ಹಸಿರು ಸಂಪತ್ತು ಹೆಚ್ಚಿಸುವ ರಾಯಭಾರಿಯಾಗಿ

| Published : Jun 09 2025, 02:18 AM IST

ಸಾರಾಂಶ

ಪ್ರತಿಯೊಬ್ಬರೂ ಹಸಿರು ಸಂಪತ್ತನ್ನು ಹೆಚ್ಚಿಸುವ ರಾಯಭಾರಿಗಳಾಗಬೇಕು ಎಂದು ಆರಕ್ಷಕ ನಿರೀಕ್ಷಕ ರಾಜು ತಿಳಿಸಿದರು.

ದಾಬಸ್‍ಪೇಟೆ: ಪ್ರತಿಯೊಬ್ಬರೂ ಹಸಿರು ಸಂಪತ್ತನ್ನು ಹೆಚ್ಚಿಸುವ ರಾಯಭಾರಿಗಳಾಗಬೇಕು ಎಂದು ಆರಕ್ಷಕ ನಿರೀಕ್ಷಕ ರಾಜು ತಿಳಿಸಿದರು.

ಪಟ್ಟಣದ ಉದ್ದಾನೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಮಾತನಾಡಿದರು.ಕಳೆದ ಇಪ್ಪತ್ತು ವರ್ಷಗಳ ಹಿಂದಿನ ಜನಸಂಖ್ಯೆಗೆ, ಇಂದಿನ ಜನಸಂಖ್ಯೆ ದುಪ್ಪಟ್ಟು ಆಗಿದೆ ಆದರೆ ಅರಣ್ಯ ಪ್ರದೇಶ ಹೆಚ್ಚಾಗದೆ ಇರುವುದು ಆತಂಕಕಾರಿ ಬೆಳವಣಿಗೆ, ಹಸಿರೀಕರಣ ಹೊದಿಕೆ ಎಲ್ಲೆಡೆ ಹೆಚ್ಚಾದಾಗ ಮಾತ್ರ ವಾತಾವರಣ ಉತ್ತಮವಾಗುತ್ತದೆ. ಪ್ರತಿಯೊಬ್ಬರು ಸಸಿ ನೆಡುವ ಜೊತೆಗೆ ಅದರ ಪೋಷಣೆಯ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಸೋಂಪುರ ಗ್ರಾ.ಪಂ.ಪಿಡಿಒ ರವಿಶಂಕರ್ ಮಾತನಾಡಿ ನೆಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಜೂ.5ರ ಪರಿಸರ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದ್ದು, ಒಂದು ದಿನಕ್ಕೆ ಸೀಮಿತವಾಗದೇ ಪರಿಸರ ಕಾಳಜಿ ನಿರಂತರವಾಗಿರಬೇಕು. ಪರಿಸರ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಗ್ರಾ.ಪಂ. ಅಧ್ಯಕ್ಷ ಆನಂದ್ ಕುಮಾರ್, ಎಫ್ ಡಿಎ ಮಂಜುನಾಥ್,ಟ ಎಎಸ್‍ಐಗಳಾದ ಮಲ್ಲೇಶ್, ಗಂಗಾಧರ್, ಸಿಬ್ಬಂದಿಗಳಾದ ಗಂಗೇಶ್, ಸಂತೋಷ್, ರಂಗನಾಥ್, ಸುನೀಲ್, ಸುಧಾಕರ್, ರಾಜೇಶ್, ಶ್ರೀನಿವಾಸ್, ಗಂಗಾಧರ್, ಉಪಸ್ಥಿತರಿದ್ದರು.