ಸಾರಾಂಶ
ಗುರು ಪೂರ್ಣಿಮೆ ನಿಮಿತ್ತ ಮಾಜಿ ಜಿಪಂ ಸದಸ್ಯ ಅರುಣ ಪಾಟೀಲ್ ಅವರು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದಂಗಳವರನ್ನು ಕಲಬುರಗಿಯ ಬ್ರಹ್ಮಪುರ ಉತ್ತರಾದಿ ಮಠದ ರುಕ್ಮಿಣಿ ಪಾಂಡುರಂಗ ಮಂದಿರದಲ್ಲಿ ಕಂಡು ಆಶೀರ್ವಾದ, ಫಲ, ಮಂತ್ರಾಕ್ಷತೆ ಪಡೆದುಕೊಂಡರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಗುರು ಪೂರ್ಣಿಮೆ ನಿಮಿತ್ತ ಮಾಜಿ ಜಿಪಂ ಸದಸ್ಯ ಅರುಣ ಪಾಟೀಲ್ ಅವರು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದಂಗಳವರನ್ನು ಕಲಬುರಗಿಯ ಬ್ರಹ್ಮಪುರ ಉತ್ತರಾದಿ ಮಠದ ರುಕ್ಮಿಣಿ ಪಾಂಡುರಂಗ ಮಂದಿರದಲ್ಲಿ ಕಂಡು ಆಶೀರ್ವಾದ, ಫಲ, ಮಂತ್ರಾಕ್ಷತೆ ಪಡೆದುಕೊಂಡರು.ಈ ಸಂದರ್ಭದಲ್ಲಿ ಗುರುಗಳು ಅರುಣ ಪಾಟೀಲರೊಂದಿಗೆ ಕೆಲಕಾಲ ಮಾತುಕತೆ ನಡೆಸುತ್ತ ಸುಕ್ಷೇತ್ರ, ಭೀಮಾ ತೀರದ ಮಣ್ಣೂರಲ್ಲಿರುವ ಶ್ರೀ ಮಾಧವ ತೀರ್ಥರು, ಶ್ರೀ ವೇದೇಶತೀರ್ಥರ ವೃಂದಾವನ ಸಮುಚ್ಚಯ ಹಾಗೂ ಚೆನ್ನಕೇಶವ ದೇವರ ಮಂದಿರದಲ್ಲಿ ಭಕ್ತರಿಗೆ, ವಿದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರಿನ ಸವಲತ್ತು ಕಲ್ಪಿಸಬೇಕೆಂದರು.
ಈಗಾಗಲೇ ಮಣ್ಣೂರಿನ ಚೆನ್ನಕೇಶವ ಮಂದಿರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಗುರುಗಳು ಮೆಚ್ಚುಗೆ ಸೂಚಿಸಿದರಲ್ಲದೆ ಬಸ್ ನಿಲ್ದಾಣದಿಂದ ಬೈಪಾಸ್ ಮಠ ಹಾಗೂ ಮಂದಿರ ಎರಡಕ್ಕೂ ರಸ್ತೆ ಸವಲತ್ತು ಕಲ್ಪಿಸಿರೋದರ ಬಗ್ಗೆಯೂ ಮೆಚ್ಚಿಕೊಂಡರು. ಮಠವನ್ನು ಒಳಗೊಂಡಂತೆ ಪ್ರವಾಹ ತಡೆ, ರಕ್ಷಣಾ ಗೋಡೆಯನ್ನು ಕಟ್ಟಿಸಿಕೊಡುವ ಬಗ್ಗೆಯೂ ವಿಷಯ ಪ್ರಸ್ತಾಪಿಸಿದರು.ಇದಲ್ಲದೆ ಭೀಮಾ ನದಿಗೆ ವೃಂದಾವನದ ಸಮುಚ್ಚಯದ ಬಳಿ ಹೊಂದಿಕೊಂಡಂತೆ ಭಕ್ತರಿಗಾಗಿ ಪ್ರತ್ಯೇಕ ಸ್ನಾನ ಘಟ್ಟ ನಿರ್ಮಿಸಿಕೊಡುವ ಬಗ್ಗೆ ಭಕ್ತರ ಆಗ್ರಹ, ಅನುಕೂಲಗಳ ವಿಷಯ ಪ್ರಸ್ತಾಪಿಸಿ , ಅಲ್ಲಿಗೆ ಬಂದು ಹೋಗುವ ಸಾವಿರಾರು ಭಕ್ತರಿಗೆ ಅನುಕೂಲವಾಗುವಂತಹ ಈ ಕೆಲಸಗಳನ್ನು ಬೇಗ ಕೈಗೊಂಡು ಮಾಡಿ ಮುಗಿಸುವಂತೆ ಫಲ ಮಂತ್ರಾಕ್ಷತೆ ನೀಡಿದರು. ಕಲಬುರಗಿ ಭಾಗದ ಉತ್ತರಾದಿ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ, ಪಂ. ವಾಸುದೇವಾಚಾರ್ಯ ಕಾನುಗೋವಿ ಉಪಸ್ಥಿತರಿದ್ದರು.