ಕುಳಗಟ್ಟೆ ದಂಪತಿ ಮೇಲೆ ಹಲ್ಲೆ: ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್

| Published : Jan 30 2025, 12:32 AM IST

ಕುಳಗಟ್ಟೆ ದಂಪತಿ ಮೇಲೆ ಹಲ್ಲೆ: ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಜಮೀನಿಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೇ, ಮಾಲೀಕರ ಕುಳಗಟ್ಟೆಯಲ್ಲಿರುವ ಮನೆ ಬಳಿಗೆ ಹೋಗಿ, ದಂಪತಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದ ನಾಲ್ವರ ವಿರುದ್ಧ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

- ತಲಾ ₹8 ಸಾವಿರದಂತೆ ₹32 ಸಾವಿರ ದಂಡ ವಿಧಿಸಿ ಆದೇಶ - - - ಹೊನ್ನಾಳಿ: ಜಮೀನಿಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೇ, ಮಾಲೀಕರ ಕುಳಗಟ್ಟೆಯಲ್ಲಿರುವ ಮನೆ ಬಳಿಗೆ ಹೋಗಿ, ದಂಪತಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದ ನಾಲ್ವರ ವಿರುದ್ಧ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಕುಳಗಟ್ಟೆ ಗ್ರಾಮದ ರಮೇಶ, ರುದ್ರಪ್ಪ, ಗಣೇಶ ಹಾಗೂ ರಾಜಪ್ಪ ಅಪರಾಧಿಗಳು. 2016ರ ಡಿಸೆಂಬರಲ್ಲಿ ಕುಳಗಟ್ಟೆ ಗ್ರಾಮದ ತಿಪ್ಪೇಶ ಮತ್ತು ರೂಪ ದಂಪತಿಯ ಜಮೀನಿಗೆ ಇದೇ ಗ್ರಾಮದ ರಮೇಶ, ರುದ್ರಪ್ಪ, ಗಣೇಶ, ರಾಜಪ್ಪ ಅಕ್ರಮ ಪ್ರವೇಶ ಮಾಡಿದರು. ಅಲ್ಲದೇ, ತೊಗರಿಕಾಯಿ ಹರಿದುಕೊಳ್ಳುತ್ತಿದ್ದರು. ಈ ಬಗ್ಗೆ ತಿಪ್ಪೇಶ ಮತ್ತು ರೂಪ ಪ್ರಶ್ನಿಸಿದ್ದಾರೆ.

ಇದರಿಂದ ಕೆರಳಿದ ನಾಲ್ವರೂ, ಅವಾಚ್ಯವಾಗಿ ನಿಂದಿಸಿದ್ದರು. ಅಲ್ಲದೆ, ಮಾರನೇ ದಿನ ತಿಪ್ಪೇಶ ಅವರ ಮನೆ ಹತ್ತಿರ ಹೋಗಿ, ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದರು. ಘಟನೆ ವಿರುದ್ಧ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್‌ ಎನ್.ಸಿ. ಕಾಡದೇವರ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶ ಎಚ್.ದೇವದಾಸ್ ಆರೋಪಿಗಳ ವಿರುದ್ಧ ಪ್ರಕರಣ ರುಜುವಾತಾದ ಕಾರಣ ಭಾರತೀಯ ದಂಡ ಸಂಹಿತೆ ಪ್ರಕಾರ ನಾಲ್ವರು ಅಪರಾಧಿಗಳಿಗೂ ತಲಾ ₹8 ಸಾವಿರದಂತೆ ಒಟ್ಟು ₹32 ಸಾವಿರ ದಂಡ ವಿಧಿಸಿ, ಅದನ್ನು ಪಿಯಾರ್ದಿಗೆ ಪರಿಹಾರ ರೂಪದಲ್ಲಿ ಪಾವತಿಸಲು ಆದೇಶಿಸಿದರು. ದಂಡದ ಹಣ ಕಟ್ಟಲು ತಪ್ಪಿದ್ದಲ್ಲಿ ಹೆಚ್ಚುವರಿ 2 ತಿಂಗಳು ಸಾದಾ ಶಿಕ್ಷೆ ಅನುಭವಿಸಲು ನ್ಯಾಯಾಲಯ ಆದೇಶ ಮಾಡಿದೆ.

ಪ್ರಕರಣದಲ್ಲಿ ಸರ್ಕಾರಿ ಸಹಾಯಕ ಆಭಿಯೋಜಕ ಕೆ.ಸಿ. ಭರತ್ ಭೀಮಯ್ಯ ದೂರುದಾರರ ಪರವಾಗಿ ವಾದ ಮಂಡಿಸಿದರು ಎಂದು ಎಪಿಪಿ ಅವರು ಮಾಹಿತಿ ನೀಡಿದ್ದಾರೆ.

- - - (ಸಾಂದರ್ಭಿಕ ಚಿತ್ರ)