ರೈತರು ಉತ್ತಮ ಬಿತ್ತನೆ ಬೀಜಗಳ ಬಳಕೆ ಮಾಡಬೇಕು: ಶರಣಪ್ಪ ಸಲಹೆ

| Published : Oct 13 2024, 01:02 AM IST

ರೈತರು ಉತ್ತಮ ಬಿತ್ತನೆ ಬೀಜಗಳ ಬಳಕೆ ಮಾಡಬೇಕು: ಶರಣಪ್ಪ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

Farmers should use good sowing seeds: Sharanappa advises

-ಪ್ರಗತಿಪರ ರೈತ ಬಸನಗೌಡ ಜಡಿಯವರ ಹೊಲದಲ್ಲಿ ಹತ್ತಿ ಬೆಳೆ ಕ್ಷೇತ್ರೋತ್ಸವ

-----

ಕನ್ನಡಪ್ರಭ ವಾರ್ತೆ ವಡಗೇರಾ

ರೈತರು ಕಡ್ಡಾಯವಾಗಿ ಭಾರತೀಯ ಗುಣಮಟ್ಟದ ಸಂಸ್ಥೆಯ ಮುದ್ರೆ ಹೊಂದಿದ ಹತ್ತಿ ಬಿತ್ತನೆ ಬೀಜ ಮತ್ತು ಕಂಪನಿಯಲ್ಲಿಯೇ ತಯಾರಿಸಿದ ಬೀಜವನ್ನು ಬಳಕೆ ಮಾಡಬೇಕು ಎಂದು ಸೀಡ್ ವರ್ಕ್ಸ್ ಇಂಟರ್‌ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಜಿಲ್ಲಾ ವ್ಯವಸ್ಥಾಪಕ ಶರಣಪ್ಪ ಹೇಳಿದರು.

ಪಟ್ಟಣದ ಪ್ರಗತಿ ಪರ ರೈತ ಬಸನಗೌಡ ಜಡಿ ಅವರ ಹೊಲದಲ್ಲಿ ಸೀಡ್ ವರ್ಕ್ಸ್ ಇಂಟರ್‌ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹಾಗೂ ಪಟ್ಟಣದ ಸೂಗೂರೇಶ್ವರ ಕೃಷಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹತ್ತಿ ಬೆಳೆ ಕ್ಷೇತ್ರೋತ್ಸವ ಹಾಗೂ ರೈತರಿಗೆ ಸನ್ಮಾನ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರೈತ ಬಂಧುಗಳು ನಕಲಿ ಬೀಜಗಳಿಂದ ಮೋಸ ಹೋಗಬಾರದು. ನಮ್ಮ ಕಂಪನಿ ಯುಎಸ್ ಅಗ್ರಿ ತಳಿಯ ಹತ್ತಿಯು ರೈತರ ನಂಬಿಕೆಗೆ ಅರ್ಹವಾಗಿದ್ದು, ಉತ್ತಮ ಗುಣಮಟ್ಟದ ಇಳುವರಿ ಕೂಡ ಸಿಗುತ್ತದೆ ಎಂದು ಹೇಳಿದರು.

ರೈತ ಬಸನಗೌಡ ಜಡಿ ಮಾತನಾಡಿ, ಯುಎಸ್ ಅಗ್ರಿಯ ತಳಿಯ ಬೀಜಗಳು ಉತ್ತಮವಾಗಿವೆ. ಹಲವು ವರ್ಷಗಳಿಂದ ಈ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದೇವೆ. ಈ ಮೊದಲು ಉತ್ತಮವಾದ ಇಳುವರಿ ಬಂದಿದೆ. ಅತ್ಯಂತ ಎತ್ತರ ಬೆಳೆದಿದ್ದು, ಕಾಯಿಗಳು ಕೂಡ ಗಿಡದಲ್ಲಿ ಹೆಚ್ಚಿವೆ. ಈ ವರ್ಷವು ಕೂಡ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ರೈತರನ್ನು ಸನ್ಮಾನಿಸಲಾಯಿತು. ಸೂಗೂರೇಶ್ವರ ಕೃಷಿ ಕೇಂದ್ರದ ಮಾಲೀಕರಾದ ಮಹಾದೇವ ಸಾಹುಕಾರ, ಕಂಪನಿಯ ಸಿಬ್ಬಂದಿ ಭೀಮಪ್ಪ, ರೈತರಾದ ಭೀಮರಾಯ ಜಡಿ, ಚಾಂದ್ ಹುಸೇನ್, ಬಸನಗೌಡ ಜಡಿ, ಬಸವರಾಜ್ ಡಾವಣ್, ಶರೀಫ್ ಕುರಿ, ಸುಧೀರ್, ನಿಂಗಪ್ಪ, ನರೇಶ್, ಹಣಮಂತ, ದೇವಪ್ಪ, ಮಲ್ಲಪ್ಪ, ಶರಣು, ಮಾರೆಪ್ಪ, ಸೈಯದ್ ಹುಸೇನ್, ಮಲ್ಲಣ್ಣ,ಬಾಬು, ಹೊನ್ನಪ್ಪ, ನಾಗಪ್ಪ, ಸಿದ್ದಪ್ಪ, ಯಲ್ಲಪ್ಪ ಇದ್ದರು.

-----

ಫೋಟೊ:12ವೈಡಿಆರ್4

ವಡಗೇರಾ ಪಟ್ಟಣದ ಪ್ರಗತಿಪರ ರೈತ ಬಸನಗೌಡ ಜಡಿಯವರ ಹೊಲದಲ್ಲಿ ಹತ್ತಿ ಬೆಳೆ ಕ್ಷೇತ್ರೋತ್ಸವ ಹಾಗೂ ರೈತರಿಗೆ ಸನ್ಮಾನ ಸಮಾರಂಭ ನಡೆಯಿತು.