ಹೆಣ್ಣುಮಕ್ಕಳು ಆದಿಶಕ್ತಿಯ ಪ್ರತಿರೂಪವಿದ್ದಂತೆ: ಭಾರತಿ ಬೆಳಗಲಿ

| Published : Jan 26 2024, 01:48 AM IST

ಹೆಣ್ಣುಮಕ್ಕಳು ಆದಿಶಕ್ತಿಯ ಪ್ರತಿರೂಪವಿದ್ದಂತೆ: ಭಾರತಿ ಬೆಳಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ: ರಬಕವಿಯ ಶ್ರೀಬನಶಂಕರಿ ಅಂಗನವಾಡಿಯಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿದ ಭಾರತಿ ಬೆಳಗಲಿ, ಹೆಣ್ಣುಮಕ್ಕಳು ಯಾವುದೇ ಕುಟುಂಬದಲ್ಲಿ ಜನಿಸಬೇಕಾದರೆ ಅಲ್ಲಿ ಪೂರ್ವ ಜನ್ಮದ ಪುಣ್ಯವಿರುತ್ತದೆ. ಹೆಣ್ಣು ಜನ್ಮ ನೀಡಿ ಪೋಷಿಸುವ ತಾಯಿಯಾಗಿ, ಸಂಸಾರದ ರಥ ಸಮರ್ಥವಾಗಿ ಸಾಗಲು ಪತಿಗೆ ನಿರಂತರ ಸಹಕರಿಸುತ್ತ ಕುಟುಂಬದ ಕುಡಿಗಳ ಭವಿಷ್ಯ ಉಜ್ವಲವಾಗಿಸಲು ಶ್ರಮಿಸುವ, ಕುಟುಂಬ ನಿರ್ವಹಣೆಯಲ್ಲಿ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಪುರುಷನಿಗೆ ಸರಿಸಾಟಿಯಾಗಿ ದುಡಿಯುವ ಮೂಲಕ ಆದಿಶಕ್ತಿಯ ಪ್ರತಿರೂಪವಾಗಿದ್ದಾಳೆಂದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹೆಣ್ಣುಮಕ್ಕಳು ಯಾವುದೇ ಕುಟುಂಬದಲ್ಲಿ ಜನಿಸಬೇಕಾದರೆ ಅಲ್ಲಿ ಪೂರ್ವ ಜನ್ಮದ ಪುಣ್ಯವಿರುತ್ತದೆ. ಹೆಣ್ಣು ಜನ್ಮ ನೀಡಿ ಪೋಷಿಸುವ ತಾಯಿಯಾಗಿ, ಸಂಸಾರದ ರಥ ಸಮರ್ಥವಾಗಿ ಸಾಗಲು ಪತಿಗೆ ನಿರಂತರ ಸಹಕರಿಸುತ್ತ ಕುಟುಂಬದ ಕುಡಿಗಳ ಭವಿಷ್ಯ ಉಜ್ವಲವಾಗಿಸಲು ಶ್ರಮಿಸುವ, ಕುಟುಂಬ ನಿರ್ವಹಣೆಯಲ್ಲಿ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಪುರುಷನಿಗೆ ಸರಿಸಾಟಿಯಾಗಿ ದುಡಿಯುವ ಮೂಲಕ ಆದಿಶಕ್ತಿಯ ಪ್ರತಿರೂಪವಾಗಿದ್ದಾಳೆಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಗು ಭಾರತಿ ಬೆಳಗಲಿ ಹೇಳಿದರು.

ರಬಕವಿಯ ಶ್ರೀಬನಶಂಕರಿ ಅಂಗನವಾಡಿಯಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಇಂದು ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ರಾಷ್ಟ್ರದ ಸರ್ವ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದಾಳೆಂದರು. ಪ್ರತಿ ಹೆಣ್ಣು ಮಗುವಿಗೂ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯವಾಗಿದ್ದು, ಮಗುವಿನ ಭವಿಷ್ಯ ಬೆಳಗಿಸುವತ್ತ ಸರ್ಕಾರಗಳು ಹತ್ತಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಎಲ್ಲರೂ ಬಳಸಿಕೊಂಡು ಉನ್ನತಿ ಸಾಧಿಸಬೇಕೆಂದರು.

ಸವಿತಾ ಕುಂಬಾರ, ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ ಪತ್ತಾರ, ಸಹಾಯಕಿ ಎಸ್.ಎಸ್.ಭಿಲವಡಿ, ಮಂಜುಳಾ ಸಿಕ್ಕಲಗಾರ ಸೇರಿದಂತೆ ಅನೇಕರಿದ್ದರು.