ಅರ್ವತ್ತೊಕ್ಲು: 19ರಿಂದ ವಿಷ್ಣಪ್ಪ ದೇವರ ವಾರ್ಷಿಕೋತ್ಸವ

| Published : Feb 15 2025, 12:30 AM IST

ಸಾರಾಂಶ

ಮಡಿಕೇರಿ ತಾಲೂಕಿನ ಅರ್ವತ್ತೊಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವರ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಕಟ್ಟುಪಾಡುಗಳನ್ನು ಹಾಕಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ತಾಲೂಕಿನ ಅರ್ವತ್ತೊಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವರ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ಗುರುವಾರ ಗ್ರಾಮದಲ್ಲಿ ಕಟ್ಟುಪಾಡುಗಳನ್ನು ಹಾಕಲಾಯಿತು.

ವಿಷ್ಣಪ್ಪ ದೇವರ ಕುಂಬ್ಯಾರ್ ನಮ್ಮೆ ಎಂದು ಕರೆಯಲ್ಪಡುವ ವಾರ್ಷಿಕೋತ್ಸವ ಫೆಬ್ರವರಿ 19 ರಿಂದ 21 ರ ತಡರಾತ್ರಿ ವರೆಗೆ ಜರುಗಲಿದೆ. 19ರಂದು ಸಂಜೆ ಐದು ಗಂಟೆಗೆ ಭಂಡಾರ ತರುವುದು ಆಂದಿ ಕೊಟ್ಟ್, ದೀಪಾರಾಧನೆ, ಮಹಾಪೂಜೆ, ದೇವರ ಬಲಿ, ಪ್ರಸಾದ ವಿತರಣೆ.

20 ರಂದು ಪಟ್ಟಣಿ, ಮುಂಜಾನೆ 5-30 ಕ್ಕೆ ದೇವರ ನೃತ್ಯ ಪ್ರದಕ್ಷಿಣೆ, ನಡೆ ಭಂಡಾರ, 10-30 ಗಂಟೆಗೆ ತುಲಾಭಾರ, ಪಟ್ಟ್ ಪರಕೆ ಒಪ್ಪಿಸುವುದು, ವಿಶೇಷ ಪೂಜೆಗಳು, ಮಧ್ಯಾಹ್ನ 1-0 ಗಂಟೆಗೆ ಎತ್ತು ಪೋರಾಟ, ಸಂಜೆ 5-30 ಕ್ಕೆ ನೃತ್ಯ ಪ್ರದಕ್ಷಿಣೆ, ನಡೆ ಬಂಡಾರ, ಅನ್ನ ಸಂತರ್ಪಣೆ.

21 ರಂದು ಪೂರ್ವಾಹ್ನ 9-30 ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, 12-30 ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 4-0 ಗಂಟೆಗೆ ದೀಪಾರಾಧನೆ,

ದುಡಿಕೊಟ್ಟ್ ಪಾಟ್, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, 5 ಗಂಟೆಗೆ ದೇವರು ಜಳಕಕ್ಕೆ ಹೊರಡುವುದು , ನಾಗನ ಕಟ್ಟೆಯಲ್ಲಿ ಪೂಜೆ. ಮೂರು ವಸಂತ ಕಟ್ಟೆಯಲ್ಲಿ ಪೂಜೆ, ಗುಳಿಗ ರಾಜನಿಗೆ ವನಪೂಜೆ, ದೇವರ ಜಳಕದ ನಂತರ ದೇವರ ನೃತ್ಯ ಪ್ರದಕ್ಷಿಣೆ, ತಿರಿಕೈ ಭಂಡಾರ, ಊರ ಜನರಿಂದ ಪ್ರಾರ್ಥನೆ, ವಸಂತ ಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

ಸಹಸ್ರಮಾನಗಳ ಕಾಲದ ಇತಿಹಾಸ ವಿರುವ ವಿಷ್ಣಪ್ಪ ದೇವಾಲಯ ಕಾಲಾನಂತರದಲ್ಲಿ ಪಾಳು ಬಿದ್ದಿತ್ತು. 2008 ರಲ್ಲಿ ಗ್ರಾಮಸ್ಥರ ಪರಿಶ್ರಮದಿಂದ ಜೀರ್ಣೋದ್ಧಾರ ಆಗಿ ಗತ ವೈಭವವನ್ನು ಮರಳಿ ಪಡೆದಿದೆ.

ದೇವರ ಕಟ್ಟು ಪಾಡುಗಳನ್ನು ನಿರ್ಣಯಿಸುವ ಸಮಯದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಪೂಜಾರಿರ ಮಾದಪ್ಪ, ಉಪಾಧ್ಯಕ್ಷರಾದ ಪುತ್ತೇರಿರ ಸೋಮಯ್ಯ, ಸ್ಥಳ ದಾನಿಗಳಾದ ಮುಂಜಾದಿರ ರಮೇಶ್, ಊರು ತಕ್ಕರಾದ ತೆನ್ನಿರ ಮೈನಾ, ದೇವ ತಕ್ಕರಾದ ಚಾತುರನ ಅಶೋಕ, ಭಂಡಾರ ತಕ್ಕ ಪೊಡಿಯಂಡ ಕೌಶಿಕ್ ಸುಬ್ಬಯ್ಯ, ಆಡಳಿತ ಮಂಡಳಿ ಖಜಾಂಚಿ ಮುಂಜಾದಿರ ವಾಸು ನಾಣಯ್ಯ, ಕಾರ್ಯದರ್ಶಿ ಗೋವಿಂದಮ್ಮನ ರಾಮಯ್ಯ, ಪ್ರಧಾನ ಅರ್ಚಕರಾದ ದೇವಿ ಪ್ರಸಾದ್, ಆಡಳಿತ ಮಂಡಳಿ ನಿರ್ದೇಶಕರಾದ ಚೆರುಮಾಡಂಡ ಸತೀಶ್ ಸೋಮಣ್ಣ, ಜಬ್ಬಂಡ ರಾಜೀವ್, ಕೋಳುಮಾಡಂಡ ಕಿರಣ್, ಮೂಟೇರ ಪ್ರಭಾಕರ್, ತೆನ್ನಿರ ಮಿಟ್ಟು ಪೆಮ್ಮಯ್ಯ, ತೆನ್ನಿರ ರಮೇಶ್ ಪೊನ್ನಪ್ಪ, ತುಮ್ತಜ್ಜಿರ ಲವಿ,

ಪಳೆಯಂಡ ಪ್ರವೀಣ್, ಚಾತುರನ ಗಣೇಶ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.