ಪೂಜಾ ವಿಧಿ ವಿಧಾನದ ಕಾರ್ಯವನ್ನು ಶಾಸ್ತೋಕ್ತವಾಗಿ ನೆರವೇರಿಸಿ ಕಾವೇರಿ ನದಿಗೆ ಮಾಜಿ ಸಿಎಂ ಕೃಷ್ಣರ ಚಿತಾಭಸ್ಮ ವಿಸರ್ಜನೆ

| Published : Dec 16 2024, 12:47 AM IST / Updated: Dec 16 2024, 12:52 PM IST

ಪೂಜಾ ವಿಧಿ ವಿಧಾನದ ಕಾರ್ಯವನ್ನು ಶಾಸ್ತೋಕ್ತವಾಗಿ ನೆರವೇರಿಸಿ ಕಾವೇರಿ ನದಿಗೆ ಮಾಜಿ ಸಿಎಂ ಕೃಷ್ಣರ ಚಿತಾಭಸ್ಮ ವಿಸರ್ಜನೆ
Share this Article
  • FB
  • TW
  • Linkdin
  • Email

ಸಾರಾಂಶ

  ವೈದಿಕರ ತಂಡ ಪೂಜಾ ವಿಧಿ ವಿಧಾನದ ಕಾರ್ಯವನ್ನು ಶಾಸ್ತೋಕ್ತವಾಗಿ ನೆರವೇರಿಸಿಕೊಟ್ಟರು.ಈ ವೇಳೆ ಎಸ್.ಎಂ.ಕೃಷ್ಣರ ಪುತ್ರಿಯರಾದ ಶಾಂಭವಿ, ಮಾಳವಿಕಾ, ಸಹೋದರನ ಪುತ್ರ ಗುರುಚರಣ್ , ಅಮರ್ತ್ಯ ಹೆಗಡೆ ಪತ್ನಿ ಡಿಕೆಶಿ ಪುತ್ರಿ ಐಶ್ವರ್ಯಾ ಸೇರಿದಂತೆ ಕುಟುಂಬ ಸದಸ್ಯರು  ಉಪಸ್ಥಿತರಿದ್ದರು.

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಪಶ್ಚಿಮವಾಹಿನಿಯಲ್ಲಿನ ಕಾವೇರಿ ನದಿಗೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಚಿತಾಭಸ್ಮವನ್ನು ಮೊಮ್ಮಗ ಅಮರ್ತ್ಯ ಹೆಗ್ಡೆ ವಿಸರ್ಜನೆ ಮಾಡಿದರು.

 ವೇದ ಬ್ರಹ್ಮ ಡಾ.ವಿ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವೈಧಿಕರ ತಂಡ ಅಮರ್ತ್ಯ ಹೆಗಡೆ ಮೂಲಕ ಹಿಂದೂ ಸಂಪ್ರದಾಯದ ಪೂಜಾ ವಿಧಿ- ವಿಧಾನಗಳನ್ನು ನೆರವೇರಿಸಿದರು. ನಂತರ ಪವಿತ್ರ ಕಾವೇರಿ ನದಿಗೆ ಮೊಮ್ಮಗನ ಮೂಲಕ ಎಸ್.ಎಂ.ಕೃಷ್ಣರ ಅಸ್ತಿಯನ್ನು ವಿಸರ್ಜಿಸಲಾಯಿತು. ಅರ್ಚಕ ಲಕ್ಷ್ಮೀಶ್ ಸೇರಿದಂತೆ ಇತರ ವೈದಿಕರ ತಂಡ ಪೂಜಾ ವಿಧಿ ವಿಧಾನದ ಕಾರ್ಯವನ್ನು ಶಾಸ್ತೋಕ್ತವಾಗಿ ನೆರವೇರಿಸಿಕೊಟ್ಟರು.

ಈ ವೇಳೆ ಎಸ್.ಎಂ.ಕೃಷ್ಣರ ಪುತ್ರಿಯರಾದ ಶಾಂಭವಿ, ಮಾಳವಿಕಾ, ಸಹೋದರನ ಪುತ್ರ ಗುರುಚರಣ್ , ಅಮರ್ತ್ಯ ಹೆಗಡೆ ಪತ್ನಿ ಡಿಕೆಶಿ ಪುತ್ರಿ ಐಶ್ವರ್ಯಾ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಆಪ್ತ ವಲಯದ ಮುಖ್ಯಸ್ಥರು ಉಪಸ್ಥಿತರಿದ್ದರು.