ನೀವು ಒಗ್ಗಟ್ಟಾಗಿರುವವರೆಗೂ ಸಂವಿಧಾನ ಬದಲು ಕನಸು

| Published : May 13 2025, 01:02 AM IST

ನೀವು ಒಗ್ಗಟ್ಟಾಗಿರುವವರೆಗೂ ಸಂವಿಧಾನ ಬದಲು ಕನಸು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ನಿಡಗುಂದಿ ಅಂಬೇಡ್ಕರ್‌ರ ಸಂವಿಧಾನದ ಮಂತ್ರದಿಂದ ದೇಶದ ಎಲ್ಲ ವರ್ಗದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ, ಕೆಲವರಿಂದ ಸಂವಿಧಾನ ತಿದ್ದುವ ಹಾಗೂ ಬದಲಿಸುವ ಮಾತುಗಳು ಕೇಳಿ ಬರುತ್ತಿದ್ದರೂ ನಿಮ್ಮೆಲ್ಲರ ಧ್ವನಿ ಒಗ್ಗಟ್ಟಾಗಿರುವವರೆಗೆ ಅದು ಸಾಧ್ಯವಿಲ್ಲ. ಸೂರ್ಯ ಚಂದ್ರರಿರೋವರೆಗೂ ಡಾ.ಅಂಬೇಡ್ಕರ್ ಅವರ ಆಚಾರ, ವಿಚಾರಗಳು ನಮ್ಮನ್ನು ಮುನ್ನಡೆಸುತ್ತವೆ ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ನಿಡಗುಂದಿ

ಅಂಬೇಡ್ಕರ್‌ರ ಸಂವಿಧಾನದ ಮಂತ್ರದಿಂದ ದೇಶದ ಎಲ್ಲ ವರ್ಗದ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ, ಕೆಲವರಿಂದ ಸಂವಿಧಾನ ತಿದ್ದುವ ಹಾಗೂ ಬದಲಿಸುವ ಮಾತುಗಳು ಕೇಳಿ ಬರುತ್ತಿದ್ದರೂ ನಿಮ್ಮೆಲ್ಲರ ಧ್ವನಿ ಒಗ್ಗಟ್ಟಾಗಿರುವವರೆಗೆ ಅದು ಸಾಧ್ಯವಿಲ್ಲ. ಸೂರ್ಯ ಚಂದ್ರರಿರೋವರೆಗೂ ಡಾ.ಅಂಬೇಡ್ಕರ್ ಅವರ ಆಚಾರ, ವಿಚಾರಗಳು ನಮ್ಮನ್ನು ಮುನ್ನಡೆಸುತ್ತವೆ ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಸಮಿತಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತ್ಯುತ್ಸವ ಹಾಗೂ ಅಂಬೇಡ್ಕರ್ ರತ್ನ ಪ್ರಶಸ್ತಿ ವಿತರಣೆ, ಪ್ರತಿಭಾ ಪುರಸ್ಕಾರ, ತಾಲೂಕು ಛಲವಾದಿ ಮಹಾಸಭಾ ಉದ್ಘಾಟನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಸಾಮೂಹಿಕ ವಿವಾಹದಲ್ಲಿ ಮದುವೆಯಾದ ಎಂಟು ಜೋಡಿಗಳಿಗೆ ವೈಯಕ್ತಿಕವಾಗಿ ತಲಾ ₹ 51 ಸಾವಿರ, ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗೆ ₹ 51 ಸಾವಿರ ಹಾಗೂ ಸನ್ಮಾನಿತರಲ್ಲಿ ಹೆಚ್ಚು ಅಂಕ ಪಡೆದ ಪ್ರತಿ ವಿದ್ಯಾರ್ಥಿಗೆ ₹ 25 ಸಾವಿರ ಠೇವಣಿ ಇಡುವುದಾಗಿ ತಿಳಿಸಿದರು.ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ್ದಾರೆ. 18 ವರ್ಷ ಪೂರ್ಣಗೊಂಡ ಭಾರತೀಯ ಎಲ್ಲ ಪ್ರಜೆಗಳಿಗೆ ಮತದಾನದ ಹಕ್ಕು ನೀಡುವ ಮೂಲಕ ಸಮಾನ ಅವಕಾಶ ಕಲ್ಪಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬುದು ಜಗತ್ತಿಗೆ ತೋರಿಸಿದ್ದಾರೆ. ಯುವ ಜನತೆ ಅವರ ಆದರ್ಶಗಳನ್ನು ಪಾಲಿಸಿ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗುವ ಅಗತ್ಯವಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಕಲಿತು ಸ್ವಾಭಿಮಾನಿಯಾಗಬೇಕು. ಸಿಎಂ ಸಿದ್ದರಾಮಯ್ಯ ಅವರ ದೂರದೃಷ್ಟಿಯ ಪರಿಣಾಮ ₹ 6 ಸಾವಿರ ಕೋಟಿ ಇದ್ದ ಎಸ್ಸಿಪಿ ಟಿಎಸ್ಪಿ ಅನುದಾನ ₹ 40 ಸಾವಿರ ಕೋಟಿ ಬರುತ್ತಿದೆ ಎಂದು ಶ್ಲಾಘಿಸಿದರು.

ನಿವೃತ್ತ ಉಪನ್ಯಾಸಕ ಎಚ್.ಟಿ.ಪೋತೆ, ಮಾಜಿ ಶಾಸಕ ರಾಜು ಆಲಗೂರ, ಉಪನ್ಯಾಸಕಿ ಸುಜಾತಾ ಚಲವಾದಿ, ರಾಜು ಕೂಚಬಾಳ, ಎಚ್.ಎಚ್.ದೊಡಮನಿ ಇತರರು ಮಾತನಾಡಿದರು. ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು ಆಶೀರ್ವಚನ ನೀಡಿದರು.

ಶಿಕ್ಷಣ ಪ್ರೇಮಿ ಸಿದ್ಧಣ್ಣ ನಾಗಠಾಣ, ಅಭಿಷೇಕ ಚಕ್ರವರ್ತಿ, ಸುಭಾಸ ನಾಟೇಕಾರ, ಚಿದಾನಂದ ಕಾಂಬಳೆ, ಸಿ.ಜಿ.ವಿಜಯಕರ, ಚಂದ್ರಕಾಂತ ಸಿಂಗೆ, ಸಂಗಮೇಶ ಬಳಿಗಾರ, ಎಂ.ಎಂ.ಮುಲ್ಲಾ, ಪಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಇಒ ವೆಂಕಟೇಶ ವಂದಾಲ, ಚಂದ್ರು ನುಗ್ಗಲಿ, ಬಿ.ಟಿ.ಗೌಡರ, ಶ್ಯಾಮ ಪಾತ್ರದ, ಜಯಂತ್ಯುತ್ಸವ ಸಮಿತಿ ಮುಖಂಡರಾದ ಶೇಖರ ದೊಡಮನಿ, ಸಿಂದೂರ ಬೈರವಾಡಗಿ, ಪ್ರಶಾಂತ ಚಲವಾದಿ, ಬಸವರಾಜ ಆಲಕೊಪ್ಪರ, ಕಾಮೇಶ ಬಜಂತ್ರಿ, ಡೊಂಗ್ರಿ ಬಜಂತ್ರಿ, ಬಸವರಾಜ ನಿಡಗುಂದಿ ಸೇರಿದಂತೆ ಇತರರಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ, ಸಾಧಕರಿಗೆ ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಮೂಹಿಕ ವಿವಾಹದಲ್ಲಿ ಎಂಟು ಜೋಡಿಗಲು ದಾಂಪತ್ಯಕ್ಕೆ ಕಾಲಿಟ್ಟರು