ಹಾಲು ಎಷ್ಟು ಶ್ರೇಷ್ಠವೋ ಅಷ್ಟೇ ಹಾಲುಮತದವರು ಶ್ರೇಷ್ಠ

| Published : Nov 13 2025, 04:15 AM IST

ಹಾಲು ಎಷ್ಟು ಶ್ರೇಷ್ಠವೋ ಅಷ್ಟೇ ಹಾಲುಮತದವರು ಶ್ರೇಷ್ಠ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಯರಗಟ್ಟಿ ಹಾಲು ಎಷ್ಟು ಶ್ರೇಷ್ಠವೋ ಅಷ್ಟೇ ಹಾಲುಮತದವರು ಶ್ರೇಷ್ಠರು ಎಂದು ಶಾಸಕ ವಿಶ್ವಾಸ ವೈದ್ಯ ಬಣ್ಣಿಸಿದರು. ಯರಗಟ್ಟಿ ಪಟ್ಟಣದಲ್ಲಿ ತಾಲೂಕು ಕುರುಬರ ಸಂಘದಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಭವನ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಯರಗಟ್ಟಿ ಪಟ್ಟಣದಲ್ಲಿ 2 ಎಕರೆ ಜಾಗ ಗುರುತಿಸಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಹಾಲು ಎಷ್ಟು ಶ್ರೇಷ್ಠವೋ ಅಷ್ಟೇ ಹಾಲುಮತದವರು ಶ್ರೇಷ್ಠರು ಎಂದು ಶಾಸಕ ವಿಶ್ವಾಸ ವೈದ್ಯ ಬಣ್ಣಿಸಿದರು.

ಯರಗಟ್ಟಿ ಪಟ್ಟಣದಲ್ಲಿ ತಾಲೂಕು ಕುರುಬರ ಸಂಘದಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಭವನ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಯರಗಟ್ಟಿ ಪಟ್ಟಣದಲ್ಲಿ 2 ಎಕರೆ ಜಾಗ ಗುರುತಿಸಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಸುಮಾರು 50 ಸಾವಿರಕ್ಕೂ ಅಧಿಕ ಹಾಲುಮತ ಸಮುದಾಯದ ಜನರಿದ್ದು, ನನಗೆ ಆಶೀರ್ವಾದ ಮಾಡಿ ಪುನರ್ಜನ್ಮ ಕೊಟ್ಟಂತ ದೊಡ್ಡ ಸಮಾಜವೆಂದರೆ ಅದು ಹಾಲುಮತ ಸಮಾಜ. ಚುನಾವಣೆಯಲ್ಲಿ ಗೆಲುವಿಗೆ ಸಹಕಾರ ನೀಡಿದ ಸಮುದಾಯಕ್ಕೆ ಸರ್ಕಾರದ ಎಲ್ಲ ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಸವದತ್ತಿ ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶರಣರು ಹಾಗೂ ದಾಸರ ಕೊಡುಗೆ ಅಪಾರ ಎಂದರು.

ಸಾಹಿತಿ ವೈ.ಎಮ್.ಯಾಕೋಳ್ಳಿ ಮಾತನಾಡಿ, 16ನೇ ಶತಮಾನದಲ್ಲಿನ ಕನಕದಾಸರ ಕೀರ್ತನೆಗಳು ಇಂದಿಗೂ ಮಾನವ ಕುಲಕ್ಕೆ ದಾರಿದೀಪ ಎಂದು ಅಭಿಪ್ರಾಯಪಟ್ಟರು. ಇವರಿಗೆ ದೊರೆತ ಬಂಗಾರವನ್ನು ಬಡವರಿಗೆ ದಾನ ಮಾಡುವ ಮೂಲಕ ಕನಕದಾಸರಾಗಿ ಸಮಾಜಕ್ಕೆ ತ್ಯಾಗ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.ಕಾಗಿನೆಲೆ ಆದಿಕೇಶವ ಎಂಬ ಅಂಕಿತ ನಾಮದೊಂದಿಗೆ ರಚಿಸಿದ ಅವರ ಕೀರ್ತನೆಗಳು ದಾಸ ಸಾಹಿತ್ಯಕ್ಕೆ ಹೊನ್ನಿನ ಕಳಶವಿದ್ದಂತೆ ಎಂದು ಕನಕದಾಸರ ಜೀವನ ಕುರಿತು ಉಪನ್ಯಾಸ ನೀಡಿದರು. ಯುವ ಘಟಕದ ಅಧ್ಯಕ್ಷ ಮಹಾದೇವ ಮುರಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಸಾನಿಧ್ಯವನ್ನು ಸವದತ್ತಿಯ ಶಿವಾನಂದ ಮಹಾಸ್ವಾಮಿಗಳು, ಗಣಪತಿ ಮಹಾರಾಜರು, ದೇವರುಷಿ ಲಕ್ಷ್ಮಣ ದಳವಾಯಿ, ಬಿಡಕಿ ಶಿವಾನಂದ ಮಠದ ಗಂಗಾಧರ ಮಹಾಸ್ವಾಮಿಗಳು, ಮುರಗೋಡ ಸಿಪಿಐ ಐ.ಎಂ.ಮಠಪತಿ, ಸವದತ್ತಿ ಪಿಐ ಧರ್ಮಾಕರ ಧರ್ಮಟ್ಟಿ, ಯರಗಟ್ಟಿ ತಹಸೀಲ್ದಾರ್‌ ಎಂ.ವ್ಹಿ.ಗುಂಡಪ್ಪಗೋಳ, ಸಿಡಿಪಿಒ ಅಮೃತ ಸಾಣಿಕೊಪ್ಪ, ಪೌರ ಇಲಾಖೆಯ ಇಇ ವಿಠ್ಠಲ ತಡಸಲೂರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಂಕರ ಇಟ್ನಾಳ, ಪಪಂ ಅಧಿಕಾರಿ ಮಹೇಶ ಭಜಂತ್ರಿ, ಬಸವರಾಜ ಬಸಳಿಗುಂದಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಪಪಂ ಸದಸ್ಯ ಹಣಮಂತ ಹಾರುಗೊಪ್ಪ, ನಿಖಿಲ ಪಾಟೀಲ, ಪ್ರಕಾಶ ವಾಲಿ, ಮಂಜುನಾಥ ತಡಸಲೂರ, ಶ್ರೀಕಾಂತ ಕಿಲಾರಿ, ಮುದುಕಪ್ಪ ತಡಸಲೂರ, ಉದಯ ಹಾರೂಗೊಪ್ಪ, ಡಿ.ಡಿ.ಟೋಪೋಜಿ, ಆರ್.ಕೆ.ಪಟಾತ್, ಫಕೀರಪ್ಪ ಹದ್ದನ್ನವರ, ಎಫ್.ವೈ.ಗಾಜಿ, ರಾಮಣ್ಣ ದಳವಾಯಿ, ಲಕ್ಷ್ಮಣ ದಳವಾಯಿ, ಶಿವಾನಂದ ಕರಿಗೊನ್ನವರ, ಮುದುಕಪ್ಪ ತಡಸಲೂರ, ಮಹಾಂತೇಶ ಕಿಲಾರಿ, ಬಸು ದಿಡಗನ್ನವರ, ಈರಣ್ಣಾ ಕಿಲಾರಿ, ಶಂಕರ ಹಾರೂಗೊಪ್ಪ, ಸತೀಶ ತಡಸಲೂರ, ಬಸು ಅಡಕಲಗುಂಡಿ ಹಾಗೂ ಕುರುಬ ಸಮಾಜದ ಮುಖಂಡರು ಹಾಜರಿದ್ದರು. ವಿಕ್ರಮ ಇಂಗಳೆ ಹಾಗೂ ಗೋಪಾಲ ದಳವಾಯಿ ನಿರೂಪಿಸಿ, ವಂದಿಸಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿಹಾಲು ಎಷ್ಟು ಶ್ರೇಷ್ಠವೋ ಅಷ್ಟೇ ಹಾಲುಮತದವರು ಶ್ರೇಷ್ಠರು ಎಂದು ಶಾಸಕ ವಿಶ್ವಾಸ ವೈದ್ಯ ಬಣ್ಣಿಸಿದರು.ಯರಗಟ್ಟಿ ಪಟ್ಟಣದಲ್ಲಿ ತಾಲೂಕು ಕುರುಬರ ಸಂಘದಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಭವನ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಯರಗಟ್ಟಿ ಪಟ್ಟಣದಲ್ಲಿ 2 ಎಕರೆ ಜಾಗ ಗುರುತಿಸಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಸುಮಾರು 50 ಸಾವಿರಕ್ಕೂ ಅಧಿಕ ಹಾಲುಮತ ಸಮುದಾಯದ ಜನರಿದ್ದು, ನನಗೆ ಆಶೀರ್ವಾದ ಮಾಡಿ ಪುನರ್ಜನ್ಮ ಕೊಟ್ಟಂತ ದೊಡ್ಡ ಸಮಾಜವೆಂದರೆ ಅದು ಹಾಲುಮತ ಸಮಾಜ. ಚುನಾವಣೆಯಲ್ಲಿ ಗೆಲುವಿಗೆ ಸಹಕಾರ ನೀಡಿದ ಸಮುದಾಯಕ್ಕೆ ಸರ್ಕಾರದ ಎಲ್ಲ ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.