ಸಾರಾಂಶ
ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಸುಧಾರಿತ ಆಡಳಿತ ಮತ್ತು ಅಂಗನವಾಡಿ ಪೋಷಣ ಅಭಿಯಾನದಲ್ಲಿ ಉತ್ತಮ ಪ್ರಗತಿಯನ್ನು ಗುರುತಿಸಿ ಅಸ್ಸಾಂ ರಾಜ್ಯದಿಂದ ಪ್ರತಿನಿಧಿಗಳು ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಸುಧಾರಿತ ಆಡಳಿತ ಮತ್ತು ಅಂಗನವಾಡಿ ಪೋಷಣ ಅಭಿಯಾನದಲ್ಲಿ ಉತ್ತಮ ಪ್ರಗತಿಯನ್ನು ಗುರುತಿಸಿ ಅಸ್ಸಾಂ ರಾಜ್ಯದಿಂದ ಪ್ರತಿನಿಧಿಗಳು ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು.ಅಸ್ಸಾಂ ರಾಜ್ಯ ಸರ್ಕಾರದ ಪ್ರತಿನಿಧಿಗಳಾಗಿ ಸಬೀತಾ ರಾಥೋಡ್, ಮಲ್ಲಿಕಾ , ಪದ್ಮಜಾ (ಸಿ ಡಿ ಪಿ ಓ cdpo) ರವರು ಶನಿವಾರ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಆಡಳಿತ ಸುಧಾರಣೆ ಮತ್ತು ಬಾಪೂಜಿ ಸೇವಾ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ವಿವರ ಮತ್ತು ಗ್ರಾಮ ಪಂಚಾಯಿತಿಯ ಅಂಗನವಾಡಿ ಕೇಂದ್ರ ಗಳಿಗೆ ಭೇಟಿ ನೀಡಿ ಪೋಷಣ ಅಭಿಯಾನದ ಸಂಬಂಧಪಟ್ಟವರಿಂದ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಇದಕ್ಕೂ ಮೊದಲು ಅಸ್ಸಾಂ ರಾಜ್ಯದಿಂದ ಪ್ರತಿನಿಧಿಗಳನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯ ರು ಹಾಗೂ ಸಿಬ್ಬಂದಿ ವರ್ಗವು ಆತ್ಮೀಯವಾಗಿ ಹೂಗುಚ್ಚ ನೀಡಿ ಬರಮಾಡಿಕೊಳ್ಳಲಾಯಿತು. .ಈ ಸಂದರ್ಭ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಐಸಮ್ಮ, ನ್ಯಾಯ ಸಮಿತಿ ಅಧ್ಯಕ್ಷರಾದ ಗಫೂರ್, ಸದಸ್ಯರಾದ ಚೆಕ್ಕೇರ ಇಸ್ಮಾಯಿಲ್, ಟಿ.ಕೆ ಯೂಸುಫ್,
ಮಾಹಿನ್ ಕನ್ನಡಿಯಂಡ ಆಯಿಷಾ, ಪಿ. ಎ ಹಫ್ಸತ್ ಕಂಬೇರ ಮತ್ತು ಸಿ ಡಿ ಪಿ ಓ (cdpo) ಸೀತಾ ಲಕ್ಶ್ಮಿ , ಗ್ರಾಮ ಪಂಚಾಯಿತಿಯ ಅಭಿವೃದ್ಧಿಅಧಿಕಾರಿ ಚಂದಕ್ಕಿ , ಕಾರ್ಯದರ್ಶಿ ಪಾರ್ವತಿ ಮತ್ತು ಸೂಪರ್ವೈಸರ್ ಶೀಲಾ , ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.