ಪಟಾಕಿ ವ್ಯಾಪಾರಿಗಳಿಗೆ ಎಎಸ್ಪಿ ವೆಂಕಟೇಶ್‌ ನಾಯ್ಡು ಮುಂಜಾಗ್ರತೆ ಪಾಠ

| Published : Oct 09 2024, 01:37 AM IST

ಸಾರಾಂಶ

ಪಟಾಕಿ ಮಾರಾಟದ ವೇಳೆ ಉಂಟಾಗುವ ಅವಘಡದಿಂದ ಹೇಗೆ ರಕ್ಷಣೆ ಪಡೆಯಬೇಕು ಎನ್ನುವ ಬಗ್ಗೆ ಪಟಾಕಿ ವ್ಯಾಪಾರಸ್ಥರಿಗೆ ಹಮ್ಮಿಕೊಳ್ಳಲಾಗಿದ್ದ ಅಗ್ನಿ ಶಮನ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ನಾಯ್ಡು ತಿಳಿಸಿಕೊಟ್ಟರು. ಪಟಾಕಿ ವ್ಯಾಪಾರ ಮಾಡುವವರಿಗೆ ಅಧಿಕಾರಿಗಳು ನಮಗೆ ಯಾವ ರೀತಿ ಸಹಕಾರ ಕೊಟ್ಟಿರುವುದಿಲ್ಲ ಎನ್ನುವ ಮಾತು ಬರಬಾರದು ಎಂದು ಇಂತಹ ಜಾಗೃತಿ ಕಾರ್ಯಾಗಾರ ನಡೆಸಿ ನಿಮಗೆ ಶಾಶ್ವತವಾದ ಒಂದು ಸರ್ಟಿಫಿಕೆಟನ್ನು ವಿತರಣೆ ಮಾಡುವ ನಿರ್ಧಾರ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಪಟಾಕಿ ಮಾರಾಟದ ವೇಳೆ ಉಂಟಾಗುವ ಅವಘಡದಿಂದ ಹೇಗೆ ರಕ್ಷಣೆ ಪಡೆಯಬೇಕು ಎನ್ನುವ ಬಗ್ಗೆ ಪಟಾಕಿ ವ್ಯಾಪಾರಸ್ಥರಿಗೆ ಹಮ್ಮಿಕೊಳ್ಳಲಾಗಿದ್ದ ಅಗ್ನಿ ಶಮನ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ನಾಯ್ಡು ತಿಳಿಸಿಕೊಟ್ಟರು. ನಗರದ ಸಾಲಗಾಮೆ ರಸ್ತೆಯ ಸುಬೇಧಾರ್ ವೃತ್ತದ ಬಳಿ ಇರುವ ಸತ್ಯಕಾಂತ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀ ಹಾಸನಾಂಬ ಪಟಾಕಿ ವರ್ತಕರ ಸಂಘ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಅಗ್ನಿಶಮನ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟಾಕಿ ವ್ಯಾಪಾರ ಮಾಡುವವರಿಗೆ ಅಧಿಕಾರಿಗಳು ನಮಗೆ ಯಾವ ರೀತಿ ಸಹಕಾರ ಕೊಟ್ಟಿರುವುದಿಲ್ಲ ಎನ್ನುವ ಮಾತು ಬರಬಾರದು ಎಂದು ಇಂತಹ ಜಾಗೃತಿ ಕಾರ್ಯಾಗಾರ ನಡೆಸಿ ನಿಮಗೆ ಶಾಶ್ವತವಾದ ಒಂದು ಸರ್ಟಿಫಿಕೆಟನ್ನು ವಿತರಣೆ ಮಾಡುವ ನಿರ್ಧಾರ ಮಾಡಲಾಗಿದೆ. ಪಟಾಕಿ ಎಂಬುದು ದೀಪಾವಳಿಯಲ್ಲಿ ಮನರಂಜನೆಗಾಗಿ ಮಾಡುತ್ತಾರೆ. ಇನ್ನು ಕೆಲವು ಸಮಯದಲ್ಲಿ ರಾಜಕಾರಣಿಗಳ ಕಾರ್ಯಕ್ರಮ ಸೇರಿದಂತೆ ಇತರೆ ಸಮಾರಂಭಗಳಿಗಾಗಿ ಉಪಯೋಗಿಸುತ್ತಾರೆ. ಮೀಡಿಯ, ಇತರೆಗಳಿಂದ ಪಟಾಕಿ ಬಗ್ಗೆ ತಿಳಿವಳಿಕೆ ಬಂದಿದೆ. ಪಟಾಕಿ ವ್ಯಾಪಾರ ಮಾಡುವಾಗ ಸುರಕ್ಷತೆ ಅತೀ ಮುಖ್ಯ. ಪಟಾಕಿಯಿಂದ ಅನೇಕ ಅವಘಡಗಳು ಸಂಭವಿಸಿ ಪ್ರಾಣವೇ ತೆಗೆದುಕೊಂಡಿದೆ. ಇದೊಂದು ರೀತಿ ಸ್ಫೋಟಕವೇ ಆಗಿದೆ. ಪಟಾಕಿ ಬಗ್ಗೆ ತಿಳಿವಳಿಕೆ ಬೇಕಾಗಿದೆ. ಇನ್ನು ಪಟಾಕಿಯಿಂದ ಉಂಟಾಗುವ ಅವಘಡದಿಂದ ರಕ್ಷಣೆ ಹೇಗೆ ಪಡೆಯಬೇಕು? ಈ ನಿಟ್ಟಿನಲ್ಲಿ ವ್ಯಾಪಾರಸ್ಥರಿಗೆ ಒಂದು ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು. ಪಟಾಕಿ ವ್ಯಾಪಾರ ಮಾಡುವಾಗ ಯಾರೋ ಒಬ್ಬರೂ ಬೀಡಿ, ಸಿಗರೇಟ್ ಸೇದಿ ಎಸೆದಾಗ ಆಗುವ ಅನಾಹುತದಲ್ಲಿ ನೀವು ಸೇರಬಹುದು. ಇದರಿಂದ ದೂರವಿರಲು ಮೊದಲೇ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಗ್ರೇಡ್-೨ ತಹಸೀಲ್ದಾರ್ ರಮೇಶ್ ಮಾತನಾಡಿ, ಪಟಾಕಿ ಬಳಸುವಿಕೆ ಮತ್ತ ಮಾರಾಟದ ಬಗ್ಗೆ ಎಚ್ಚರ ವಹಿಸಬೇಕು. ಮಾರಾಟ ಮಾಡುವಾಗಲು ಸುರಕ್ಷತೆ ಅಗತ್ಯ. ಈ ಎಲ್ಲಾವುದರ ಬಗ್ಗೆ ತಿಳಿಯಲು ಇಂತಹ ತರಬೇತಿ ಪ್ರಮುಖವಾಗಿದೆ. ಕೇವಲ ಲಾಭದ ದೃಷ್ಠಿಯಲ್ಲಿ ಈ ಪಟಾಕಿ ವ್ಯಾಪಾರ ಮಾಡಬೇಡಿ. ಇದರಿಂದ ಬಹಳಷ್ಟು ಅನಾಹುತವನ್ನು ಇದರಿಂದ ನೋಡಿದ್ದೇವೆ. ಯಾವುದೇ ರೀತಿಯಲ್ಲಿ ಅನಾಹುತಕ್ಕೆ ಅವಕಾಶ ಆಗಾದ ರೀತಿಯಲ್ಲಿ ಸಣ್ಣ ರೀತಿಯಲ್ಲೂ ಬೇಜವಾಬ್ದಾರಿ ಮಾಡದೇ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಪಟಾಕಿ ವ್ಯಾಪಾರ ಮಾಡುವವರು ಮತ್ತು ಕೊಂಡುಕೊಳ್ಳವವರು ಯಾವ ರೀತಿಯ ಅನಾಹುತಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು. ಇದೇ ವೇಳೆ ಅಗ್ನಿ ಶಮನ ದಳದ ಅಧಿಕಾರಿ ಕೆ.ಟಿ. ನವೀನ್ ಕುಮಾರ್‌ ಮಾತನಾಡಿ, ಪಟಾಕಿ ಮೂಲಕ ಏನೇನೂ ತೊಂದರೆ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಮುನ್ನೆಚರಿಕ ಕ್ರಮಕೈಗೊಂಡು ಸಾವಿನ ಪ್ರಮಾಣ ಕಡಿಮೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಕಳೆದ ವರ್ಷದ ತರಬೇತಿ ಕೊಡಲಾಗಿತ್ತು. ಆದರೆ ಯಾವ ಸರ್ಟಿಫಿಕೆಟ್ ನೀಡಿರಲಿಲ್ಲ. ಈ ವರ್ಷ ತರಬೇತಿ ಪಡೆದ ಎಲ್ಲರಿಗೂ ಸರ್ಟಿಫಿಕೆಟ್ ನೀಡುವಂತೆ ಡಿಸಿ ಸಭೆಯಲ್ಲಿ ಸೂಚಿಸಲಾಗಿದೆ ಎಂದರು. ೨೫೫೦ ರು. ಶುಲ್ಕವನ್ನು ಪಾವತಿಸಿ ಸರ್ಟಿಫಿಕೆಟ್ ಪಡೆಯುವ ಕಾರ್ಯಕ್ರಮವಾಗಿದೆ ಎಂದರು. ೫೫ ಜನರು ಪ್ರತಿವರ್ಷ ನೀವೆ ಪಟಾಕಿ ವ್ಯಾಪಾರ ಮಾಡುತ್ತಿದ್ದೀರಿ. ಪಟಾಕಿ ವ್ಯಾಪಾರ ಮಾಡುವಾಗ ಬಕೆಟ್‌ನಲ್ಲಿ ನೀರು ಇಡಿ, ಮರಳು, ಸುರಕ್ಷತೆಯ ಯಂತ್ರಗಳನ್ನು ಜೊತೆಯಲ್ಲಿ ಇಟುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಗಿಡ್ಡೇಗೌಡ, ಶಿರಸ್ತೆದಾರರಾದ ಯಶೋಧರ್‌, ಪಟಾಕಿ ವರ್ತಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.