ಆಶಾಕಿರಣ ಯೋಜನೆಯಿಂದ ಬಡವರಿಗೆ ಅನುಕೂಲ: ಸಚಿವ ಮಂಕಾಳ ವೈದ್ಯ

| Published : Mar 18 2025, 12:35 AM IST

ಆಶಾಕಿರಣ ಯೋಜನೆಯಿಂದ ಬಡವರಿಗೆ ಅನುಕೂಲ: ಸಚಿವ ಮಂಕಾಳ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ಈ ಯೋಜನೆಯ ಸದುಪಯೋಗಪಡೆಯಬೇಖು.

ಭಟ್ಕಳ: ಆರೋಗ್ಯ ಇಲಾಖೆಯ ಆಶಾಕಿರಣ ಕಾರ್ಯಕ್ರಮದಡಿ ಸರಬರಾಜಾದ ಕನ್ನಡಕಗಳ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ 49615 ಕನ್ನಡಕಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ. ಭಟ್ಕಳದಲ್ಲೂ 9245 ಜನರಿಗೆ ಕನ್ನಡ ವಿತರಿಸಲಾಗುತ್ತಿದೆ. ಐದು ವರ್ಷಗಳಿಂದ 80 ವರ್ಷದವರಿಗೂ ಕಣ್ಣಿನ ತಪಾಸಣೆ ನಡೆಸಿ ಕನ್ನಡ ಅಗತ್ಯವಿದ್ದರೆ ಅದನ್ನು ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆಗೆ ಆದ್ಯತೆ ನೀಡಲಾಗಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್ ಬಿ.ವಿ. ಮಾತನಾಡಿ, ಗುಣಮಟ್ಟದ ಕನ್ನಡ ವಿತರಿಸಲಾಗುತ್ತಿದೆ. ಆಶಾಕಿರಣ ಯೋಜನೆಯಡಿ ಬೇರೆ ಕಾಯಿಲೆಗಳಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ಶಂಕರ ಮಾತನಾಡಿ, ಪ್ರತಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲೂ ಶಾಶ್ವತ ದೃಷ್ಟಿ ಕೇಂದ್ರ ಸ್ಥಾಪಿಸಿ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ.ಸಾರ್ವಜನಿಕರು ಈ ಯೋಜನೆಯ ಸದುಪಯೋಗಪಡೆಯ ಬೇಕೆಂದರು. ವೇದಿಕೆಯಲ್ಲಿ ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಾಲಚಂದ್ರ ಮೇಸ್ತ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ ನಾಯ್ಕ ವಂದಿಸಿದರು.

ಆರೋಗ್ಯ ಇಲಾಖೆಯ ಆಶಾಕಿರಣ ಕಾರ್ಯಕ್ರಮದಡಿ ಸರಬರಾಜಾದ ಕನ್ನಡಕಗಳ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿ ಮಾತನಾಡಿದರು.