ಸಾರಾಂಶ
ಚನ್ನಕೇಶವ ದೇವಾಲಯ ಯುನೆಸ್ಕೋ ಸಂಸ್ಥೆಗೆ ಸೇರ್ಪಡೆಯಾಗಿದ್ದು ಪ್ರವಾಸಿಗರ ಸೌಕರ್ಯಗಳಿಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಪಟ್ಟಣದಲ್ಲಿ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯ ಸಂಘಗಳ ಪ್ರಮುಖರುಗಳಿಂದ ಸಲಹೆ ಸಹಕಾರ ಸ್ವೀಕರಿಸಿ ಉತ್ತಮ ಆಡಳಿತ ನಡೆಸಲು ಚಿಂತನೆ ನಡೆಸಿದ್ದೇನೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೇರವಾಗಿ ನನ್ನನ್ನೆ ಭೇಟಿ ಮಾಡಿ ಸಮಸ್ಯೆ ಪರಿಹರಿಸಿ ಕೊಳ್ಳಲಿ ಎಂದು ಪುರಸಭೆ ನೂತನ ಅಧ್ಯಕ್ಷ ಎ.ಆರ್.ಅಶೋಕ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೇಲೂರು
ಪ್ರವಾಸಿ ಕೇಂದ್ರದ ಸಮಗ್ರ ಅಭಿವೃದ್ದಿ ಯೋಜನೆಗಳಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುದು ಎಂದು ಪುರಸಭೆ ನೂತನ ಅಧ್ಯಕ್ಷ ಎ.ಆರ್.ಅಶೋಕ್ ತಿಳಿಸಿದ್ದಾರೆ.ಪುರಸಭೆ ಕಚೇರಿಯಲ್ಲಿ ನಗರದ ಶಿವಜ್ಯೋತಿ ಗಾಣಿಗರ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಕೇಶವ ದೇವಾಲಯ ಯುನೆಸ್ಕೋ ಸಂಸ್ಥೆಗೆ ಸೇರ್ಪಡೆಯಾಗಿದ್ದು ಪ್ರವಾಸಿಗರ ಸೌಕರ್ಯಗಳಿಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಪಟ್ಟಣದಲ್ಲಿ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯ ಸಂಘಗಳ ಪ್ರಮುಖರುಗಳಿಂದ ಸಲಹೆ ಸಹಕಾರ ಸ್ವೀಕರಿಸಿ ಉತ್ತಮ ಆಡಳಿತ ನಡೆಸಲು ಚಿಂತನೆ ನಡೆಸಿದ್ದೇನೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೇರವಾಗಿ ನನ್ನನ್ನೆ ಭೇಟಿ ಮಾಡಿ ಸಮಸ್ಯೆ ಪರಿಹರಿಸಿ ಕೊಳ್ಳಲಿ ಎಂದರು.
ಗಾಣಿಗರ ಸಂಘದ ಅಧ್ಯಕ್ಷ ಬಿ.ಎಲ್ ನಾಗರಾಜು ಮಾತನಾಡಿ, ಅಧ್ಯಕ್ಷರಾದ ಅಶೋಕ್ ರವರು ಯುವಕರಾಗಿದ್ದು ಕಳೆದ ಎರಡು ಬಾರಿ ಸದಸ್ಯರಾಗಿರುವ ಅವರು ಉತ್ತಮ ಆಡಳಿತ ನೀಡುತ್ತಾರೆ ಎಂದರು.ಕಾರ್ಯದರ್ಶಿ ಎನ್.ಅನಂತು ಮಾತನಾಡಿ, ಪಟ್ಟಣದಲ್ಲಿ ಸಮರ್ಪಕ ಕುಡಿಯುವ ನೀರಿನ ಯೋಜನೆ ಬೀದಿ ದೀಪ, ರಸ್ತೆ, ಚರಂಡಿಗಳ ನಿರ್ಮಾಣ ಮಾಡುವ ಮೂಲಕ ನೂತನ ಅಧ್ಯಕ್ಷರು ನಗರವನ್ನು ಮಾದರಿಯಾಗಿ ಮಾಡುವಂತೆ ಮನವಿ ಮಾಡಿದರಲ್ಲದೆ ಇತ್ತೀಚೆಗೆ ಚನ್ನಕೇಶವ ದೇವಾಲಯ ಯುನೆಸ್ಕೋ ಪಟ್ಟಿಗೆ ಸೇರಿರುವುದರಿಂದ ಹೆಚ್ಚಿನ ಅನುದಾನ ತರಲು ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದರು.
ಈ ವೇಳೆ ಗಾಣಿಗರ ಸಂಘದ ಖಜಾಂಚಿ ಬಿ.ಎಸ್.ಮಂಜುನಾಥ್, ನಿರ್ದೇಶಕರಾದ ಚಂದ್ರಶೇಖರ್, ಬಿ.ಎನ್.ರಮೇಶ್, ಪುರಸಭಾ ಸದಸ್ಯರಾದ ಜಗದೀಶ್, ಉಪಸ್ಥಿತರಿದ್ದರು.