮಾತ್ರ ಕೃತಕ ಹೊಸ ಕೈ ಮತ್ತು ಕಾಲು ಮಾತ್ರ ಶಿಬಿರದಲ್ಲಿ ಜೋಡಣೆ ಮಾಡಲಾಗುವುದು. ಹೊಸಬರಿಗೆ ಕೈ ಮತ್ತು ಕಾಲುಗಳ ಜೊಡಣೆಗೆ ಆದ್ಯತೆ ನೀಡಲಾಗುವುದು. ಹಳೆಯ ಕೈ ಮತ್ತು ಕಾಲುಗಳ ರಿಪೇರಿ ಮಾಡಲಾಗುವುದಿಲ್ಲ. ಪ್ರಥಮ ನೋಂದಣಿ ಮಾಡಿಸಿದ 200 ಜನರಿಗೆ ಮಾತ್ರ ಕೃತಕ ಕೈ ಮತ್ತು ಕಾಲು ಜೋಡಣೆ ಮಾಡಲಾಗುವುದು.ಅವಶ್ಯವಿದ್ದಲ್ಲಿ ಒಬ್ಬ ಅಂಗವಿಕಲರ ಜೊತೆಗೆ ಒಬ್ಬರು ಸಹಾಯಕರು ಸಹ ಬರಬಹುದು. ಶಿಬಿರದ ಸ್ಥಳದಲ್ಲಿ ಯಾವುದೇ ಹೊಸ ನೋಂದಣಿ ಇರುವುದಿಲ್ಲ ಎಂದು ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ವಿಭಾಗದ ಸಹಾಯಕ ಮುಖ್ಯ ವ್ಯವಸ್ಥಾಪಕ ಮಂಜಪ್ಪ ಮೇಗಳಗೇರೆ ತಿಳಿಸಿದ್ದಾರೆ.
- - -(ಸಾಂದರ್ಭಿಕ ಚಿತ್ರ)